ಪೆಟ್ರೋಲ್ ಹಾಗೂ ಡೀಸೇಲ್ ಬೆಲೆ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ಯಾವ ಸರ್ಕಾರ ಬಂದ್ರು ಅದೇ ಕಥೆ. ಅಧಿಕಾರಕ್ಕೆ ಬರುವ ಮುಂಚೆ ಮಾತ್ರ ಘೋಷಣೆ ತೈಲ ಬೆಲೆ ಇಳಿಸುತ್ತೇವೆ ಅಂತ. ಆದ್ರೆ ಆಮೇಲೆ ಅದೇ ರಾಗ ಅದೇ ಹಾಡು. ಸಾರ್ವಜನಿಕರಿಗೆ ತೈಲ ಬೆಲೆ ಏರಿಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಇದೀಗ ಕಚ್ಚಾ ತೈಲದ ಉತ್ಪಾದನೆ ಹಾಗೂ ರಫ್ತು ಕಡಿತವನ್ನು ಈ ವರ್ಷದ ಅಂತ್ಯದವರೆಗೆ ಮುಂದುವರಿಸಲು ರಷ್ಯಾ ಮತ್ತು ಸೌದಿ ಅರೇಬಿಯಾ ತೀರ್ಮಾನಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯಾಗಿದೆ.
ಭಾರತಕ್ಕೆ ಪೂರೈಕೆ ಆಗುತ್ತಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ 1.05% ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ ಈಗ 97.56 ಡಾಲರ್ (ಅಂದಾಜು 8,110 ರೂ.) ತಲುಪಿದೆ. ಒಂದು ಬ್ಯಾರೆಲ್ ಅಮೆರಿಕದ ವೆಸ್ಟ್ ಟೆಕ್ಸಸ್ ಇಂಟರ್‌ಮಿಡಿಯೇಟ್ ತೈಲದ ಬೆಲೆ 95.03 ಡಾಲರ್‌ಗೆ (ಅಂದಾಜು 7,900 ರೂ.) ಏರಿಕೆಯಾಗಿದೆ. ಈ ಹಿಂದೆ ಆಗಸ್ಟ್ 2022ರಲ್ಲಿ 94.61 ಡಾಲರ್‌ಗೆ ತಲುಪಿತ್ತು.
ಎಷ್ಟು ಕಡಿತ? : ಒಪೆಕ್+ ಒಕ್ಕೂಟದಲ್ಲಿ ಅತಿ ಹೆಚ್ಚು ತೈಲ ಉತ್ಪಾದನೆ ಮಾಡುವ ಸೌದಿ ಅರೇಬಿಯಾ ಈ ವರ್ಷದ ಅಂತ್ಯದ ವರೆಗೆ 1 ದಶಲಕ್ಷ ಬಿಪಿಡಿ (ಬ್ಯಾರೆಲ್ ಪರ್ ಡೇ) ತೈಲವನ್ನು ಕಡಿತ ಮಾಡುವುದಾಗಿ ಹೇಳಿದೆ. ಈ ನಿರ್ಧಾರದಿಂದ ಸೌದಿ ಈಗ ಪ್ರತಿ ದಿನ 9 ದಶಲಕ್ಷ ಬಿಪಿಡಿ ತೈಲವನ್ನು ಉತ್ಪಾದನೆ ಮಾಡುತ್ತಿದೆ. ರಷ್ಯಾವೂ ಈ ವರ್ಷದ ಅಂತ್ಯದವರೆಗೆ 3 ಲಕ್ಷ ಬಿಪಿಡಿ ತೈಲವನ್ನು ಕಡಿತ ಮಾಡುವುದಾಗಿ ಘೋಷಿಸಿದೆ. ಭಾರತಕ್ಕೆ ಪೂರೈಕೆಯಾಗುವ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಆಗಸ್ಟ್‌ನಲ್ಲಿ ಸರಾಸರಿ 86.43 ಡಾಲರ್ ಇದ್ದರೆ ಈಗ ಇದು 97 ಡಾಲರ್ ಗಡಿಯನ್ನು ದಾಟಿದೆ. ಮೇ ಮತ್ತು ಜೂನ್‌ನಲ್ಲಿ ಸರಾಸರಿ ಬೆಲೆಯು 73ರಿಂದ 75 ಡಾಲರ್ ನಡುವೆ ಇತ್ತು.
– ಅಂತರ್ಜಾಲ ಮಾಹಿತಿ
ದೇಶದಲ್ಲಿ 43% ಮಳೆ ಕೊರತೆ ದಾಖಲಾಗಿರುವ ಹಿನ್ನೆಲೆ ಎಲ್ ನಿನೋ ಪರಿಣಾಮ ಎದುರಿಸಲು…
ತೆಂಗು ಬೆಳೆಗಾರರು ಕಾರ್ಮಿಕ ಕೊರತೆ ಮತ್ತು ಹೆಚ್ಚುತ್ತಿರುವ ಕೂಲಿ ವೆಚ್ಚದಿಂದ ಸಂಕಷ್ಟ ಎದುರಿಸುತ್ತಿದ್ದಾರೆ.…
ಕರಾವಳಿ ಕರ್ನಾಟಕದಲ್ಲಿ ಜೂನ್ 26ರವರೆಗೆ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ…
ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಕಾಪರ್ ಸಲ್ಫೇಟ್ ಕೊರತೆ, ಬೆಳೆ ವಿಮೆ ವಿಳಂಬ, ಕಳಪೆ…
ಜೂನ್ 25ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಮತ್ತು…
ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಕೃಷಿ ಹಾಗೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ…