ಬೆಳಗಿನಿಂದಲೇ ಸಡಗರದಿಂದ ಕೆಲಸ ಮಾಡುತ್ತಿರುವ ಅಜ್ಜಿಯನ್ನು ರಜೆಯಲ್ಲಿ ಮನೆಗೆ ಬಂದ ಮೊಮ್ಮಗಳಿಗೆ ನೋಡಿಯೇ ಬಾಕಿ..! ಯಾವಾಗಲೂ ಅಲ್ಲಿ ನೋವು ಇಲ್ಲಿ ನೋವು ಎಂದು ಬೆನ್ನು ಬಗ್ಗಿಸಿ ನಡೆಯುವ ಅಜ್ಜಿಯ ನೋವುಗಳೆಲ್ಲಾ ಇಂದು ಮಾಯ. ಕುತೂಹಲದಿಂದ ಅಜ್ಜಿಯನ್ನು ನೋಡುತ್ತಿದ್ದ ಮೊಮ್ಮಗಳಿಗೆ ಏನೂ ಕೇಳದೇ ಉತ್ತರ ಸಿಕ್ಕಿತು….. ಇವತ್ತು “ಪತ್ತನಾಜೆ”ಯಲ್ಲವಾ, ಮಾವ ಮನೆಗೆ ಬರುತ್ತಿದ್ದಾನೆ…!
ಬಹಳ ಸಮಯದ ಮೇಲೆ ಮನೆಗೆ ಬರುತ್ತಿದ್ದಾನೆ. ನೀನು ಬಂದುದು ನೋಡಿ ಅವನು ಖುಷಿ ಪಡುತ್ತಾನೆ . ಯಕ್ಷಗಾನ ಮೇಳದಲ್ಲಿ ವೇಷ ಹಾಕುವ ಮಾವನೆಂದರೆ ಮಕ್ಕಳಿಗೆ ಬಹಳ ಇಷ್ಟ. ಮೇಳದ ರಂಜನೀಯ ಕಥೆಗಳನ್ನು, ಪೌರಾಣಿಕ ಪ್ರಸಂಗಗಳನ್ನು ಮಾವ ಹೇಳುತ್ತಿದ್ದರೆ ಮಕ್ಕಳಿಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಹೌದಾ ಮಾವನಿಗೆ ರಜೆಯುಂಟಾ? ಎಷ್ಟು ದಿನ ? ಎಂಬ ಪ್ರಶ್ನೆಗೆ ಅಜ್ಜಿ ಖುಷಿಯಿಂದ ಉತ್ತರ ಕೊಟ್ಟಳು. ನೋಡು ಮಗ ಇಂದು ಪತ್ತನಾಜೆ. ತುಳು ತಿಂಗಳ ಹತ್ತನೇಯ ದಿನ. ಇಂದಿನಿಂದ ಮಳೆಗಾಲ ಆರಂಭ ಎಂಬುದು ಇಲ್ಲಿನವರ ನಂಬಿಕೆ. ಹಾಗಾಗಿ ಭೂತ ಕೋಲ, ನೇಮ, ತಂಬಿಲ, ಯಕ್ಷಗಾನ, ಜಾತ್ರೆಗಳಿಗೆಲ್ಲ ಇನ್ನು ವಿರಾಮ.ಗದ್ದೆ ಬೇಸಾಯದ ಕೆಲಸಗಳೆಲ್ಲ ಆರಂಭಿಸಲು ಸಕಾಲ. ಪತ್ತನಾಜೆಯಾದ ಮೇಲೆ ದೈವ ಬೂತಗಳೆಲ್ಲಾ ಘಟ್ಟ ಹತ್ತುತ್ತವೆ ಎಂಬುದು ಜನಸಾಮಾನ್ಯರ ನಂಬಿಕೆ. ದೀಪೋತ್ಸವಕ್ಕೆ ಮತ್ತೆ ಶುರು ಆಗುವ ಮೇಳಗಳ ತಿರುಗಾಟಕ್ಕೆ ಪತ್ತನಾಜೆಯಿಂದ ವಿಶ್ರಾಂತಿ. ಊರಿಂದ ಊರಿಗೆ ತಿರುಗಾಡಿ ಸುಸ್ತಾದ ಕಲಾವಿದರ ಪಯಣಕ್ಕೆ ತಾತ್ಕಾಲಿಕ ವಿರಾಮ. ಬೇಸಾಯ ,ತೋಟದ ಕೆಲಸಗಳಲ್ಲಿ ಮಾವ ತೊಡಗುವುದರಿಂದ ನಮಗೂ ನೆಮ್ಮದಿ ಎಂದು ಅಜ್ಜಿಯ ಕಣ್ಣಲ್ಲಿ ತೆಳ್ಳನೆಯ ಕಣ್ಣೀರು.
ಪತ್ತನಾಜೆಯು ದಕ್ಷಿಣ ಕನ್ನಡ , ಉಡುಪಿ ಕಾಸರಗೋಡುಗಳಲ್ಲಿ ಆಚರಣೆಯಲ್ಲಿದೆ. ಹಿಂದೆ ಆರು ತಿಂಗಳು ಸತತ ಮಳೆಯಾಗುತ್ತಿದ್ದದ್ದರಿಂದ ಜಾತ್ರೆ, ನೇಮಗಳು, ಯಕ್ಷಗಾನಗಳನ್ನು ಈ ತಿಂಗಳುಗಳಲ್ಲಿ ನಡೆಸುವುದು ಕಷ್ಟಸಾಧ್ಯವಾದುದರಿಂದ
ಪತ್ತನಾಜೆಯನ್ನು ಒಂದು ಗಡುವೆಂದು ಜನರು ಪರಿಗಣಿಸಿರುವ ಸಾಧ್ಯತೆ ಇದೆ. ಆದರೆ ಇಲ್ಲಿನ ಜನರು ಈ ಪದ್ಧತಿ ಯನ್ನು ಬಹು ಶ್ರದ್ಧೆಯಿಂದ ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಪತ್ತನಾಜೆಗೆ ಪತ್ತ್ ಪನಿ ಎಂಬ ಮಾತು ಚಾಲ್ತಿಯಲ್ಲಿದೆ.
ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…
ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…
ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…
ಕ್ಯಾನ್ಸರ್ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ…
ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕನ್ನು ಪರಿಗಣಿಸದೇ ಯೂರಿಯಾ ಸೇರಿದಂತೆ…
ನಾಗರಪಂಚಮಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಪವಿತ್ರ ಹಬ್ಬವಾಗಿದೆ.…