ಸುಳ್ಯ ತಾಲೂಕಿನ ಪಂಜದ ಅಳ್ಪೆ ಚಿಂಗಾಣಿಗುಡ್ಡೆಯಲ್ಲಿ ಅನೇಕ ವರ್ಷಗಳ ಹಿಂದೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಆದರೆ ಟ್ಯಾಂಕ್ ಗೆ ನೀರು ಸರಬರಾಜು ಆಗದೆ ಇಡೀ ಯೋಜನೆ ವಿಫಲವಾಗಿತ್ತು. ಹೀಗಾಗಿ ಚಿಂಗಾಣಿ ಗುಡ್ಡೆಯ ನಾಗರಿಕರು ಹಾಗೂ ಸಾಮಾಜಿಕ ಹೋರಾಟಗಾರ ಜಿನ್ನಪ್ಪ ಅಳ್ಪೆ ಅವರು ಈ ಬಗ್ಗೆ ಹೋರಾಟ ನಡೆಸಿದ್ದರು. ಇದೀಗ ಪೈಪ್ ಲೈನ್ ಸರ್ವೆ ಕಾರ್ಯ ಆರಂಭವಾಗಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಪಂಜದಲ್ಲಿ ನೀರಿನ ಟ್ಯಾಂಕ್ ರಚನೆಯಾಗಿ ಅದಕ್ಕೆ ಪುಳಿಕುಕ್ಕು ಬಳಿಯಲ್ಲಿ ಹಾದುಹೋಗುವ ಕುಮಾರಧಾರೆಯಿಂದ ನೀರು ಹಾಯಿಸುವುದು ಯೋಜನೆಯ ಉದ್ದೇಶವಾಗಿತ್ತು. ಆದರೆ ಕಾಮಗಾರಿಗೂ ಮುನ್ನ ಸರಿಯಾದ ಯೋಜನೆ ರೂಪಿಸಿದ ಹಿನ್ನೆಲೆಯಲ್ಲಿ ಇಡೀ ಯೋಜನೆ ವಿಫಲವಾಗಿತ್ತು, ನೀರಿನ ಟ್ಯಾಂಕ್ ಗೆ ಕುಮಾರಧಾರಾ ನದಿಯಿಂದ ನೀರು ಹಾಯಿಸಲು ಸಾಧ್ಯವಾಗಿರಲಿಲ್ಲ. ತಾಂತ್ರಿಕ ಕಾರಣವನ್ನು ತಿಳಿಸಲಾಗಿತ್ತು. ಹೀಗಾಗಿ ಈ ಬಗ್ಗೆ ಹಲವು ವರ್ಷಗಳಿಂದ ಸ್ಥಳೀಯರು ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರು. ಹಾಗಿದ್ದರೂ ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ಕಳೆದ ಬಾರಿಯ ಗ್ರಾ ಪಂ ಚುನಾವಣೆಯ ಸಂದರ್ಭದಲ್ಲೂ ವಿರೋಧ ಬಂದು ವಿವಿಧ ಬೇಡಿಕೆಗಳನ್ನಿಟ್ಟು ನಾಗರಿಕರು ತಂಡ ಕಟ್ಟಿ ಗ್ರಾಮಸ್ವರಾಜ್ಯ ತಂಡ ಕಟ್ಟಿ ಸ್ಫರ್ಧೆ ಮಾಡಿದ್ದರು. ಯಾವುದೇ ಕಾರಣಕ್ಕೂ ಈ ನೀರಿನ ಯೋಜನೆ ವಿಫಲವಾಗಬಾರದು ಎಂದು ಸತತ ಹೋರಾಟ ನಡೆಸುತ್ತಿದ್ದರು. ಇಲಾಖೆಗಳಿಗೆ ಮನವಿ ಮಾಡಿ ಹೋರಾಟ ನಡೆಸುವುದಾಗಿ ತಿಳಿಸಿದ್ದರು.
ಇದೀಗ 7 ವರ್ಷಗಳ ಹಿಂದೆ ರಚನೆಯಾದ ಈ ಯೋಜನೆಗೆ ನೀರು ಹಾಯಿಸುವ ಉದ್ದೇಶದಿಂದ ಪುಳಿಕುಕ್ಕಿನಿಂದ ಪೈಪ್ ಲೈನ್ ಅಳವಡಿಕೆಗೆ ಸರ್ವೆ ಕಾರ್ಯ ನಡೆದಿದೆ. ಈ ಬಾರಿ ಟ್ಯಾಂಕ್ ಗೆ ನೀರು ಹಾಯಿಸುವ ಕೆಲಸ ಮಾಡಲಾಗುತ್ತದೆ ಎಂದು ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಸುಂದರಯ್ಯ ತಿಳಿಸಿದ್ದಾರೆ.
ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯೊಂದು ಸಾರ್ವಜನಿಕರ ಹಾಗೂ ಸಾಮಾಜಿಕ ಕಾರ್ಯಕರ್ತರ ಹೋರಾಟದ ಫಲವಾಗಿ ಮತ್ತೆ ಯೋಜನೆ ಚಾಲೂ ಆಗುವ ಸ್ಥಿತಿಗೆ ಬಂದಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…