ಸುಮಾರು 650ಕ್ಕೂ ಮಿಕ್ಕಿದ ವಿವಿಧ ತಳಿಗಳನ್ನು ಸಂರಕ್ಷಿಸುತ್ತಿರುವ ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಬೆಳೆರೆ ಸತ್ಯನಾರಾಯಣ ಅವರು ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಗುರುವಾರ ಪ್ರಶಸ್ತಿಯನ್ನು ಸ್ವೀಕರಿಸಿದರು. …….ಮುಂದೆ ಓದಿ…..
ಪೂರ್ವಜರಿಂದ ಬಳುವಳಿಯಾಗಿ ಬಂದ ಸುಮಾರು 4 ಎಕರೆ ಜಮೀನಿನಲ್ಲಿ ಕೃಷಿ ನಡೆಸಿಕೊಂಡು ಬರುತ್ತಿರುವ ಸತ್ಯನಾರಾಯಣ ಅವರು ಅಡಿಕೆ, ತೆಂಗು , ರಬ್ಬರ್ ಹಾಗು ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹಲಸು ಗಿಡ ಕಸಿ ಮಾಡುವುದರಲ್ಲೂ ಅವರು ಪರಿಣಿತರು. ಮೊದಲು ಗ್ರೋ ಬ್ಯಾಗ್ ನಲ್ಲಿ ಭತ್ತದ ತಳಿಗಳನ್ನು ಬೆಳೆಸಲು ಆರಂಭಿಸಿದ ಸತ್ಯನಾರಾಯಣ ಅವರಿಗೆ ಅಡಿಕೆ ಪತ್ರಿಕೆ ಮೂಲಕ ಚೆರ್ಕಾಡಿ ರಾಮಚಂದ್ರ, ಬೆಳ್ತಂಗಡಿಯ ಬಿ.ಕೆ. ದೇವರಾಯರ ಪರಿಚಯವಾಗಿ ಭತ್ತದ ತಳಿ ಸಂರಕ್ಷಣೆಯ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಹಲವು ಕಡೆಗಳಿಂದ ಭತ್ತದ ತಳಿಗಳ ಸಂಗ್ರಹಿಸಿರುವ ಇವರ ಸಂಗ್ರಹದಲ್ಲಿ 650ಕ್ಕೂ ಮಿಕ್ಕಿದ ವಿವಿಧ ಭತ್ತದ ತಳಿಗಳಿವೆ. ತಳಿಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳಿಗೆ, ಅಧ್ಯಯನಶೀಲ ವಿದ್ಯಾರ್ಥಿಗಳಿಗೆ, ಆಸಕ್ತ ಕೃಷಿಕರಿಗೆ ಉಚಿತವಾಗಿ ನೀಡುತ್ತಿರುವ ಸತ್ಯನಾರಾಯಣ ಬೆಳೆರಿ ಮೂಲ ತಳಿಯನ್ನು ಸಂರಕ್ಷಿಸುವ ಕೆಲಸ ಅತ್ಯಂತ ಕಷ್ಟಕರ ಎನ್ನುತ್ತಾರೆ. ಈ ವಾರದ ದ ರೂರಲ್ ಮಿರರ್.ಕಾಂ ಅತಿಥಿಯಾಗಿ ಕೃಷಿ-ಗ್ರಾಮೀಣ ಬದುಕಿನ ಬಗ್ಗೆ ಅವರು ಮಾತನಾಡಿದ್ದು ಹೀಗೆ….
Education system should change. Agriculture should also be part of the curriculum. Agriculture should be learned through education Says PadmaShri awardee farmer Satyanarayan Beleri.