ಪಾಕಿಸ್ತಾನದ ಸ್ಥಿತಿ ಎಲ್ಲಿಗೆ ಬಂತು ನೋಡಿ. ಗನ್, ಯುದ್ಧ, ಭಯೋತ್ಪಾಧನೆ, ಇನ್ನೊಂದು ದೇಶದ ಮೇಲೆ ಕಾಲು ಕೆರೆದುಕೊಂಡು ಜಗಲ ಮಾಡೋದನ್ನು ಬಿಟ್ಟು ದೇಶದ ಜನತೆಗೆ ಅನ್ನ ಕೊಡುವ ಕಾಯಕದಲ್ಲಿ ತೊಡಗಲು ಮುಂದಾಗಿದೆ. ಪಾಕಿಸ್ತಾನದ ಆರ್ಥಿಕತೆ ಬಿಕ್ಕಟ್ಟಿಗೆ ಸಿಲುಕಿಗೆ ಯಾವುದೋ ಕಾಲವಾಗಿದೆ. ಇದರಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಇದರಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ದೇಶವನ್ನು ಬಲಪಡಿಸುವ ಸಲುವಾಗಿ, ಪಾಕಿಸ್ತಾನ ಸೇನೆ ಕೃಷಿ ಕ್ಷೇತ್ರವನ್ನು ಪ್ರವೇಶಿಸುತ್ತಿದೆ.
ತಾಜಾ ಬೆಳವಣಿಗೆಯಲ್ಲಿ ಅಕ್ಷರಶಃ ಇಡೀ ದೇಶವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪಾಕಿಸ್ತಾನ ಸೇನೆ ನಿರ್ಧರಿಸಿದೆ. ಮಾಧ್ಯಮ ಸಂಸ್ಥೆ ನಿಕ್ಕಿ ಏಷ್ಯಾ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ 10 ಲಕ್ಷ ಎಕರೆ ಸರ್ಕಾರಿ ಭೂಮಿಯನ್ನು ಸೇನೆ ಸ್ವಾಧೀನಪಡಿಸಿಕೊಳ್ಳಲು ಹೊರಟಿದೆ. ಈ ಮೂಲಕ ಸೇನೆ ದೇಶ ಕಾಯುವ ಜೊತೆಗೆ ಕೃಷಿ ಕ್ಷೇತ್ರಕ್ಕೆ (Agriculture) ಕಾಲಿಟ್ಟಿದೆ. ಇಲ್ಲಿ ಗೋಧಿ, ಹತ್ತಿ, ಕಬ್ಬು, ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಸಲು ಸೇನೆ ನಿರ್ಧರಿಸಿದೆ.
ಇವುಗಳ ಮಾರಾಟದಿಂದ ಬರುವ ಲಾಭದಲ್ಲಿ ಶೇ. 20 ರಷ್ಟು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಿಡಲಾಗಿದೆ. ಉಳಿದ ಹಣವನ್ನು ಸೇನೆ ಮತ್ತು ರಾಜ್ಯ ಸರ್ಕಾರ ಸಮನಾಗಿ ಹಂಚಿಕೊಳ್ಳಲಿದೆ. ಬಡವರಿಗೆ ಆಹಾರ ಭದ್ರತೆ ಒದಗಿಸಲು ಈ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಸೇನೆ ಹೇಳಿಕೊಂಡಿದೆ. ಆದರೆ, ಸೇನೆಯು ಗ್ರಾಮೀಣ ಬಡವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂಬ ಟೀಕೆಗಳಿವೆ. ದೇಶದಲ್ಲಿ ಸುಮಾರು 25 ಮಿಲಿಯನ್ ಜನರು ಬಡವರು ಮತ್ತು ಭೂರಹಿತರಾಗಿರುವ ಈ ಸಮಯದಲ್ಲಿ, ಒಂದಲ್ಲ, ಎರಡಲ್ಲ, ಹತ್ತು ಲಕ್ಷ ಎಕರೆ ಕೃಷಿ ಭೂಮಿ ಸೇನೆಯ ಕೈಗೆ ಹೋಗುತ್ತದೆ ಎಂಬ ಆತಂಕ ಮನೆ ಮಾಡಿದೆ.
ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…
ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…
ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…