ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ ಚಿಂತನೆಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತಾಳೆ ಬೆಳೆ ಕೃಷಿಗೆ ಸಂಬಂಧಿಸಿದಂತೆ ಕಲಿಕಾ ಪ್ರವಾಸವನ್ನು ಬೆಳ್ತಂಗಡಿ ತಾಲೂಕಿನ ಕೃಷಿ ಸಖಿಗಳು ಮತ್ತು ತಾಳೆ ಕೃಷಿಗೆ ಆಸಕ್ತಿ ಹೊಂದಿದ ಹೊಸ ರೈತರು ಪ್ರವಾಸ ಹಾಗೂ ಮಾಹಿತಿ ಕಾರ್ಯಕ್ರಮ ಮಡೆಯಿತು. ಸುಳ್ಯ ತಾಲೂಕಿನಲ್ಲಿ ತಾಳೆ ಬೆಳೆಯನ್ನು ಅತ್ಯುತ್ತಮವಾಗಿ ಬೆಳೆದ ಪಂಬೆತ್ತಾಡಿಯ ಕೆ ಎಸ್ ಅಶೋಕ್ ಕುಮಾರ್ ಕರಿಕ್ಕಳ ರೈತರ ತೋಟಕ್ಕೆ ಭೇಟಿ ನೀಡಿ ಅವರಿಂದ ತಾಳೆ ಕೃಷಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ತಾಳೆ ಬೆಳೆ ಕೃಷಿಗೆ ಸಂಬಂಧಿಸಿದಂತೆ ಕಲಿಕಾ ಪ್ರವಾಸದಲ್ಲಿ ಒಟ್ಟು 65 ಜನರು ಭಾಗವಹಿಸಿದ್ದರು. ಅದರಲ್ಲಿ 50 ಕೃಷಿ ಸಖಿಗಳು,15 ತಾಳೆ ಕೃಷಿಯ ಹೊಸ ರೈತರು ಹಾಗೂ ಮಂಗಳೂರು ಜಿಲ್ಲೆಯ ತೋಟಗಾರಿಕಾ ಡೆಪ್ಯುಟಿ ಡೈರೆಕ್ಟರ್ ಮಂಜುನಾಥ ಅವರು ಹಾಗೂ ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನ ತೋಟಗಾರಿಕಾ ಅಧಿಕಾರಿಗಳು ಭಾಗವಹಿಸಿದ್ದರು.
ತಾಳೆ ಬೆಳೆಯನ್ನು ಅಡಿಕೆಗೆ ಪರ್ಯಾಯವಾಗಿ ಬೆಳೆಯಲು ಸಾಧ್ಯವಾಗುತ್ತಿದೆ. ಅಡುಗೆ ಎಣ್ಣೆ ಇಂದು ದೇಶದಲ್ಲಿ ಬೇಡಿಕೆ ಇದೆ. ಮುಖ್ಯವಾಗಿ ತಾಳೆ ಎಣ್ಣೆ ಉತ್ಪಾದನೆಗಾಗಿ ಬೆಳೆಸಲಾಗುತ್ತದೆ. ಹೀಗಾಗಿ ಉತ್ತಮ ಬೇಡಿಕೆ ಇದೆ. ಇದಕ್ಕಾಗಿ ರೈತರಿಗೆ ತಾಳೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.