ಕೃಷಿ ದೇಶದ ಬೆನ್ನೆಲುಬು | ಅರೆಕಾಲಿಕ ರೈತನಿಗೂ ಇತರ ಕ್ಷೇತ್ರದಂತೆ ಮಹತ್ವ ಸಿಗಲಿ | ಗ್ರಾಮೀಣಾಭಿವೃದ್ಧಿಗೆ ಸರ್ಕಾರಕ್ಕೆ ಸಲಹೆ ನೀಡಿದ ಆರ್ಥಿಕ ತಜ್ಞರು

November 6, 2023
11:47 AM
ಮುಂದಿನ ದಿನಗಳಲ್ಲಿ ಭಾರತದ ಬೆಳವಣಿಗೆಯ 50 ಪ್ರತಿಶತದಷ್ಟು ಕೊಡುಗೆಯು ಗ್ರಾಮೀಣ ಭಾಗದಿಂದಲೇ ದೊರೆಯಲಿದೆ. ಹಾಗಾಗಿ ಗ್ರಾಮೀಣ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕಾಗಿದೆ.

ದೇಶದ ಬೆಳವಣಿಗೆಯಲ್ಲಿ  ಪ್ರಮುಖ ಪಾತ್ರ ವಹಿಸೋದು ಕೃಷಿ. ಕೃಷಿಗೆ ಒತ್ತು ಕೊಟ್ಟಷ್ಟು ದೇಶ ಸುಭೀಕ್ಷವಾಗುತ್ತದೆ. ಭಾರತ (India) ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದ(Agricultural sector)ಮೇಲೂ ಗಮನ ಹರಿಸಬೇಕು. ಇದರ ಜೊತೆಗೆ ಅರೆಕಾಲಿಕ ರೈತರಾದ ಸಣ್ಣ ಹಾಗೂ ಕನಿಷ್ಠ ವ್ಯವಸಾಯ ಮಾಡುತ್ತಿರುವ ರೈತರಿಗೆ ಸಹಕಾರಿಯಾಗಿರುವ ಅವರ ಕೃಷಿ ಉತ್ಪನ್ನಗಳಿಂದ ಸಾಕಷ್ಟು ಆದಾಯ ಪಡೆದುಕೊಳ್ಳಬಹುದಾದ ಹೊಸ ಗ್ರಾಮೀಣ ಅಭಿವೃದ್ಧಿ ಮಾದರಿಯ ಅಗತ್ಯವಿದೆ ಎಂದು NITI ಆಯೋಗದ ಸದಸ್ಯ ಮತ್ತು ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞ ರಮೇಶ್ ಚಂದ್ (Agricultural economist Ramesh Chand) ತಿಳಿಸಿದ್ದಾರೆ.

Advertisement
Advertisement

ದೇಶವು 2047 ರಲ್ಲಿ ಅಭ್ಯುದಯ ಭಾರತ ಎಂದೆನಿಸಿದಾಗ ಇದಕ್ಕೆ ಸುಮಾರು 50 ಪ್ರತಿಶತದಷ್ಟು ಕೊಡುಗೆಯು ಗ್ರಾಮೀಣ ಭಾಗದಿಂದಲೇ ದೊರೆಯಲಿದೆ ಹಾಗಾಗಿ ಆ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ. ಪ್ರಸಕ್ತ ವಿದ್ಯಮಾನದಂತೆ ಗ್ರಾಮೀಣ ಆರ್ಥಿಕತೆಯ ಸುಮಾರು ಮೂರನೇ ಒಂದು ಭಾಗವು ಕೃಷಿಯನ್ನು ಆಧರಿಸಿದೆ ಹಾಗೂ ಮೂರನೇ ಎರಡರಷ್ಟು ಆದಾಯವು ಕೃಷಿಯೇತರ ಮೂಲಗಳಿಂದ ಬರುತ್ತದೆ ಆದ್ದರಿಂದ ಗ್ರಾಮೀಣ ಅಭಿವೃದ್ಧಿಯಲ್ಲಿ ಅರೆಕಾಲಿಕ ರೈತರಿಗೆ ಮಹತ್ವ ನೀಡಬೇಕು. ಅದರಲ್ಲೂ ಸಣ್ಣ ಹಾಗೂ ಕನಿಷ್ಠ ವ್ಯವಸಾಯ ಮಾಡುವ ವ್ಯವಸಾಯಿಗರಿಗೆ ಆದ್ಯತೆ ನೀಡಬೇಕು ಎಂದು ರಮೇಶ್ ಚಂದ್ ತಿಳಿಸಿದ್ದಾರೆ.

Advertisement
ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಕೃಷಿಕರಿಗೆ ಬೆಂಬಲ ಸೀಮಿತವಾಗಿದೆ: ಗ್ರಾಮೀಣ ಕೃಷಿಯೇತರ ವಲಯದಿಂದ ಆದಾಯವನ್ನು ಹೆಚ್ಚಿಸಲು NITI ಆಯೋಗ್ ಭಾರತಕ್ಕೆ ಹೊಸ ಅಭಿವೃದ್ಧಿ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಚಂದ್ ಮಾಹಿತಿ ನೀಡಿದರು. ವಿಶ್ವದ ಇತರ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಅದೇ ಬಗೆಯಲ್ಲಿ ಭಾರತ ಕೂಡ ಪ್ರಗತಿ ಸಾಧಿಸುತ್ತಿದೆ. ಆದರೆ ಭಾರತದ ಜನಸಂಖ್ಯೆಯ ಸುಮಾರು 64-65 ಪ್ರತಿಶತದಷ್ಟು ಜನರು ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಇನ್ನು ಬ್ರೆಜಿಲ್‌ಗೆ ಹೋಲಿಸಿದರೆ 12-14% ದಷ್ಟು ಜನರು ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದಾರೆ ಎಂದು ರಮೇಶ್ ಮಾಹಿತಿ ನೀಡಿದ್ದಾರೆ.

ನಗರೀಕರಣವು ಭಾರತದಲ್ಲಿ ನಡೆಯುತ್ತಿದೆ ಆದರೆ ಪ್ರಪಂಚದಾದ್ಯಂತ ಬಹಳ ನಿಧಾನಗತಿಯಲ್ಲಿದೆ. ಆರ್ಥಿಕತೆಯಲ್ಲಿ ಕೃಷಿಯ ಪಾಲು ಕಡಿಮೆಯಾದಾಗ, ಜನರು ಕೃಷಿಯೇತರ ವಲಯದಲ್ಲಿ ಉದ್ಯೋಗಗಳನ್ನು ಪಡೆಯುತ್ತಾರೆ. ಇದು ಭಾರತದಲ್ಲಿ ನಡೆಯುತ್ತಿಲ್ಲ ಎಂಬುದು ರಮೇಶ್ ಚಂದ್ ಮಾತಾಗಿದೆ. ಕೃಷಿ ಹಾಗೂ ಕೃಷಿಕರಿಗೆ ಯಾವ ಮಟ್ಟಿಗೆ ಬೆಂಬಲ ಸಹಕಾರ ದೊರೆಯುತ್ತಿದೆ ಎಂಬುದನ್ನು ಗಮನಿಸುವುದಾದರೆ ಕಳೆದ ಏಳು ವರ್ಷಗಳ ಇತ್ತೀಚಿನ ಪಿಎಲ್‌ಎಫ್‌ಎಸ್ ಅಂಕಿ ಅಂಶಗಳ ಪ್ರಕಾರ ಕೃಷಿಯಿಂದ ಉದ್ಯಮಕ್ಕೆ ಕಾರ್ಮಿಕ ಬಲವನ್ನು ಬದಲಾಯಿಸುವ ಪ್ರವೃತ್ತಿ ನಿಂತುಹೋಗಿದೆ ಎಂಬುದು ತಿಳಿದು ಬಂದಿದೆ ಎಂಬುದಾಗಿ ಹೇಳಿದ್ದಾರೆ. ರಚನಾತ್ಮಕ ರೂಪಾಂತರವು ಉತ್ಪಾದನೆಯಲ್ಲಿ ನಡೆಯುತ್ತಿದೆ ಆದರೆ ಉದ್ಯೋಗದಲ್ಲಿ ಅಲ್ಲ ಎಂದು ಚಂದ್ ತಿಳಿಸಿದ್ದಾರೆ.

ಸಣ್ಣ ಹಾಗೂ ಕನಿಷ್ಠ ವ್ಯವಸಾಯ ಮಾಡುವ ರೈತರಿಗೆ ಬೆಂಬಲ ದೊರೆಯಬೇಕು: ಪಂಚಾಯಿತಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಸಮರ್ಪಕವಾಗಿ ಅಧಿಕಾರ ನೀಡಬೇಕಾಗಿದೆ, ಮತ್ತು ಗ್ರಾಮೀಣ ಸಾಮಾನ್ಯ ಆಸ್ತಿಗಳ ವ್ಯಾಪಾರೀಕರಣವನ್ನು ತಡೆಯಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಂದು ಅವರು ಕರೆ ನೀಡಿದರು. ನಗರೀಕರಣವು ಸಂಭವಿಸಿದಾಗ ಪ್ರಪಂಚದ ಇತರ ಭಾಗಗಳಿಗಿಂತ ಭಿನ್ನವಾಗಿ, ಏಷ್ಯಾದಲ್ಲಿ ದೊಡ್ಡ ಕೃಷಿಕ್ಷೇತ್ರಗಳು ತಯಾರಾಗಲು ಸಾಧ್ಯವಿಲ್ಲ ಎಂದು ಚಂದ್ ಹೇಳಿದ್ದು ಇದಕ್ಕೆ ಅಧ್ಯಯನದ ದಾಖಲೆಯನ್ನು ಅವರು ಮುಂದಿಟ್ಟಿದ್ದಾರೆ. 47% ದಷ್ಟು ಸಣ್ಣ ಹಾಗೂ ಮಾರ್ಜಿನಲ್ ರೈತರುಗಳು ದೊಡ್ಡ ದೊಡ್ಡ ಶ್ರೀಮಂತ ಕೃಷಿಕರಿಗಿಂತ ಹೆಚ್ಚು ದಕ್ಷರಾಗಿದ್ದಾರೆ ಅವರ ಕೃಷಿ ಭೂಮಿ ಸಣ್ಣದಾಗಿದೆ ಹಾಗಾಗಿ ಅವರ ಕೃಷಿಭೂಮಿಯಿಂದ ಸಾಕಷ್ಟು ಆದಾಯ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

Advertisement

Ramesh, a member of the NITI Commission and a renowned agricultural economist, said that as India is moving towards the path of development day by day, attention should be paid to the agricultural sector and a new rural development model that can help small and marginal farmers such as part-time farmers and get sufficient income from their agricultural products. Chand (Agricultural economist Ramesh Chand) said. – ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather |11-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ |
May 11, 2024
11:40 AM
by: ಸಾಯಿಶೇಖರ್ ಕರಿಕಳ
ಕೃಷಿ ಬೆಳೆಯಲು ಕೃಷಿಯೂ ಪಠ್ಯದ ಭಾಗವಾಗಬೇಕು | ಪದ್ಮಶ್ರೀ ಸತ್ಯನಾರಾಯಣ ಬೆಳೆರಿ ಅಭಿಪ್ರಾಯ |
May 10, 2024
10:00 PM
by: ಮಹೇಶ್ ಪುಚ್ಚಪ್ಪಾಡಿ
ಅಕ್ಷಯ ತೃತೀಯ | ಅನಂತ ಶುಭವನ್ನು ತರುವ ಹಬ್ಬ | ಚಿನ್ನ ಖರೀದಿಸುವುದೊಂದೇ ಅಕ್ಷಯ ತೃತೀಯ ಅಲ್ಲ..!
May 10, 2024
1:56 PM
by: The Rural Mirror ಸುದ್ದಿಜಾಲ
ಪಾರಂಪರಿಕ ಬೀಜೋತ್ಸವ | ದಾವಣಗೆರೆಯಲ್ಲಿ ಮೇ.12 ರಂದು ನಡೆಯಲಿದೆ ಸಂಭ್ರಮದ ಬೀಜ ವೈಭವ |
May 10, 2024
1:28 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror