Advertisement
ಸುದ್ದಿಗಳು

ರಾಷ್ಟ್ರೀಯ ರೈತ ದಿನಾಚರಣೆ ವಿಜೃಂಭಣೆ | ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ

Share

ಐಸಿಎಆರ್–ಕೆವಿಕೆ ದಕ್ಷಿಣ ಕನ್ನಡ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ, ಫುಡ್ ಚೈನ್ ಕೃಷಿ ಸಂಸ್ಥೆ, ಕೃಷಿ ಇಲಾಖೆ, ಸಮನ್ವಯ ಟ್ರಸ್ಟ್ ಹಾಗೂ ಐಎಟಿ ಸಹಯೋಗದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಅವರ ಉಪಸ್ಥಿತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀರಾಮ್ ಪ್ರಸಾದ್ (ಎಫ್‌ಕೆಸಿಸಿಐ ಉಪಾಧ್ಯಕ್ಷರು), ರೂಪಲತಾ, ಸಿ.ಎನ್. ಶಿವಪ್ರಕಾಶ್ (KAPPEC), ಎನ್.ಎಚ್. ಶಿವಶಂಕರ ರೆಡ್ಡಿ, ರೂಪ ರಾಣಿ (ಅಗ್ರಿಟೆಕ್ ಕಮಿಟಿ ಚೇರ್‌ಪರ್ಸನ್ – ಎಫ್‌ಕೆಸಿಸಿಐ), ಡಾ. ಎ.ಬಿ. ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ, ಅಬ್ದುಲ್ ಖಾದರ್ ನಡಕಟ್ಟಿನ್, ಸತ್ಯನಾರಾಯಣ ಬೇಲೇರಿ, ಅಮೈ ಮಹಾಲಿಂಗ ನಾಯ್ಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಹಿತ್ತಲಮನಿ ಮತ್ತು ಡಾ. ವಿ.ಸಿ. ರಂಗಸ್ವಾಮಿ ಅವರನ್ನು ಕೃಷಿ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.

ಇದೇ ವೇಳೆ ಯತೀಶ್ ತುಕಾರಾಂ (ಫೌಂಡರ್ & ಸಿಇಒ – ಫುಡ್ ಚೈನ್ ಕ್ಯಾಂಪೇನ್), ಪ್ರಸಾದ್ ಶೆಟ್ಟಿ (ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ, ವಿಟ್ಲ), ರಮೇಶ್ (ಮುಖ್ಯಸ್ಥರು ಹಾಗೂ ಪ್ರಧಾನ ವಿಜ್ಞಾನಿಗಳು – ಕೆವಿಕೆ ದಕ್ಷಿಣ ಕನ್ನಡ) ಮತ್ತು ಯೋಗೇಶ್ (ಐಎಟಿ) ಅವರಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಶ್ರೇಷ್ಠತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅದೇ ರೀತಿ ಎನ್‌ಆರ್‌ಎಲ್‌ಎಂ ಸಂಜೀವಿನಿ ಕೃಷಿ ಸಖಿಯರು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಮೋಹಿನಿ ವಿಶ್ವನಾಥ್ (ನಿಶಾ) ಸಹಿತ 34 ಕೃಷಿ ಸಖಿಯರನ್ನು ‘ಫಾರ್ಮರ್ಸ್ ರಿಲೇಶನ್ಸ್ ಅವಾರ್ಡ್’ಗೆ ಆಯ್ಕೆ ಮಾಡಲಾಗಿದ್ದು,  33 ಸಖಿಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕೃಷಿಕರಿಗೆ ಹಾಗೂ ಮಹಿಳೆಯರಿಗೆ ಮಾಹಿತಿ ಒದಗಿಸುವುದು, ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಸೌಲಭ್ಯಗಳನ್ನು ತಲುಪಿಸುವಲ್ಲಿ ಶ್ರಮಿಸುತ್ತಿರುವ ಕೃಷಿ ಸಖಿಯರ ಸೇವೆಯನ್ನು ಗುರುತಿಸಿ, ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಹಾಗೂ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

9 hours ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

1 day ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

2 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

2 days ago