#ನಾನುಕೃಷಿಕ | ಎಂಕಾಂ ಪದವೀಧರನಿಂದ ಕೃಷಿಯಲ್ಲಿ ಮೌಲ್ಯವರ್ಧನೆ | ಸಾಹಸ ಮಾಡಿದ ಯುವ ಕೃಷಿಕ “ಸುಹಾಸ” |

March 5, 2022
9:10 AM

ಎಂ ಕಾಂ ಪದವೀಧರ. ದೂರದ ನಗರದಲ್ಲಿ ಉದ್ಯೋಗ ಸಿಕ್ಕರೂ ಕೃಷಿಗೆ ಮರಳಿ ಸಾಹಸ ಮಾಡಿದ ಯುವ ಕೃಷಿಕ ಸುಹಾಸ. ಕೃಷಿ ವಸ್ತುಗಳ ಮೌಲ್ಯವರ್ಧನೆ, ಸಾವಯವ ಕೃಷಿಕರಿಗೆ ಪ್ರೋತ್ಸಾಹ. ಸಾವಯವ ಮಳಿಗೆಯಲ್ಲಿ ಯಶಸ್ಸು. ಇದು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಮರಿಕೆಯ ಸುಹಾಸ ಅವರ ಕಿರು ಪರಿಚಯ.

Advertisement
Advertisement
Advertisement

Advertisement

ಅನೇಕರದು ಒಂದೇ ಪ್ರಶ್ನೆ. ಸುಹಾಸ ಅವರ ಪರಿಚಯ, ಅವರ ಉದ್ಯಮದ ಪರಿಚಯದಿಂದ ನಿಮಗೇನು ಲಾಭ? ಇದು ಜಾಹೀರಾತು ರೂಪದ ಬರಹವೇ ?. ಕೃಷಿ ಕ್ಷೇತ್ರ ಬೆಳವಣಿಗೆಗೆ ವಿದ್ಯಾವಂತ ಯುವಕರು ಮರಳಬೇಕು ಎನ್ನುವುದು  ಈಗಿನ ನಿರೀಕ್ಷೆ. ಇದರ ಜೊತೆಗೆ ವಿದ್ಯಾವಂತ ಕೃಷಿಕ ಕೃಷಿ ಸಂಬಂಧಿತ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿರುವುದು  ಕೂಡಾ ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕ. ಈ ಕಾರಣದಿಂದ ಸುಹಾಸ ಮರಿಕೆ ಅವರು ಕೃಷಿ ಕ್ಷೇತ್ರದ ಬೆಳವಣಿಗೆಯ ಒಂದು ಕೊಂಡಿ. ಇಂದು ಯಶಸ್ವಿ ಕೃಷಿಕ ಯುವ ಉದ್ಯಮಿ. ಇಂತಹ ಉದ್ಯಮಿಗಳ ಪರಿಚಯ ರೂರಲ್‌ ಮಿರರ್‌ ಮಾಡುತ್ತಿದೆ.

Advertisement

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಾವಯವ ಕೃಷಿಕ ಎಪಿ ಸದಾಶಿವ ಮರಿಕೆ ಅವರ ಪುತ್ರ ಎಪಿ ಸುಹಾಸ್ ಮರಿಕೆ ರಾಸಾಯನಿಕ ಮುಕ್ತವಾದ ಐಸ್ ಕ್ರೀಮ್ ಗಳನ್ನು ತಯಾರಿಕೆ ಹಾಗೂ ಪುತ್ತೂರಿನಲ್ಲಿ ಸಾವಯವ ಮಳಿಗೆ ನಡೆಸುತ್ತಿದ್ದಾರೆ.  ರಾಮಕೃಷ್ಣ ವಿದ್ಯಾಮಂದಿರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಸುಹಾಸ್ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಕಾಂ ಜೊತೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ  ಪದವಿಯನ್ನು ಪಡೆದು  ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಎಂಕಾಂ ಸ್ನಾತಕೋತರ ಪದವಿ ಪಡೆದು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಾವಕಾಶ ದೊರೆತರೂ ಆ ಕಡೆಯ ಬಸ್ಸು ಏರದೆ ಕೃಷಿಗೆ ಮರಳಿದವರು. ಅವರ ತಂದೆ ಸದಾಶಿವ ಮರಿಕೆ ಅವರೂ ಪದವಿ ಬಳಿಕ ಕೃಷಿಗೆ ಮರಳಿ ಸಾವಯವ ಕೃಷಿಯಲ್ಲಿ  ತೊಡಗಿಸಿಕೊಂಡವರು. ಹೀಗಾಗಿ ಸುಹಾಸ್‌ ಕೂಡಾ ಅದೇ ಹಾದಿಯಲ್ಲಿ  ನಡೆದರು. ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ಸುಹಾಸ್ ಅವರಿಗೆ ಕಾಲೇಜು ದಿನಗಳಿಂದಲೇ ಕೃಷಿಯಲ್ಲಿ ಮೌಲ್ಯವರ್ಧನೆಯ ಕನಸು ಮೂಡಿತ್ತು.

ಕಾಲೇಜು ವಿದ್ಯಾಭ್ಯಾಸದ ಬಳಿಕ  ಸುಹಾಸ್ ಸಂಬಂಧಿ ವಸಂತ ಕಜೆ ಅವರು ಹೋಂ ಮೇಡ್ ಐಸ್ ಕ್ರೀಮ್ ತಯಾರಿಸಿ ಮನೆ ಬಳಕೆಗೆ ಉಪಯೋಗ ಮಾಡುತ್ತಿದ್ದರು. ಅವರಿಗೆ ಇದನ್ನು ಉದ್ಯಮ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಆ   ಉಪಕರಣಗಳಿಂದಲೇ ಐಸ್‌ ಕ್ರೀಂ ತಯಾರಿಕೆಯ ಬಗ್ಗೆ ಆಸಕ್ತಿ ತೋರಿದರು.ಇದೇ ಸಮಯದಲ್ಲಿ ಸಾವಯವ ಉತ್ಪನ್ನಗಳ ಮಾರಾಟದ ಕಡೆಗೂ ಮನಸ್ಸು ಮಾಡಿದರು. ಯಾವುದೇ ರಾಸಾಯನಿಕ ಬಳಸದೆ ಐಸ್‌ ಕ್ರೀಂ ತಯಾರಿಕೆ ಕಡೆಗೆ ಆದ್ಯತೆ ನೀಡಿ ತಮ್ಮದೇ ತೋಟದಲ್ಲಿ ಸಾವಯವ ಮಾದರಿಯಲ್ಲಿ ಬೆಳೆದ ಹಣ್ಣುಗಳನ್ನು ಬಳಸಿಕೊಂಡು ಐಸ್‌ ಕ್ರೀಂ ತಯಾರಿಸಿ ಯಶಸ್ಸು ಕಂಡು ಉದ್ಯಮ ವಿಸ್ತರಿಸಿದರು. ಆರಂಭದಲ್ಲಿ ತಾವು ತಯಾರಿಸಿದ ಐಸ್ ಕ್ರೀಮ್ ಚಿತ್ರಗಳನ್ನು ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಪುತ್ತೂರಿನ ಜನತೆ ರಾಸಾಯನಿಕ ಮುಕ್ತ ಐಸ್ಕ್ರೀಂ ತಮಗೂ ಬೇಕೆಂದು ಬೇಡಿಕೆ ಸಲ್ಲಿಸುತ್ತಿದ್ದರು.

Advertisement

ಇದರ ಜೊತೆಗೇ ಪುತ್ತೂರಿನಲ್ಲಿ ಸಾವಯವ ಮಳಿಗೆ ಆರಂಭ ಮಾಡಿದರು.  2018 ರಲ್ಲಿ ಮರಿಕೆ ಮಾಧುರ್ಯ ಎಂಬ ತಮ್ಮದೇ ಐಸ್ಕ್ರೀಮ್ ಕಂಪನಿಯೊಂದನ್ನು ಪ್ರಾರಂಭಿಸಿದರು.  ಸಮಾರಂಭಗಳಿಗೆ, ವಿವಿಧ ಸಾವಯವ ಮೇಳಗಳಲ್ಲಿ ತಮ್ಮ ಐಸ್ಕ್ರೀಂ ಮಳಿಗೆಯನ್ನು ತೆರೆದರು. ಸಾವಯವ ಮಳಿಗೆ  ಪ್ರಾರಂಭದ  ಮುನ್ನ  ಕರ್ನಾಟಕ ಸಾವಯವ ಕೃಷಿ ಪರಿವಾರದ ಸದಸ್ಯ, ಸಾವಯವ ಕೃಷಿಯ ಇನ್ನೊಬ್ಬ ಪ್ರಮುಖ ಕೃಷಿಕ ಶಿವಸುಬ್ರಹ್ಮಣ್ಯ ಪೆಲತ್ತಡ್ಕ ಅವರೊಂದಿಗೆ ಕರ್ನಾಟಕದ ವಿವಿದೆಡೆ ಭೇಟಿ ನೀಡಿ ಸಾವಯವ ಕೃಷಿ ಖಾತ್ರಿ ಪಡಿಸಿಕೊಂಡು ಅಂತಹ ರೈತರಿಂದ ಉತ್ಪನ್ನ ಖರೀದಿ ಮಾಡಿದರು. ಇದರೊಂದಿಗೆ ರಾಮಚಂದ್ರಾಪುರ ಮಠದ ಗ್ರಾಮರಾಜ್ಯದ ಪುತ್ತೂರು ಭಾಗದ ಅಧಿಕೃತ ಮಾರಾಟಗಾರರಾಗಿಯೂ ಉದ್ಯಮ ವಿಸ್ತರಿಸಿದರು. ಈಗ ಪ್ರತೀ ವಾರ ಸಾವಯವ ತರಕಾರಿ ಸಂತೆ ಆರಂಭ ನಡೆಸುತ್ತಿದ್ದಾರೆ. ವಾಟ್ಸಪ್‌ ಗ್ರೂಪ್‌ ಮೂಲಕ ತರಕಾರಿ ಹಾಗೂ ಸಾವಯವ ವಸ್ತುಗಳ ಬಗ್ಗೆ ಮಾಹಿತಿ ನೀಡುತ್ತಾ ಆನ್‌ ಲೈನ್‌ ಮೂಲಕ ಗ್ರಾಹಕರಿಗೆ ಮಾಹಿತಿ ನೀಡುತ್ತಾರೆ. ಅದೇ ವೇಳೆ ಸಾವಯವ ಕೃಷಿಕರಿಂದ ಉತ್ತಮ ಧಾರಣೆ ನೀಡಿ ವಸ್ತುಗಳ ಖರೀದಿ ಮಾಡುತ್ತಾರೆ. ಈ ಮೂಲಕ ಕೃಷಿಕರಿಗೂ ನೆರವಾಗುತ್ತಿದ್ದಾರೆ, ಗ್ರಾಹಕರಿಗೂ ಉತ್ತಮ ಸೇವೆ ನೀಡುತ್ತಿದ್ದಾರೆ.

ಇವರ ಈ ಎಲ್ಲಾ ಕಾರ್ಯದಲ್ಲಿ  ಸುಹಾಸ್ ಅವರ ಪತ್ನಿ ಮಾನಸ ನೆರವಾಗುತ್ತಿದ್ದಾರೆ. ಯೋಗದಲ್ಲಿ ಉನ್ನತ ಪದವಿಯನ್ನು ಪಡೆದು ಮರಿಕೆ ಮಾಧುರ್ಯ ಐಸ್ ಕ್ರೀಮ್ ಫ್ಯಾಕ್ಟರಿಯ ಹೆಗಲೆಣೆಯಾಗಿದ್ದಾರೆ. ಸುಹಾಸ್‌ ಅವರ ತಂದೆ ಸದಾಶಿವ ಮರಿಕೆ ಹಾಗೂ ತಾಯಿ ಉಮಾಶಂಕರಿ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮನೆಯು ಮತ್ತೊಮ್ಮೆ ಮೊದಲ ಪಾಠಶಾಲೆಯಾಗಲಿ
November 20, 2024
8:49 PM
by: ಡಾ.ಚಂದ್ರಶೇಖರ ದಾಮ್ಲೆ
ಭತ್ತ ಬೆಳೆಸುವ ಪ್ರಯೋಗ, ಅಕ್ಕಿ ತಯಾರಿಸುವ ಪ್ರಕ್ರಿಯೆ
November 13, 2024
9:43 PM
by: ಡಾ.ಚಂದ್ರಶೇಖರ ದಾಮ್ಲೆ
ಕೃಷಿ ಕಾರ್ಮಿಕರ ಸಮಸ್ಯೆ ನಿವಾರಣೆಗೆ ತಂತ್ರಜ್ಞಾನದ ಬಳಕೆಯೇ ಪರಿಹಾರ |
November 13, 2024
8:47 PM
by: ವಿಶೇಷ ಪ್ರತಿನಿಧಿ
ಪಿಎಂಶ್ರೀ ಯೋಜನೆ | ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಸರ್ಕಾರಿ ಶಾಲೆಯಲ್ಲಿ |
November 8, 2024
10:12 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror