ಪ್ರವಾಹದ ಬಳಿಕ ಪಾಕಿಸ್ತಾನದಲ್ಲಿ ಸಂಕಷ್ಟ | ಹರಡುತ್ತಿರುವ ರೋಗ | ಭಾರತದಿಂದ ಸೊಳ್ಳೆ ಪರದೆಗಳನ್ನು ಖರೀದಿಸಲು ಚಿಂತನೆ | ಪ್ರವಾಹದಿಂದ 1,500 ಕ್ಕೂ ಹೆಚ್ಚು ಜನರು ಬಲಿ | 2000 ಆರೋಗ್ಯ ಕೇಂದ್ರಗಳಿಗೆ ಹಾನಿ |

Advertisement

ಪ್ರಾಕೃತಿಕ ವಿಕೋಪ ಬಳಿಕ ಪಾಕಿಸ್ತಾನ ಸಂಪೂರ್ಣ  ಕಂಗೆಟ್ಟಿದೆ.ಭಾರೀ ಮಳೆಯ ಕಾರಣದಿಂದ ದೇಶದ ಹಲವು ಪ್ರದೇಶಗಳು ಮುಳುಗಡೆಯಾಗಿತ್ತು. ಪ್ರವಾಹದ ಕಾರಣದಿಂದ 1500 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಸುಮಾರು 2000 ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳು ನಾಶವಾಗಿದೆ. ಇದೀಗ ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುತ್ತಿರುವುದು  ಅಲ್ಲಿನ ಆತಂಕವನ್ನು ಹೆಚ್ಚು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ  ಕಳವಳ ವ್ಯಕ್ತಪಡಿಸಿದೆ.

Advertisement

ಪ್ರವಾಹ ತಗ್ಗಿದರೂ ದೇಶದ ಅದರಲ್ಲೂ ಪಾಕಿಸ್ತಾನದ ಗ್ರಾಮೀಣ ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜನರು ಅಸುರಕ್ಷಿತ ನೀರನ್ನು ಕುಡಿಯಬೇಕಾಗಿದೆ. ಇದರಿಂದಾಗಿ  ಕಾಲರಾ ಮತ್ತು ಇತರ ಅತಿಸಾರ ರೋಗಗಳು ಹರಡಲು ಕಾರಣವಾಗಿದೆ.ನಿಂತ ನೀರು ಸೊಳ್ಳೆಗಳನ್ನು ಸಂತಾನೋತ್ಪತ್ತಿ ಮಾಡಲು ಮತ್ತು ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ರೋಗಕಾರಕ-ಹರಡುವ ರೋಗಗಳನ್ನು ಹರಡಲು ಅನುವಾಗಿದೆ. ಇದು ಕೂಡಾ ಆತಂಕಕ್ಕೆ ಕಾರಣವಾಗಿದೆ.

Advertisement
Advertisement
Advertisement

ಪಾಕಿಸ್ತಾನದ  ಹಲವಾರು ಭಾಗಗಳಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಸೊಳ್ಳೆಗಳ ಮೂಲಕ ಹರಡುವ ರೋಗಗಳ ಉಲ್ಬಣದಿಂದಾಗಿ ಪಾಕಿಸ್ತಾನದ ಆರೋಗ್ಯ ಅಧಿಕಾರಿಗಳು ಭಾರತದಿಂದ ಸುಮಾರು 7.1 ಮಿಲಿಯನ್ ಸೊಳ್ಳೆ ಪರದೆಗಳನ್ನು ಖರೀದಿಸಲು ಸರ್ಕಾರದ ಅನುಮತಿಯನ್ನು ಕೋರಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿಯೊಂದು ತಿಳಿಸಿದೆ. ಈಗಾಗಲೇ ಮಲೇರಿಯಾ ಜ್ವರ ವ್ಯಾಪಕವಾಗಿದೆ. ಅದರ ಜೊತೆಗೆ ಹೊಸ ಬಗೆಯ ರೋಗವೂ ಕಾಣುತ್ತಿದೆ ಎದು ವರದಿಯೊಂದು ಹೇಳಿದೆ.

 

Advertisement
Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಪ್ರವಾಹದ ಬಳಿಕ ಪಾಕಿಸ್ತಾನದಲ್ಲಿ ಸಂಕಷ್ಟ | ಹರಡುತ್ತಿರುವ ರೋಗ | ಭಾರತದಿಂದ ಸೊಳ್ಳೆ ಪರದೆಗಳನ್ನು ಖರೀದಿಸಲು ಚಿಂತನೆ | ಪ್ರವಾಹದಿಂದ 1,500 ಕ್ಕೂ ಹೆಚ್ಚು ಜನರು ಬಲಿ | 2000 ಆರೋಗ್ಯ ಕೇಂದ್ರಗಳಿಗೆ ಹಾನಿ |"

Leave a comment

Your email address will not be published.


*