ಮಳೆ ಇಲ್ಲದೆ ಕರಾವಳಿ ಬಿಸಿ ತಾಪದಿಂದ ಕೂಡಿದ್ದು ಜನಸಂಕಷ್ಟ ಎದುರಿಸುವಂತಾಗಿದ್ದು ಶೀಘ್ರ ಮಳೆ ಪ್ರಾಪ್ತಿಗಾಗಿ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಮನವಿ ಮೇರೆಗೆ ಪರ್ಜನ್ಯ ಜಪ ನೆರವೇರಿತು. ಕಾರ್ಯಕ್ರಮದಲ್ಲಿಶಾಸಕರಾದ ಅಶೋಕ್ ರೈ ಭಾಗವಹಿಸಿ ಮಳೆಗಾಗಿ ದೇವರಲ್ಲಿಪ್ರಾರ್ಥನೆ ಮಾಡಿದರು.
ಮಳೆ ಇಲ್ಲದೆ ಬಿಸಿಲ ತಾಪದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜನ ಬಿಸಿಲಿಗೆ ಕಂಗೆಟ್ಟಿದ್ದು ಮನೆಯಿಂದ ಹೊರಗೆ ಬರಲಾರದ ಸ್ಥಿತಿ ಇದೆ. ಕ್ಷೇತ್ರದ ಕೆಲವು ಕಡೆಗಳಲ್ಲಿಕುಡಿಯುವ ನೀರಿಗೂ ಅಭಾವ ಉಂಟಾಗಿದ್ದು ಮಳೆ ಬಂದು ಜನರ ಸಂಕಷ್ಟ ದೂರವಾಗಲೆಂದು ಪರ್ಜನ್ಯ ಜಪ ನೆರವೇರಿಸಲಾಗಿದೆ. ಮಳೆ ಬಂದು ಎಲ್ಲರಿಗೂ ಸಂತುಷ್ಟಿ ಲಭಿಸಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಪ್ರಾರ್ಥಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…