ಸಾರ್ವಜನಿಕ ಆರೋಗ್ಯ ಮತ್ತು ಕಸದ ಸಮಸ್ಯೆ ಹಾಗೂ ಪಾನ್ ಉಗುಳುವ ಸಮಸ್ಯೆಯ ಕಾರಣದಿಂದ ತಂಬಾಕು ಮತ್ತು ಅಡಿಕೆ ಹೊಂದಿರುವ ಪಾನ್ ಉತ್ಪನ್ನಗಳನ್ನು ನಿಷೇಧಿಸುವಂತೆ ಬ್ರೆಂಟ್ ಕೌನ್ಸಿಲ್ ಬ್ರಿಟಿಷ್ ಸರ್ಕಾರವನ್ನು ಕೋರಿದೆ. ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸಲು ರಾಷ್ಟ್ರೀಯ ನೀತಿ ಬದಲಾವಣೆಗಳನ್ನು ಒತ್ತಾಯಿಸುತ್ತದೆ ಎಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿದೆ. ಈ ಹಿಂದೆಯೂ ಸರ್ಕಾರವನ್ನು ಒತ್ತಾಯ ಮಾಡಲಾಗಿತ್ತು, ಇದೀಗ ಮತ್ತೆ ಅಡಿಕೆ ಹಾನಿಕಾರಕ ಎಂದೂ ಉಲ್ಲೇಖಿಸಿ ಮನವಿ ಮಾಡಲಾಗಿದೆ.
ದಕ್ಷಿಣ ಏಷ್ಯಾದ ಪಾರಂಪರಿಕ ಜನಸಂಖ್ಯೆಯನ್ನು ಹೊಂದಿರುವ ವಾಯುವ್ಯ ಲಂಡನ್‌ನ ಒಂದು ಪ್ರಾಂತ್ಯವು, ಹೆಚ್ಚುತ್ತಿರುವ ಪಾನ್ ಅಗಿಯುವ ಮತ್ತು ಉಗುಳುವ ಸಮಸ್ಯೆಯ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಹೆಚ್ಚುತ್ತಿರುವ ಸಾರ್ವಜನಿಕ ಆರೋಗ್ಯದ ಅಪಾಯ ಮತ್ತು ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ ಎನ್ನುವುದು ಸಮಸ್ಯೆಯ ಮೂಲ. ಲಂಡನ್‌ನ ವೆಂಬ್ಲಿಯಂತಹ ಪ್ರದೇಶಗಳಲ್ಲಿ ಪಾದಚಾರಿ ದಾರಿಗಳು ಕೆಂಪು ಬಣ್ಣಗಳಿಂದ ಕೂಡಿದೆ. ಇದರ ಸ್ವಚ್ಛತೆಗಾಗಿ ಪ್ರತಿ ವರ್ಷ 30,000 ಪೌಂಡ್‌ಗಳಿಗಿಂತ ಹೆಚ್ಚು (ರೂ. 35 ಲಕ್ಷ) ಖರ್ಚು ಮಾಡುತ್ತಿದೆ ಎಂದು ಪ್ರಾಧಿಕಾರವು ಹೇಳಿದೆ.
ವೆಂಬ್ಲಿ ಮತ್ತು ಈಲಿಂಗ್ ರಸ್ತೆಯಂತಹ ಪ್ರದೇಶಗಳನ್ನು ನೋಡಿಕೊಳ್ಳುವ ಬ್ರೆಂಟ್ ಕೌನ್ಸಿಲ್, ತಂಬಾಕು ಅಥವಾ ಅಡಿಕೆ ಹೊಂದಿರುವ ಪಾನ್ ಉತ್ಪನ್ನಗಳ ಮೇಲೆ ತಕ್ಷಣದ ರಾಷ್ಟ್ರೀಯ ನಿಷೇಧವನ್ನು ಕೋರಿ ಯುಕೆ ಸರ್ಕಾರದ ಪ್ರಮುಖ ಮಂತ್ರಿಗಳಿಗೆ ಪತ್ರ ಬರೆದಿದೆ. ಅಡಿಕೆ, ತಂಬಾಕು ಮತ್ತು ಮಸಾಲೆಗಳಯನ್ನು ಅಗಿಯುವುದು ಮತ್ತು ನಂತರ ಉಗುಳುವುದು, ಶುಚಿಗೊಳಿಸುವ ಯಂತ್ರಗಳಿಗೆ ಸಹ ಸ್ವಚ್ಛತೆಗೆ ಸಮಸ್ಯೆಯಾಗುತ್ತದೆ ಎಂದು ಕೌನ್ಸಿಲ್ ಹೇಳಿದೆ. ಲಂಡನ್‌ನಾದ್ಯಂತ ಪಾನ್ ಅಥವಾ ಗುಟ್ಕಾದ ಕಾರಣದಿಂದ ಫುಟ್‌ಪಾತ್‌ಗಳು, ಅಂಗಡಿ ಮುಂಗಟ್ಟುಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಪ್ರತಿ ವರ್ಷ 30,000 ಪೌಂಡ್‌ಗಳಿಗೂ ಹೆಚ್ಚು (ರೂ. 35 ಲಕ್ಷ) ಖರ್ಚು ಮಾಡಲಾಗುತ್ತಿದೆ. ಈ ಸಮಸ್ಯೆ ಈಗ ಲಂಡನ್‌ನಾದ್ಯಂತ ಗೋಚರಿಸುತ್ತಿದೆ ಎಂದು ಗಮನ ಸೆಳೆದಿದೆ. ತಂಬಾಕು ಅಥವಾ ಅಡಿಕೆ ಹೊಂದಿರುವ ಪಾನ್ ಮಾರಾಟವನ್ನು ನಿಷೇಧಿಸಲು, ಅಕ್ರಮ ಪೂರೈಕೆ ಜಾಲಗಳನ್ನು ಹತ್ತಿಕ್ಕಲು ಕ್ರಮ ಕೈಗೊಳ್ಳಬೇಕು ಎಂದು ಬ್ರೆಂಟ್ ಕೌನ್ಸಿಲ್ ಸರ್ಕಾರವನ್ನು ಕೇಳಿದೆ. ಈಗ ಪಾನ್ ಉಗುಳುವುದು ಸ್ಥಳಿಯ ಸಮಸ್ಯೆಯಲ್ಲ, ಅದೊಂದು ಜಾಗತಿಕ ಸಮಸ್ಯೆಯಾಗುತ್ತಿದೆ ಎಂದೂ ಉಲ್ಲೇಖಿಸಿದೆ.
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…
ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…
ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ…
ಕಾಶ್ಮೀರ ಕಣಿವೆಯ ಕಾಡುಗಳಲ್ಲಿ ಅತ್ಯಂತ ಗಮನ ಸೆಳೆಯುವ ಪೀರ್ ಪಂಜಾಲ್ ಪರ್ವತಶ್ರೇಣಿಯಲ್ಲಿ ಕಡಿದಾದ…