ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.. ಇದು ರೂಢಿಯಲ್ಲಿ ಬಂದ ಹಳೇ ಗಾದೆ ಮಾತು. ಅದು ಸತ್ಯ ಕೂಡ. ಕೆಲವು ಬಾರಿ ನಾವು ಆಡುವ ಮಾತುಗಳು ನಮಗೆ ಮುಳುವಾಗುತ್ತವೆ. ಅದರಿಂದ ನಾವೇ ಪಶ್ಚತಾಪ ಪಡುವ ಸಂಗತಿಗಳು ಎದುರಾಗುತ್ತದೆ. ಮಹಾಭಾರತದಲ್ಲಿ ದ್ರೌಪದಿ ಆಡಿದ ಮಾತುಗಳು, ಮಾಡಿದ ಅವಮಾನಗಳು, ತಪ್ಪು ನಿರ್ಧಾರಗಳಿಂದ ಅದೆಂತ ಕೆಟ್ಟ ಘಟನೆಗಳಿಗೆ ಸಾಕ್ಷಿಯಾಯ್ತು ಅನ್ನೋದು ನಮಗೆ ತಿಳಿದಿದೆ. ಅದೊಂದು ಘಟನೆ ಇಲ್ಲಿದೆ….
ಕೃಷ್ಣ ಪರಮಾತ್ಮ ದ್ರೌಪದಿಗೆ ತನ್ನ ತಪ್ಪಿನ ಬಗ್ಗೆ ಎಷ್ಟು ನಿಖರವಾಗಿ ತನ್ನ ಮಾತುಗಳಲ್ಲಿ ಅವಳಿಗೆ ವಿವರಿಸುತ್ತಾನೆ ನೋಡಿ.
ಮಹಾಭಾರತ ಯುದ್ಧ ಮುಗಿದಿತ್ತು. 18 ದಿನಗಳ ಯುದ್ಧ ದ್ರೌಪತಿಯನ್ನು 80 ನೇ ವಯಸ್ಸಿನವರೆಗೂ ಕೊಂಡೊಯ್ದಿತ್ತು. ಮಾನಸಿಕ ಮತ್ತು ದೈಹಿಕ ರೂಪದಲ್ಲಿ.
ಊರಲ್ಲಿ ಎಲ್ಲಿ ನೋಡಿದರಲ್ಲಿ ವಿಧವೆಯರೇ ಕಾಣಿಸುತ್ತಿದ್ದರು. ಕೈ ಕಾಲು ಮುರಿದುಕೊಂಡು ಅಂಗವೈಕಲ್ಯಗೊಂಡ ಪುರುಷರು. ಅನಾಥ ಮಕ್ಕಳು ಓಡಾಡುತ್ತಿದ್ದರು. ಸ್ಮಶಾನ ಮೌನಗೊಂಡಿತ್ತು ನಂದನವನದಂತಿದ್ದ ಹಸ್ತಿನಾಪುರ.
ರಾಣಿ ದ್ರೌಪತಿ ಶೂನ್ಯಮನಸ್ಕಳಾಗಿ ತದೇಕ ಚಿತ್ತದಿಂದ ಗೋಡೆಯನ್ನು ನೋಡುತ್ತಾ ಕುಳಿತಿದ್ದಳು. ಶ್ರೀ ಕೃಷ್ಣ ಪರಮಾತ್ಮ ಅಲ್ಲಿಗೆ ಬಂದ. ದ್ರೌಪತಿ ಓಡಿ ಹೋಗಿ ಕೃಷ್ಣನನ್ನು ತಬ್ಬಿಕೊಳ್ಳುತ್ತಾಳೆ ಮತ್ತು ಅಳಲು ಪ್ರಾರಂಭಿಸುತ್ತಾಳೆ. ಕೃಷ್ಣ ದ್ರೌಪದಿಯ ತಲೆಯನ್ನು ಸವರುತ್ತಾನೆ. ಮತ್ತು ಸಮೀಪದ ಪಲ್ಲಂಗದ ಮೇಲೆ ಕೂರಿಸುತ್ತಾನೆ.
ದ್ರೌಪದಿ: ಕೃಷ್ಣ ಏನಿದೆಲ್ಲ? ಹೀಗೆಲ್ಲ ಆಗುತ್ತೆ ಅಂತ ನಾನು ಅಂದುಕೊಂಡೇ ಇರಲಿಲ್ಲ.
ಕೃಷ್ಣ: ಕರ್ತವ್ಯ ಮತ್ತು ನಿಯತ್ತು ಬಹು ಕ್ರೂರಿ ಪಾಂಚಾಲಿ, ಅದು ನಾವು ಯೋಚಿಸಿಯಂತೆ ಇರುವುದಿಲ್ಲ. ನಮ್ಮ ಕರ್ಮಗಳನ್ನು ಪರಿಣಾಮಗಳಲ್ಲಿ ಬದಲಿಸಿಬಿಡುತ್ತದೆ….. ನೀನು ಸೇಡು ತೀರಿಸಿಕೊಳ್ಳಬೇಕು ಅಂದುಕೊಂಡಿದ್ದೆ, ನಿನ್ನ ಸೇಡು ತೀರಿತು ದುಶ್ಯಾಸನ ದುರ್ಯೋಧನರಷ್ಟೇ ಅಲ್ಲ, ಇಡೀ ಕೌರವ ವಂಶವೇ ನಿರ್ವಂಶವಾಯ್ತು. ಇದು ನೀನು ಖುಷಿ ಪಡುವ ವಿಚಾರ. ಯಾಕೆ …ನಿನಗೆ ಆನಂದವಾಗುತ್ತಿಲ್ಲವೇ?
ದ್ರೌಪತಿ: ಕೃಷ್ಣಾ….ನೀನು ನನ್ನ ದುಃಖವನ್ನು ಒರಿಸಲು ಬಂದಿರುವೆಯ ಅಥವಾ ನನ್ನ ಗಾಯಗಳ ಮೇಲೆ ಉಪ್ಪು ಸುರಿಯಲು ಬಂದಿರುವೆಯಾ?
ಕೃಷ್ಣ: ಇಲ್ಲ ದ್ರೌಪತಿ, ನಾನು ವಾಸ್ತವಿಕತೆಯನ್ನು ಅರ್ಥೈಸಲು ಬಂದಿದ್ದೇನೆ. ನಮ್ಮ ಕರ್ಮದ ಫಲಗಳ ಪರಿಣಾಮಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅವು ಹತ್ತಿರವಾದಾಗ ನಮ್ಮ ಕೈಯಲ್ಲಿ ಏನೂ ಇರುವುದಿಲ್ಲ.
ದ್ರೌಪತಿ: ಅಂದರೆ ……ಇದಕ್ಕೆಲ್ಲ ನಾನೇ ಕಾರಣನಾ ಕೃಷ್ಣ?
ಕೃಷ್ಣ: ಇಲ್ಲ ದ್ರೌಪತಿ…ನಿನ್ನನ್ನು ನೀನು ಇಷ್ಟೊಂದು ಮಹತ್ವಪೂರ್ಣಳು ಎಂದು ತಿಳಿದುಕೊಳ್ಳಬೇಡ, ಆದರೆ ನೀನು ನಿನ್ನ ಕರ್ಮಗಳಲ್ಲಿ ಕಿಂಚಿತ್ತಾದರೂ ದೂರದೃಷ್ಟಿ ಇಟ್ಟಿದ್ದಿದ್ದರೆ ಇಂದು ನೀನು ದುಃಖಿಸುವ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ದ್ರೌಪತಿ: ???????
ಕೃಷ್ಣ: ಅಂದು ಸ್ವಯಂವರದಲ್ಲಿ ಕರ್ಣನಿಗೆ ನೀನು ಅವಮಾನಿಸದೇ ಇದ್ದಿದ್ದರೆ, ಭಾಗವಹಿಸಲು ಅವಕಾಶ ಕೊಟ್ಟಿದ್ದರೆ ಅದರ ಪರಿಣಾಮ ಬೇರೆನೇ ಇರುತ್ತಿತ್ತು. ನಂತರ ಕುಂತಿಮಾತಾ ನಿನಗೆ ಐದೂ ಪಾಂಡವರನ್ನು ವಿವಾಹವಾಗಲು ಆಹ್ವಾನಿಸಿದಾಗ ನೀನು ತಿರಸ್ಕರಿಸಿದ್ದರೆ ಅದರ ಪರಿಣಾಮವೂ ಇಂದು ಬೇರೆನೇ ಇರುತ್ತಿತ್ತು. ನಂತರ ನಿನ್ನ ಮಹಲಿನಲ್ಲಿ ದುರ್ಯೋಧನನಿಗೆ ಅವಮಾನ ಮಾಡಿರದೆ ಇದ್ದಿದ್ದರೆ. ನಿನ್ನ ವಸ್ತ್ರಾಪಹರಣವೇ ಆಗುತ್ತಿರಲಿಲ್ಲ. ಆಗಲೂ ಪರಿಸ್ಥಿತಿ ಬೇರೆನೇ ಆಗುತ್ತಿತ್ತು. ನಮ್ಮ ಶಬ್ದಗಳು ಸಹ ನಮ್ಮ ಕರ್ಮ ಗಳಾಗಿರುತ್ತವೆ ದ್ರೌಪದಿ.
ನಾವು ಶಬ್ದಗಳನ್ನು ಆಡುವ ಮುಂಚೆ ಅವುಗಳನ್ನು ಅಳತೆಮಾಡಬೇಕಾಗುತ್ತದೆ. ಇಲ್ಲವಾದರೆ ಅದರ ದುಷ್ಪರಿಣಾಮವನ್ನು ನಾವು ಮಾತ್ರ ಅಲ್ಲ, ನಮ್ಮ ಸುತ್ತಮುತ್ತಲಿನ ವಾತಾವರಣವೂ ಅನುಭವಿಸಬೇಕಾಗುತ್ತದೆ.
ಎಲ್ಲಾ ಜೀವರಾಶಿಗಳಲ್ಲಿ ಮನುಷ್ಯ ಏಕಮಾತ್ರ ಜೀವಿಯ ವಿಷ ಹಲ್ಲಿನಲ್ಲಿ ಇರಲ್ಲ, ಬದಲಾಗಿ ಆತನ ಶಬ್ದಗಳಲ್ಲಿ ಇರುತ್ತದೆ.
ಅದಕ್ಕಾಗಿಯೇ ನಾವು ಆಡುವ ಶಬ್ದಗಳು ಇತರರಿಗೆ ನಾಟದಂತೆ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಆಡಬೇಕು. ಅಂತಹ ಶಬ್ದಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಆಗ ಜೀವನ ಚರಿತಾರ್ಥವಾಗಿರುತ್ತದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…