ದಿನದಿಂದ ದಿನಕ್ಕೆ ಬದಲಾಗುತ್ತಿರುವ ಈ ಆಧುನಿಕ ಜೀವನ ಶೈಲಿಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಬಹುದು. ಅತಿಯಾದ ಕೆಲಸದ ಒತ್ತಡ ಹಾಗೂ ಅನಿಮಿಯಿತ, ಅಸಮತೋಲನ ಆಹಾರ ಕ್ರಮವು ಅತಿ ಬೊಜ್ಜಿನ ಸಮಸ್ಯೆಗೆ ಒಂದು ಮೂಲ ಕಾರಣವಾಗಿದೆ.
ಅತಿಯಾದ ದೇಹ ತೂಕಕ್ಕೆ ಕಾರಣಗಳು: ಅತಿಯಾದ ಕೊಬ್ಬಿನ ಆಹಾರ ಸೇವನೆ, ಹಾರ್ಮೋನ್#Harmon ವ್ಯತ್ಯಾಸ #pcos, #Thyroid diseases ), ವ್ಯಾಯಾಮ, ವಾಕಿಂಗ್ ಮಾಡದೇ ಇರುವುದು, ಮಾನಸಿಕ ಒತ್ತಡ ಇತ್ಯಾದಿ.
ಆಯುರ್ವೇದ ಶಾಸ್ತ್ರವು ಆರೋಗ್ಯಕರ ಆಹಾರ ವಿಹಾರ, ದಿನಚರ್ಯ, ಋತುಚರ್ಯ, ಊಟದ ಸಮಯದ ಬಗ್ಗೆ ನಿರ್ದಿಷ್ಟ ಶಿಫಾರಸ್ಸುಗಳನ್ನು ಒದಗಿಸಿರುತ್ತದೆ. ಸ್ಥೂಲಕಾಯ ಸಮಸ್ಯೆಯ ಮೂಲವು ಆಹಾರದಲ್ಲಿ ಮಾತ್ರ ಅಲ್ಲ, ಆಹಾರ ಬಳಕೆಯ ವಿಧಾನ ಮತ್ತು ಮನಸ್ಸಿನ ಸ್ಥಿತಿಯನ್ನು ಅವಲಂಬಿಸಿದೆ. ಸಂಸ್ಕರಿಸಿದ/ ಫಾಸ್ಟ್ ಫುಡ್, ಅತಿಯಾದ ಕೊಬ್ಬಿನ ಆಹಾರ ಇವುಗಳನ್ನು ನಿರ್ಬಂಧಿಸಬೇಕು. ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಎಲ್ಲಾ ರೀತಿಯ ಪೌಷ್ಟಿಕಾಂಶಗಳು ಒಳಗೊಂಡಿರಬೇಕು.ನಮ್ಮ ಪ್ರಕೃತಿಯನ್ನು ರೂಪಿಸುವ ವಿವಿಧ ಶಕ್ತಿಗಳು ಅಥವಾ ದೋಷಗಳನ್ನು ಅರಿತು ಅದಕ್ಕೆ ಅನುಗುಣವಾಗಿ ತಿನ್ನುವುದು ಸಹ ಮುಖ್ಯ. ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಆಮ ಹೆಚ್ಚಾಗಿ ಅಗ್ನಿ ದರ್ಬಲಗೊಂಡು ದೋಷಗಳು ಉಲ್ಬಣಗೊಳ್ಳುವುದು. ಇದರಿಂದ ತೂಕ ಹೆಚ್ಚಳ ವಾಗುವುದು ಹಾಗೂ ಜಡತ್ವ ಉಂಟಾಗಿ ಅನೇಕ ಆರೋಗ್ಯ.ಸಮಸ್ಯೆ ಕಾಡಬಹುದು
ಆಹಾರ ಸೇವಿಸುವಾಗ ಟಿವಿ ವೀಕ್ಷಣೆ, ಪುಸ್ತಕ ಮೊಬೈಲ್‌ಗಳ ಬಳಕೆ ಮುಂತಾದ ಗೊಂದಲಮಯ ವಾತಾವರಣದಿಂದ ದೂರವಿರಬೇಕು. ನಾವು ತಿನ್ನುವ ಆಹಾರದ ಮೇಲೆ ಕೇಂದ್ರೀಕರಿಸಿ ಮನಸ್ಸನ್ನು ಶಾಂತಗೊಳಿಸಿ ತಿನ್ನುವುದರಿಂದ ದೇಹದ ತೂಕವನ್ನು ಸಮತೋಲನದಲ್ಲಿರಿಸಬಹುದು.. ಆಯುರ್ವೇದದ ಅನೇಕ ಔಷಧಿಗಳು ಮತ್ತು ಆಹಾರ ಪದ್ಧತಿಯಲ್ಲಿ ಬಳಸಲಾಗುವ ಗಿಡಮೂಲಿಕೆಗಳಿಂದ ತೂಕ ಕಡಿಮೆ ಮಾಡಬಹುದು. ಅವುಗಳಲ್ಲಿ ಬೆಳ್ಳುಳ್ಳಿ, ಮೆಂತೆ, ಅರಿಶಿನ, ನೆಲ್ಲಿಕಾಯಿ, ಗುಗ್ಗುಲು, ತ್ರಿಫಲ, ಚಕ್ಕೆಇತ್ಯಾದಿ ಗಿಡಮೂಲಿಕೆಗಳು
ಅತಿಯಾದ ತೂಕದಿಂದ ಆಗುವ ಕೆಲವು ಸಮಸ್ಯೆಗಳು:ದೇಹದ ತೂಕ ಹೆಚ್ಚಾದಾಗ ಅನೇಕ ಲಕ್ಷಣಗಳನ್ನು ಕಾಣಬಹುದು – ಅತಿಯಾದ ಆಯಾಸ, ಆಲಸ್ಯ, ಅತಿಯಾದ ನಿದ್ರೆ, ಕೀಲುಗಳಲ್ಲಿ ನೋವು ಮುಟ್ಟಿನ ಸಮಸ್ಯೆ, ಗರ್ಭಧಾರಣೆಯಲ್ಲಿ ಸಮಸ್ಯೆ ಇತ್ಯಾದಿ.
ಅತಿಯಾದ ಬೊಜ್ಜು ಅಥವಾ ಸ್ಥೂಲಕಾಯ ಸರಿಯಾದ ಸಮಯದಲ್ಲಿ ತಡೆಗಟ್ಟದೆ ಹೋದಲ್ಲಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ.. ಹೃದಯಾಘಾತ ಸಂಭವಿಸಬಹುದು ಮಧುಮೇಹ, ರಕ್ತದೊತ್ತಡ, ಮಾನಸಿಕ ರೋಗಗಳಾದ ಖಿನ್ನತೆ ಆತಂಕ, ಸಂಧಿವಾತ, ಗರ್ಭಕೋಶ ಸಮಸ್ಯೆ ಇತ್ಯಾದಿ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ.
ನಿಯಮಿತ ವ್ಯಾಯಾಮ, ದಿನನಿತ್ಯ ಯೋಗಾಭ್ಯಾಸ, ಸಮತೋಲಿತ ಆಹಾರ, ಇವುಗಳ ಜೊತೆಗೆ ಆಯುರ್ವೇದ ಔಷಧಿ ಮತ್ತು ಪಂಚಕರ್ಮ ಚಿಕಿತ್ಸೆಗಳಾದ ಉದ್ವರ್ತನ, ವೀರೇಚನ, ಲೇಖನ ಬಸ್ತಿ ಇತ್ಯಾದಿ. ಇವುಗಳನ್ನು ನುರಿತ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬನ್ನು ತೆಗೆದು ಹಾಕಿ ದೇಹದ ತೂಕವನ್ನು ಕಡಿಮೆ ಮಾಡಬಹುದು.