MIRROR FOCUS

ಅಸ್ಸಾಂನಲ್ಲಿ ವಶಪಡಿಸಿಕೊಂಡ 60,000 ಕೆಜಿಗೂ ಹೆಚ್ಚು ಅಡಿಕೆಯ ಒಡೆಯರು ಯಾರು…? | ಅಧಿಕಾರಿಗಳಿಗೆ ತಲೆನೋವಾದ ಅಡಿಕೆ…! |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬರ್ಮಾ ಅಡಿಕೆಯು ಕಳ್ಳದಾರಿಯ ಮೂಲಕ ಭಾರತದೊಳಕ್ಕೆ ಪ್ರವೇಶವಾಗುತ್ತಲೇ ಇದೆ. ಕಳೆದ ಕೆಲವು ಸಮಯಗಳಿಂದ ಈ ಮಾದರಿ ಅಕ್ರಮ ಅಡಿಕೆ ತಡೆಗೆ ಇಲಾಖೆಗಳು ಪ್ರಯತ್ನ ಮಾಡುತ್ತಿವೆ. ಅಸ್ಸಾಂ ಗಡಿಭದ್ರತಾ ಪಡೆ ಅಕ್ರಮವಾಗಿ ಅಡಿಕೆ ಸಾಗಾಟವನ್ನು ತಡೆಯುತ್ತಿದೆ. ಇದೀಗ ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 60,000 ಕೆಜಿಗೂ ಹೆಚ್ಚು ಅಡಿಕೆಯು ಈಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸದ್ಯ ವಶಪಡಿಸಿಕೊಂಡ ಅಡಿಕೆಯ ಸೂಕ್ತ ದಾಖಲೆಗಳನ್ನು ನೀಡಿ ಸರಕುಗಳನ್ನು ಬಿಡಿಸಿಕೊಳ್ಳಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ…!. ಹಾಗಿದ್ದರೆ ಈ ಅಡಿಕೆಯ ಒಡೆಯರು ಯಾರು..?………ಮುಂದೆ ಓದಿ……..

Advertisement
Advertisement

ಅಸ್ಸಾಂನ ಲಖಿಪುರ ಪೊಲೀಸ್ ಠಾಣೆ ವಶಪಡಿಸಿಕೊಂಡ ಅಡಿಕೆಯು ಬೃಹತ್ ಸಂಗ್ರಹವಾಗಿದೆ. ದಾಸ್ತಾನುಗಳು ಹೆಚ್ಚುತ್ತಿದೆ. ಯಾವುದೇ ಮಾಲೀಕರು ತಮ್ಮ ಜಮೀನು ಹಾಗೂ ಸೂಕ್ತ ದಾಖಲೆಗಳನ್ನು ನೀಡಿ ವಶಪಡಿಸಿಕೊಂಡ ಅಡಿಕೆಯನ್ನು ಹಿಂಪಡೆಯಬೇಕಿತ್ತು, ಆದರೆ ಯಾರೊಬ್ಬರೂ ದಾಖಲೆ ನೀಡಲು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರತ್ಯೇಕ ಕಾರ್ಯಾಚರಣೆಗಳ ಪರಿಣಾಮವಾಗಿ 60,420 ಕೆಜಿ ಅಡಿಕೆಯನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು.  ಇವುಗಳ ಕಾನೂನುಬದ್ಧ ಮಾಲೀಕರನ್ನು ಪತ್ತೆಹಚ್ಚಲು ಪದೇ ಪದೇ ಪ್ರಯತ್ನಿಸಿದರೂ ಯಾರೊಬ್ಬರೂ ದಾಖಲೆ ನೀಡಲು ಬಂದಿಲ್ಲ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಅಡಿಕೆಯು ಉಳಿದುಕೊಳ್ಳಲು ಕಾರಣವೇನು..? ಅಡಿಕೆ ಸಾಗಾಟದ ಬಗ್ಗೆ ದಾಖಲೆ ನೀಡದೆ ಇರಲು ಕಾರಣವೇನು..? ಹೀಗಾಗಿ ಈ ವಶಪಡಿಸಿಕೊಂಡ ಸರಕುಗಳು ಅಕ್ರಮ ವ್ಯಾಪಾರಕ್ಕೆ ಸಂಬಂಧಿಸಿವೆಯೇ ಎಂದು ಅಧಿಕಾರಿಗಳು ಸಂದೇಹಪಟ್ಟಿದ್ದಾರೆ ಅಲ್ಲದೆ,  ಈಗಾಗಲೇ ಅಡಿಕೆಯ ಬಗ್ಗೆ ಇರುವ ಊಹಾಪೋಹಗಳಿಗೆ  ಈ ಅಂಶವು ಪುಷ್ಟಿ ನೀಡುತ್ತಿದೆ ಎಂದು ಅಧಿಕಾರಿ ಹೇಳಿದರು. ಒಂದು ವೇಳೆ  ಮುಟ್ಟುಗೋಲು ಹಾಕಿಕೊಂಡ ಸರಕುಗಳ ಸರಿಯಾದ ಮಾಲೀಕತ್ವವನ್ನು ಯಾರೊಬ್ಬರೂ ಸಲ್ಲಿಸದೇ  ಇದ್ದರೆ ಅಡಿಕೆಯನ್ನು ಮುಂದಿನ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಪಿಟಿಐ)

Over 60,000 kgs of unclaimed Arecanuts, which have been seized during separate operations, in Lakhipur police station in Assam’s Cachar district has emerged as a problem for the local authorities, as no one has come forward to claim the goods, a senior officer said.

Advertisement
/**/
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಆಷಾಢ ಶುಕ್ರವಾರ, ಈ ಸ್ಥಳದಲ್ಲಿ ಈ ರಾಶಿಯವರು ಯಾವುದಾದರೂ ದೇವಿಯ ದೇವಸ್ಥಾನದಲ್ಲಿ ಹಿಟ್ಟಿನ ದೀಪ ಹಚ್ಚಿಡಿ..

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 minutes ago

ಹೊಸರುಚಿ | ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್

ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್ :   ಬೇಕಾಗುವ ಸಾಮಗ್ರಿಗಳು  ಮತ್ತು ಮಾಡುವ…

15 minutes ago

ಪರಿಸರ ವಿಚಾರದಲ್ಲಿ ಸರ್ಕಾರದ ಬೇಜವಾಬ್ದಾರಿ..! ಇಲ್ಲಿದೆ ಅಭಿಪ್ರಾಯ..

ಪರಿಸರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸರ್ಕಾರ ಬೇಜಾವಾಬ್ದಾರಿ ತೋರಿದೆ ಎಂದು ಲೇಖಕ ಅರವಿಂದ್‌…

7 hours ago

ಬೆಂಗಳೂರು-ಕಣ್ಣೂರು ರೈಲು ವಿಳಂಬ | ಸಕಾಲಿಕ ಸೇವೆಗೆ ಪ್ರಯಾಣಿಕರ ಒತ್ತಾಯ

ಕಣ್ಣೂರು-ಬೆಂಗಳೂರು ರೈಲು ತಡವಾಗಿ ಆಗಮಿಸುತ್ತಿದ್ದು ರೈಲು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಇಲಾಖೆ…

8 hours ago

ಶುರುವಾಯಿತು ಕಡಲುಕೊರೆತ..!

ಉಳ್ಳಾಲ ಪ್ರದೇಶದಲ್ಲಿ ಈ ಬಾರಿಯೂ ಕಡಲುಕೊರೆತ ಆರಂಭವಾಗಿದೆ. ಈ ಪ್ರದೇಶಕ್ಕೆ  ವಿಧಾನಸಭಾ ಸ್ಪೀಕರ್‌…

8 hours ago

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ  ಜನಜಾಗೃತಿ ಮೂಡಿಸುವ  ವಿನೂತನ ಪ್ರಯತ್ನ

ಅರಣ್ಯ ನಾಶ, ಗಣಿಗಾರಿಕೆ ಸೇರಿದಂತೆ ಹಲವು ಸವಾಲುಗಳ ಮೂಲಕ  ಆತಂಕದ  ಭವಿಷ್ಯವನ್ನು ಎದುರಿಸುತ್ತಿರುವ…

10 hours ago