ನೀರನ್ನು(Water) ಕುಡಿದಾಗ ದೇಹಕ್ಕೆ(Body) ಹೊಸ ಚೈತನ್ಯ(Freshness) ಬರುತ್ತದೆ. ಆದರೆ ನೀರನ್ನು ಕುಡಿಯುವ ವಿಧಾನ ಸರಿಯಾಗಿಬೇಕಷ್ಟೆ. ಅರೇ ಇದೇನಿದು ಅಂತೀರಾ ಹೌದು ನೀರನ್ನು ಯಾವಾಗಲೂ ಕುಳಿತುಕೊಂಡೇ(Sitting Position) ಕುಡಿಯಬೇಕು.
ನಿಂತು ನೀರು ಕುಡಿದರೆ ಅನಾರೋಗ್ಯವೇ ಹೆಚ್ಚು:
1. ನಿಂತುಕೊಂಡು ನೀರು ಕುಡಿದರೆ ದೇಹದ ನೀರಿನ ಸಮತೋಲನವನ್ನು ಹಾಳು ಮಾಡುತ್ತದೆ.
2. ನಿಂತುಕೊಂಡು ನೀರು ಕುಡಿಯುವುದರಿಂದ ದೇಹದೊಳಗಿನ ಪೊರೆಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಶುದ್ಧೀಕರಣಕ್ಕೆ ಅಡಚಣೆ ಉಂಟಾಗುತ್ತದೆ. ಇದು ದೇಹದಲ್ಲಿನ ವಿಷದ ಮಟ್ಟವನ್ನು ಹೆಚ್ಚಿಸುತ್ತದೆ.
3. ನಿರಂತರವಾಗಿ ನೀರನ್ನು ನಿಂತುಕೊಂಡೇ ಕುಡಿಯುವ ಅಭ್ಯಾಸವಿದ್ದರೆ ಭವಿಷ್ಯದಲ್ಲಿ ಸಂಧಿವಾತದ ಸಮಸ್ಯೆ ಕಾಡುವುದು ಪಕ್ಕಾ. ಏಕೆಂದರೆ ನಿಂತುಕೊಂಡು ನೀರನ್ನು ಕುಡಿದಾಗ ದೇಹದ ಗಂಟುಗಳಲ್ಲಿ ದ್ರವ ಪದಾರ್ಥ ಸಮತೋಲನ ಕಳೆದುಕೊಳ್ಳುತ್ತದೆ. ಇದರಿಂದ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಇದು ದೀರ್ಘಾವಧಿ ಸಮಸ್ಯೆಯಾಗಿ ಕಾಡುತ್ತದೆ. ಆದ್ದರಿಂದ ನಿಂತು ನೀರು ಕುಡಿಯುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ.
4. ಮೂತ್ರಪಿಂಡಗಳು ಕಾರ್ಯನಿರ್ವಹಿಸಲು ನೀರು ಸಹಾಯ ಮಾಡುತ್ತದೆ. ಆದರೆ ನಿಂತುಕೊಂಡು ನೀರು ಕುಡಿಯುವುದರಿಂದ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಏಕೆಂದರೆ ನೀರು ನೇರವಾಗಿ ಮೂತ್ರಪಿಂಡಗಳಿಗೆ ಹೋಗುವುದಿಲ್ಲ ಮತ್ತು ರಕ್ತದೊಂದಿಗೆ ಬೆರೆತು ದೇಹಕ್ಕೆ ಹಾನಿಯಾಗುತ್ತದೆ.
5. ನಿಂತು ನೀರು ಕುಡಿಯುವುದರಿಂದ ಆಮ್ಲೀಯ ಮಟ್ಟ ಏರಿಕೆಯಾಗಿ ಅಜೀರ್ಣದ ಅಪಾಯವನ್ನು ಹೆಚ್ಚಿಸುತ್ತದೆ. ಕೆಳ ಹೊಟ್ಟೆ ನೋವು ಸೇರಿದಂತೆ ಹಲವಾರು ಸಮಸ್ಯೆಗಳು ಬರುತ್ತದೆ.
6. ನಿಂತು ನೀರು ಕುಡಿಯುವುದರಿಂದ ನಮ್ಮ ಎದೆಯ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಪರಿಣಾಮವಾಗಿ, ನಮ್ಮ ಹೃದಯದ ಮೇಲೆ ಒತ್ತಡವೂ ಉಂಟಾಗುತ್ತದೆ. ಎದೆಯ ಸ್ನಾಯುಗಳ ಮೇಲಿನ ಈ ಒತ್ತಡವು ಡಿಸ್ಫೇಜಿಯಾದಿಂದ ಉಸಿರುಗಟ್ಟುವಿಕೆಗೆ ಕಾರಣವಾಗಬಹುದು.
7. ನಿಂತು ನೀರು ಕುಡಿಯುವುದರಿಂದ ನಮ್ಮ ನರಗಳಿಗೆ ಕಿರಿಕಿರಿಯಾಗುತ್ತದೆ. ಅಧಿಕ ರಕ್ತದೊತ್ತಡದ ಸಾಧ್ಯತೆ ತುಂಬಾ ಹೆಚ್ಚು. ಎದೆ ಉರಿಯುತ್ತಿರುವಾಗ ನೀರು ಕುಡಿಯುವುದು ಆತಂಕವನ್ನು ಹೆಚ್ಚಿಸುತ್ತದೆ. ಯಾವುದು ದೇಹಕ್ಕೆ ಒಳ್ಳೆಯದಲ್ಲ.ಮುಂದೆ ನರಗಳ ಸಮಸ್ಯೆಯೂ ಉಂಟಾಗುತ್ತದೆ. ಇದು ಬಹು ನರಗಳ ಉರಿಯೂತಕ್ಕೆ ಕಾರಣವಾಗುತ್ತದೆ. ಅಲ್ಲದೇ ಯಾವುದೇ ಕಾರಣವಿಲ್ಲದೇ ಒತ್ತಡ ಅಥವಾ ಆತಂಕ ಹೆಚ್ಚಾಗಲು ಪ್ರಾರಂಭವಾಗುತ್ತದೆ.
8. ನಿಂತುಕೊಂಡು ನೀರು ಕುಡಿದಾಗ ಅನ್ನನಾಳದ ಕೆಳಭಾಗದ ಅಂಗ ಕಠಿಣಗೊಳ್ಳುತ್ತದೆ. ಇದರಿಂದ ಅನ್ನನಾಳ ಮತ್ತು ಜಠರದ ನಡುವೆ ಇರುವ ಸ್ಪಿನ್‌ಟರ್ ತೊಂದರೆಗೆ ಒಳಗಾಗುತ್ತದೆ. ಇದರ ಪರಿಣಾಮವಾಗಿ ಅಲ್ಸರ್ ಮತ್ತು ಹೊಟ್ಟೆ ಉರಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕುಳಿತುಕೊಂಡು ನೀರನ್ನು ಕುಡಿಯುವಾಗ ಸ್ನಾಯುಗಳು ಮತ್ತು ನರಗಳು ಸ್ಥಿರವಾಗಿರುತ್ತವೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಹೀಗಾಗಿ ಕುಳಿತುಕೊಂಡು ನೀರು ಕುಡಿಯುವುದು ಉತ್ತಮವಾಗಿದೆ. ಅದರಲ್ಲೂ ಒಂದೇ ಸಲಕ್ಕೆ ನೀರು ಕುಡಿಯುವದಕ್ಕಿಂತ ಗುಟುಕಾಗಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ನೀರು ಕುಡಿಯಲು ಸರಿಯಾದ ಮಾರ್ಗವೆಂದರೆ ಕುಳಿತುಕೊಂಡು ಸ್ವಲ್ಪ ಸ್ವಲ್ಪ ಗುಟುಕು ನೀರು ಕುಡಿಯುವುದು. ಮುಖ ಕೆಳಗೆ ಅಥವಾ ನೇರ ಮಾಡಿ ನೀರನ್ನು ಕುಡಿಯಿರಿ. ರಸ್ತೆಯಲ್ಲಿ ಕುಳಿತು ನೀರು ಕುಡಿಯಲು ಸಾಧ್ಯವಾಗದಿದ್ದರೆ, ಬಾಯಾರಿಕೆ ನೀಗಿಸುವ ಸಲುವಾಗಿ ಸ್ವಲ್ಪ ನೀರು ಕುಡಿಯಿರಿ. ನಿಮಗೆ ಸಾಧ್ಯವಾದರೆ ನಂತರ ಕುಳಿತುಕೊಂಡು ಕುಡಿಯಿರಿ.
Source: Digital Media