ಕೃಷಿ ಬೆಳೆಯಲು ಕೃಷಿಯೂ ಪಠ್ಯದ ಭಾಗವಾಗಬೇಕು | ಪದ್ಮಶ್ರೀ ಸತ್ಯನಾರಾಯಣ ಬೆಳೆರಿ ಅಭಿಪ್ರಾಯ |

May 10, 2024
10:00 PM
ಶಿಕ್ಷಣ ಪದ್ದತಿ ಬದಲಾಗಬೇಕು. ಕೃಷಿಯೂ ಪಠ್ಯದಭಾಗವಾಬೇಕು.ಎಳವೆಯಲ್ಲಿಯೇ ಕೃಷಿಯನ್ನು ಕಲಿಯುವ ಹಾಗೆ ಆಗಬೇಕು ಎನ್ನುತ್ತಾರೆ ಕೃಷಿಕ ಸತ್ಯನಾರಾಯಣ ಬೆಳೆರಿ.

ಸುಮಾರು 650ಕ್ಕೂ ಮಿಕ್ಕಿದ ವಿವಿಧ ತಳಿಗಳನ್ನು ಸಂರಕ್ಷಿಸುತ್ತಿರುವ ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಬೆಳೆರೆ ಸತ್ಯನಾರಾಯಣ ಅವರು ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಗುರುವಾರ ಪ್ರಶಸ್ತಿಯನ್ನು ಸ್ವೀಕರಿಸಿದರು. …….ಮುಂದೆ ಓದಿ…..

ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ಸತ್ಯನಾರಾಯಣ ಬೆಳೆರಿ

ಪೂರ್ವಜರಿಂದ ಬಳುವಳಿಯಾಗಿ ಬಂದ ಸುಮಾರು 4 ಎಕರೆ ಜಮೀನಿನಲ್ಲಿ ಕೃಷಿ ನಡೆಸಿಕೊಂಡು ಬರುತ್ತಿರುವ ಸತ್ಯನಾರಾಯಣ ಅವರು  ಅಡಿಕೆ, ತೆಂಗು , ರಬ್ಬರ್ ಹಾಗು ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.‌ ಹಲಸು ಗಿಡ ಕಸಿ ಮಾಡುವುದರಲ್ಲೂ ಅವರು ಪರಿಣಿತರು.  ಮೊದಲು ಗ್ರೋ ಬ್ಯಾಗ್ ನಲ್ಲಿ ಭತ್ತದ ತಳಿಗಳನ್ನು ಬೆಳೆಸಲು ಆರಂಭಿಸಿದ ಸತ್ಯನಾರಾಯಣ ಅವರಿಗೆ ಅಡಿಕೆ ಪತ್ರಿಕೆ ಮೂಲಕ ಚೆರ್ಕಾಡಿ ರಾಮಚಂದ್ರ, ಬೆಳ್ತಂಗಡಿಯ ಬಿ.ಕೆ. ದೇವರಾಯರ ಪರಿಚಯವಾಗಿ ಭತ್ತದ ತಳಿ ಸಂರಕ್ಷಣೆಯ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಹಲವು ಕಡೆಗಳಿಂದ ಭತ್ತದ ತಳಿಗಳ ಸಂಗ್ರಹಿಸಿರುವ ಇವರ ಸಂಗ್ರಹದಲ್ಲಿ 650ಕ್ಕೂ ಮಿಕ್ಕಿದ ವಿವಿಧ ಭತ್ತದ ತಳಿಗಳಿವೆ. ತಳಿಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳಿಗೆ, ಅಧ್ಯಯನಶೀಲ ವಿದ್ಯಾರ್ಥಿಗಳಿಗೆ, ಆಸಕ್ತ ಕೃಷಿಕರಿಗೆ ಉಚಿತವಾಗಿ ನೀಡುತ್ತಿರುವ ಸತ್ಯನಾರಾಯಣ ಬೆಳೆರಿ ಮೂಲ ತಳಿಯನ್ನು ಸಂರಕ್ಷಿಸುವ ಕೆಲಸ ಅತ್ಯಂತ ಕಷ್ಟಕರ ಎನ್ನುತ್ತಾರೆ. ಈ ವಾರದ ದ ರೂರಲ್‌ ಮಿರರ್.ಕಾಂ ಅತಿಥಿಯಾಗಿ ಕೃಷಿ-ಗ್ರಾಮೀಣ ಬದುಕಿನ ಬಗ್ಗೆ ಅವರು ಮಾತನಾಡಿದ್ದು ಹೀಗೆ….

ಸತ್ಯನಾರಾಯಣ ಬೆಳೆರಿ
ಇಂದು ಕೃಷಿಯಿಂದ ಯುವ ತಲೆಮಾರು ವಿಮುಖವಾಗುತ್ತಿದ್ದಾರೆ. ಕೃಷಿಗೆ ಪೂರಕವಾದ ವ್ಯವಸ್ಥೆ ಸರ್ಕಾರ, ಸಮಾಜದಿಂದ ಸಿಗುತ್ತಿಲ್ಲ. ಹೀಗಾಗಿ ಯುವ ಜನತೆ ಪೇಟೆಗೂ ಹೋಗುತ್ತಾರೆ. ಹೀಗಾಗಿ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡುವ ಹಾಗೆ ಆಗಬೇಕು. ಇದಕ್ಕಾಗಿ ಶಿಕ್ಷಣ ಪದ್ದತಿ ಬದಲಾಗಬೇಕು. ಕೃಷಿಯೂ ಪಠ್ಯದಭಾಗವಾಬೇಕು.ಎಳವೆಯಲ್ಲಿಯೇ ಕೃಷಿಯನ್ನು ಕಲಿಯುವ ಹಾಗೆ ಆಗಬೇಕು. ಶಿಕ್ಷಣದ ಭಾಗವಾಗಿ ಕೃಷಿಯೂ ಬಂದರೆ ಮಕ್ಕಳಿಗೆ ಎಳವೆಯಲ್ಲಿಯೇ ಆಸಕ್ತಿ ಬೆಳೆಯುತ್ತದೆ.

ಕಲಿಕೆಯ ನಂತರ ಕೃಷಿಗೆ ಬಂದರೆ ಉನ್ನತವಾದ ಹೊಸ ಹೊಸ ಪ್ರಯೋಗ ಮಾಡಬಹುದು, ಅಧ್ಯಯನ ಕೂಡಾ ಮಾಡಬಹುದು ಹೀಗಾಗಿ ಕಲಿತವರು ಕೃಷಿಗೆ ಬರಬೇಕು. ಕೃಷಿಯಲ್ಲಿ ಇರುವಷ್ಟು ಸ್ವಾವಲಂಬನೆ ಬೇರೆಲ್ಲೂ ಇಲ್ಲ. ಬೇರೆಲ್ಲಾ ಕಡೆ ಬೇರೆಯವರ ಕೈಕೆಳಗೆ ದುಡಿಯಬೇಕು. ಇಲ್ಲಿ ಹಾಗಿಲ್ಲ. ಕೃಷಿಯಲ್ಲಿ ಇರುವಷ್ಟು ನೆಮ್ಮದಿ ಬೇರೆಲ್ಲೂ ಇಲ್ಲ.ನಾವೇ ಕೃಷಿ ಮಾಡುವ ಕಾರಣದಿಂದ ನಮ್ಮಲ್ಲಿಯ ಸ್ವಾತಂತ್ರ್ಯದಿಂದ ಉನ್ನತ ಸ್ಥಾನಮಾನ ಸಿಗಬಹುದು.ಜೀವನದಲ್ಲಿ ನೆಮ್ಮದಿ ಬಹುಮುಖ್ಯ, ಅದು ಕೂಡಾ ಕೃಷಿಯಿಂದ ಸಾಧ್ಯ.

ಜೀವನದಲ್ಲಿ ಆರೋಗ್ಯ ಮುಖ್ಯ. ಆರೋಗ್ಯ ಇಲ್ಲದಿದ್ದರೆ ಏನಿದ್ದರೂ ಪ್ರಯೋಜನ  ಇಲ್ಲ. ಆರೋಗ್ಯ ಉಳಿಸಿಕೊಳ್ಳಲು ಹೀಗಾಗಿ ಕೀಟನಾಶಕ ಬಳಕೆ ಮಾಡದ ಆಹಾರ ಬಳಕೆ ಮಾಡಬೇಕು. ಎಲ್ಲವೂ ವಿಷಯುಕ್ತವಾಗುತ್ತಿರುವ ಇಂದು, ನಾವೇ ಸ್ವತ: ಬೆಳೆಯುವಾಗ ಕಡಿಮೆ ರಾಸಾಯನಿಕ ಬಳಕೆ ಮಾಡಿದರೆ ಉತ್ತಮ ಗುಣಮಟ್ಟದ ಆಹಾರವೂ ಕೃಷಿಯಿಂದ ಸಾಧ್ಯವಿದೆ. ಅವಲಂಬನೆ ಮಾಡದೇ ಇದ್ದಾಗ ಕ್ವಾಲಿಟಿ ಆಹಾರವೂ ಸಾಧ್ಯ. ಕಡಿಮೆ ಜಾಗದಲ್ಲಿ ಇದ್ದವರಿಗೂ ಇದು ಸಾಧ್ಯ. ಅವರಿಗೆ ಬೇಕಾದ ತರಕಾರಿ ಬೆಳೆಯಲು ಕಡಿಮೆ ಜಾಗದಲ್ಲೂ ಸಾಧ್ಯವಿದೆ. ಎಲ್ಲದಕ್ಕೂ ಮನಸ್ಸು ಬಹಳ ಮುಖ್ಯ.

Education system should change. Agriculture should also be part of the curriculum. Agriculture should be learned through education Says PadmaShri awardee farmer Satyanarayan Beleri.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ
July 14, 2026
7:01 AM
by: ದ ರೂರಲ್ ಮಿರರ್.ಕಾಂ
ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ
July 14, 2026
6:53 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror