ಮಹಾರಾಷ್ಟ್ರದ ಪಂಡರಾಪುರ ಶ್ರೀಪಾಂಡುರಂಗ ದೇವರ ಸನ್ನಿಧಿಗೆ ಹಲವಾರು ಭಕ್ತರು ಪಾದಯಾತ್ರೆ ಮೂಲಕ ಸಾಗುತ್ತಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ತಳವಾರಹಟ್ಟಿ ಬಳಗಟ್ಟ ಗ್ರಾಮದ ಪಂಡರಾಪುರ ಶ್ರೀಪಾಂಡು ರಂಗ ಸ್ವಾಮಿ ಪಾದಯಾತ್ರೆ ಭಕ್ತರ ಸೇವಾ ಸಮಿತಿ, ಸತತ 11ನೇ ವರ್ಷದ ಪಾದಯಾತ್ರೆ ಹಮ್ಮಿಕೊಂಡಿತ್ತು.
ಪಾದಯಾತ್ರೆ ತಂಡದಲ್ಲಿ ಮಹಿಳಾ ಭಕ್ತರು ಯುವಕರು ವೃದ್ಧರಾದಿಯಾಗಿ, ಒಟ್ಟು ಮೂವತ್ತು ಜನರುಳ್ಳ ಭಕ್ತರ ದಂಡು ಭಜನೆ ಮಾಡುತ್ತಾ ಪಾದಯಾತ್ರೆ ಮೂಲಕ ಮುಂದೆ ತೆರಳಿತು. ಪ್ರತಿ ದಿನ 25-30 ಕಿಲೋ ಮೀಟರ್ ಪಾದಯಾತ್ರೆ ಮೂಲಕ ಕ್ರಮಿಸುವ ತಂಡ. ದಾರಿಯುದ್ದಕ್ಕೂ ಶ್ರೀರಂಗನ ನಾಮಸ್ಮರಣೆ ಮಾಡುತ್ತಾ ಸಾಗಿತು.
ನೆರೆ ರಾಜ್ಯ ಮಹರಾಷ್ಟ್ರದಲ್ಲಿರುವ, ಪಂಡರಾಪುರ ಕ್ಷೇತ್ರಕ್ಕೆ ಭಕ್ತರ ದಂಡು ತಮ್ಮ ಪಾದಯಾತ್ರೆ ಯಶಸ್ವಿಗೊಳಿಸಿ ಸಮಾಪ್ತಿ ಗೊಳಿಸುತ್ತಾರೆ. ಇದೇ ರೀತಿ ಕರ್ನಾಟಕದ ಮೂಲೆ ಮೂಲೆ ಮೂಲೆಗಳಿಂದ ಸತತ ಹತ್ತಾರು ವರ್ಷಗಳಿಂದ ಪಾದಯಾತ್ರೆ ಹಮ್ಮಿಕೊಳ್ಳುವ ಹಲವಾರು ಮಂದಿ ಇದ್ದಾರೆ.
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…