ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

December 17, 2025
7:06 AM

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ. ಮಳೆಗಾಲ ಬಂದರೆ ಸಾಕು ತೋಟಕ್ಕೆ ಗಾಡಿ ಅಂದರೆ ಟ್ರಾಕ್ಟರ್ ಹೋಗಲು ಸಾಧ್ಯವಿಲ್ಲದೆ ಸಂಕಟ ಪಡಬೇಕಾಗುತ್ತದೆ.  ಈಗ ಈ ಎಲ್ಲಾ ಸಮಸ್ಯೆಗಳಿಗೂ ರಾಜ್ಯ ಸರ್ಕಾರವೂ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಮತ್ತು ರಾಜ್ಯ ಸರ್ಕಾರ ಅನುದಾನ ಸೇರಿ ನಮ್ಮ ಹೊಲ- ನಮ್ಮ ದಾರಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಪ್ರತಿ 1 ಕಿ.ಮಿ ರಸ್ತೆ ನಿರ್ಮಾಣಕ್ಕೆ ಸರ್ಕಾರ ಒಟ್ಟು ರೂ 12.50 ಲಕ್ಷ ಖರ್ಚು ಮಾಡಲಾಗುತ್ತದೆ. ಕನಿಷ್ಠ3.75 ಮೀಟರ್ ಆಗಲದ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಲಾರಿ, ಟ್ರ್ಯಾಕ್ಟರ್ ಸುಲಭವಾಗಿ ಹೊಲಕ್ಕೆ ಹೋಗಬಹುದು.

ಆದರೆ, ಈ ಯೋಜನೆಯನ್ನು ಆಯಾ ರೈತನ ಜಮೀನಿನಲ್ಲೇ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ದಾರಿಗಾಗಿ ಜಮೀನು ನೀಡುವ ರೈತನಿಗೆ ಸರ್ಕಾರದಿಂದ ಯಾವುದೇ ಹಣ ಸಿಗುವುದಿಲ್ಲ. ಆತ ಸ್ವ ಇಚ್ಛೆಯಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿತ ದಾನ ಪತ್ರ ಮೂಲಕ ಜಾಗವನ್ನು ಗ್ರಾಮ ಪಂಚಾಯಿತಿ ಹೆಸರಿಗೆ ಬರೆದುಕೊಡಬೇಕು.  ಅರ್ಜಿ ಯನ್ನು ಸಲ್ಲಿಸಲು ಪಂಚಾಯಿತಿಗೆ ಹೋಗಬೇಕು ವಿನಾಃ ಯಾವುದೇ ಆನ್ ಲೈನ್ ನಿಯಮವಿಲ್ಲ. ಈ ಯೋಜನೆಯನ್ನು ಜಾರಿಗೊಳಿಸಲು ನೀವೇ ಸ್ವತಃ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಬೇಕಾಗುತ್ತದೆ.

ಬೇಕಾಗುವ ದಾಖಲೆಗಳು:
• ರೈತರ ಅರ್ಜಿ
• ಪಹಣಿ
• ಗ್ರಾಮ ನಕ್ಷೆ
• ಆಧಾರ್ ಕಾರ್ಡ್

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!
April 5, 2026
1:27 PM
by: ಸಾಯಿಶೇಖರ್ ಕರಿಕಳ
ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror