ಮೆದುಳು ನಿಷ್ಕ್ರಿಯಗೊಂಡ ಯುವತಿ ರಕ್ಷಿತಾಳ ಅಂಗಾಗ ದಾನ ಮಾಡಿದ ಪೋಷಕರು | ಚಿಕ್ಕಮಗಳೂರು ಆಸ್ಪತ್ರೆಯಿಂದ ಹೃದಯ ಬೆಂಗಳೂರಿಗೆ ಏರ್ ಲಿಫ್ಟ್ | 9 ಜನರಿಗೆ ಅಂಗಾಂಗ ಕಸಿ |

Advertisement

ಬಸ್ಸಿಂದ ಕೆಳಗೆ ಬಿದ್ದು ಮೆದುಳು ನಿಷ್ಕ್ರಿಯಗೊಂಡ  ಚಿಕ್ಕಮಗಳೂರಿನ ಕಾಲೇಜು ವಿದ್ಯಾರ್ಥಿನಿ ರಕ್ಷಿತಾಳ ಅಂಗಾಗ ದಾನ(Organ Donation) ಮಾಡಲು ಪೋಷಕರು ನಿರ್ಧರಿಸಿದ್ದರು. ಇದೀಗ ಗುರುವಾರ ರಕ್ಷಿತಾಳ ಹೃದಯ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಿಂದ ಬೆಂಗಳೂರಿಗೆ ಏರ್​ಲಿಫ್ಟ್ ಮಾಡಲಾಯಿತು. ಯುವತಿಯ 9 ಅಂಗಗಳನ್ನು ಪೋಷಕರು ದಾನ ಮಾಡಿದ್ದು, ಒಂಭತ್ತು ಜನರಿಗೆ ಅಂಗಾಂಗ ಕಸಿ ಮಾಡಲಾಗುತ್ತದೆ.

Advertisement

ಹೃದಯ, ಶ್ವಾಸಕೋಶ, ಕಿಡ್ನಿ, ಯಕೃತ್ತು, ಕಣ್ಣುಗಳನ್ನು ಹೆಲಿಕಾಪ್ಟರ್ ಒಂದರಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋದರೆ , ಕಿಡ್ನಿಗಳನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ರವಾನೆ ಮಾಡಲಾಗಿದೆ. ಚಿಕ್ಕಮಗಳೂರಿನಿಂದ ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಉಜಿರೆ, ಬೆಳ್ತಂಗಡಿ ಮಾರ್ಗವಾಗಿ ಮಂಗಳೂರು ತಲುಪಲಿದೆ.

Advertisement
Advertisement
Advertisement

ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿತನಕ್ಕೆ ಯುವತಿ ರಕ್ಷಿತಾ ಬಸ್​ನಿಂದ ಕೆಳಗೆ ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು.ರಕ್ಷಿತಾ ಕಡೂರು ತಾಲೂಕಿನ ಸೋಮನಹಳ್ಳಿಯ ತಾಂಡಾದ ರಕ್ಷಿತಾ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರು ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಶೇಖರ್ ನಾಯ್ಕ್ ಹಾಗೂ ಲಕ್ಷ್ಮಿ ದಂಪತಿಯ ಪುತ್ರಿ.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮೆದುಳು ನಿಷ್ಕ್ರಿಯಗೊಂಡ ಯುವತಿ ರಕ್ಷಿತಾಳ ಅಂಗಾಗ ದಾನ ಮಾಡಿದ ಪೋಷಕರು | ಚಿಕ್ಕಮಗಳೂರು ಆಸ್ಪತ್ರೆಯಿಂದ ಹೃದಯ ಬೆಂಗಳೂರಿಗೆ ಏರ್ ಲಿಫ್ಟ್ | 9 ಜನರಿಗೆ ಅಂಗಾಂಗ ಕಸಿ |"

Leave a comment

Your email address will not be published.


*