ಖ್ಯಾತ ಸೂಫಿ ಸಂತ, ಸರ್ವ ಧರ್ಮ ಸಮನ್ವಯಕಾರ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಎನ್ ಸುತಾರ ಅವರು ಇಂದು ಮುಂಜಾನೆ ಹೃದಯಘಾತದಿಂದ ನಿಧನರಾಗಿದ್ದಾರೆ.
ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಕೋಮು ದ್ವೇಷ, ಜಾತಿ- ಧರ್ಮದ ಅಮಲು ಮಾನವತೆಯನ್ನು ಮಂಕಾಗಿಸಿರುವ ವಿಪ್ಲವದ ಈ ದಿನಗಳಲ್ಲಿ ಜನಸಾಮಾನ್ಯರ ನಡುವಿದ್ದ ಈ ಕಬೀರ ದಿಢೀರನೆ ಕಣ್ಮರೆಯಾಗಿದ್ದಾರೆ.
ಮಹಾಲಿಂಗಪುರದಲ್ಲಿ ಬಡಗಿ ವೃತ್ತಿ ಮಾಡುತ್ತಿದ್ದ ನಬಿಸಾಹೇಬ್ ಹಾಗೂ ಅಮೀನಾಬಿ ದಂಪತಿ ಪುತ್ರರಾದ ಇಬ್ರಾಹಿಂ ಸುತಾರ 1940 ರ ಮೇ 10 ರಂದು ಜನಿಸಿದರು. ಇವರಿಗೆ ಮನೆಯಲ್ಲಿನ ಬಡತನದ ಪರಿಸ್ಥಿತಿ ಓದಲು ಉತ್ತೇಜಕವಾಗಿರಲಿಲ್ಲ. ಮೂರನೇ ತರಗತಿ ಶಿಕ್ಷಣ ಅಪೂರ್ಣಗೊಂಡಿತು. ಊರಿನ ಬಹುಸಂಖ್ಯಾತರ ಉದ್ಯೋಗ ನೇಕಾರಿಯನ್ನೇ ಸುತಾರ ಕಲತರು. ಬದುಕಿಗೆ ಅದೇ ದಾರಿಯನ್ನಾಗಿಸಿತು.
ವೈದಿಕ ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡುತ್ತಿದ್ದ ತತ್ವಪದಕಾರರು ಮತ್ತು ಪ್ರವಚನಕಾರರಾಗಿದ್ದರು. 2018ರಲ್ಲಿ ಇವರಿಗೆ ಭಾರತ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯು ಲಭಿಸಿದೆ.
ಅಭಿವೃದ್ಧಿ ಸವಾಲುಗಳ ನಡುವೆಯೂ ದೇಶದ ಎಲ್ಲ ತೈಲ ಉತ್ಪಾದನಾ ಕಂಪನಿಗಳು 2045ರ ವೇಳೆಗೆ…
ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ವಿಸ್ತರಣೆ, ಮಾರುಕಟ್ಟೆ ಅಭಿವೃದ್ಧಿಯಲ್ಲಿ ಕಾಫಿ ಮಂಡಳಿ…
ರೈತ ಉತ್ಪಾದಕ ಸಂಸ್ಥೆಗಳು ರೈತರು ಮತ್ತು ಇಲಾಖೆಯ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ…
ದಕ್ಷಿಣ ಕನ್ನಡದ ಸುಳ್ಯದಲ್ಲಿ 40.4 ಡಿಗ್ರಿ ಸೆಲ್ಸಿಯಸ್, ಉಪ್ಪಿನಂಗಡಿಯಲ್ಲಿ 39.6, ಪಾಣೆ ಮಂಗಳೂರಿನಲ್ಲಿ …
ಕೃಷಿಯಲ್ಲಿ ತೊಡಗಿರುವವರಲ್ಲಿ ಶೇಕಡಾ 80ರಷ್ಟು ಮಂದಿ ಸಣ್ಣ ರೈತರು. ಈ ಸಮುದಾಯ ಮಾರುಕಟ್ಟೆ…
ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ…