ವಳಲಂಬೆಯಲ್ಲಿ ಪಾವಂಜೆ ಮೇಳದಿಂದ ಯಕ್ಷಗಾನ | ಕಲಾವಿದ ಕುಮಾರ ಸುಬ್ರಹ್ಮಣ್ಯ, ಸತೀಶ್‌ ಪಟ್ಲ ಅವರಿಗೆ ಗೌರವಾರ್ಪಣೆ |

May 16, 2022
10:43 AM

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಪಾವಂಜೆ ಶ್ರೀಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಿತು. ವಿಶ್ವನಾಥ ಪುಚ್ಚಪ್ಪಾಡಿ ಹಾಗೂ ಮನೆಯವರಿಂದ ಸೇವೆಯಾಟವಾಗಿ ಶ್ರೀದೇವಿ ಮಹಾತ್ಮೆ ಪ್ರಸಂಗ ನಡೆಸಲಾಗಿತ್ತು. ಈ ಸಂದರ್ಭ ಕಲಾವಿದ ಕುಮಾರ ಸುಬ್ರಹ್ಮಣ್ಯ ಹಾಗೂ ಖ್ಯಾತ ಭಾಗವತ ಸತೀಶ್‌ ಶಟ್ಟಿ ಪಟ್ಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಖ್ಯಾತ ಭಾಗವತ ಸತೀಶ್‌ ಶಟ್ಟಿ ಪಟ್ಲ, ಕುಮಾರ ಸುಬ್ರಹ್ಮಣ್ಯ ಅವರು ಅತ್ಯಂತ ಹಿರಿಯರೂ ಗುರುಗಳೂ ಆಗಿದ್ದಾರೆ. ಅನೇಕರಿಗೆ ಯಕ್ಷಗಾನ ಕಲೆಯನ್ನು ಧಾರೆ ಎರೆದವರು. ಹೀಗಾಗಿ ಸೂಕ್ತ ವ್ಯಕ್ತಿಗೆ ಸನ್ಮಾನ ಮಾಡಲಾಗಿದೆ ಎಂದರು.

ವೇದಿಕೆಯಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ ಕೆ ಬೆಳ್ಯಪ್ಪ ಗೌಡ, ಯಕ್ಷಗಾನ ಸಂಘಟಕ ಡಾ.ವಿಷ್ಣುಪ್ರಸಾದ್‌ , ಸೇವಾಕರ್ತರಾದ ವಿಶ್ವನಾಥ ಪುಚ್ಚಪ್ಪಾಡಿ, ಹರಿಸುಬ್ರಹ್ಮಣ್ಯ ಪುಚ್ಚಪ್ಪಾಡಿ ಉಪಸ್ಥಿತರಿದ್ದರು. ಇದೇ ವೇಳೆ ಪುಚ್ಚಪ್ಪಾಡಿ ಮನೆಯವರ ಪರವಾಗಿ ಬ್ರಿವೆರಾ ಟೆಕ್ನಾಲಜೀಸ್‌ ನ ವೆಂಕಟೇಶ್‌ ಪುಚ್ಚಪ್ಪಾಡಿ ಅವರು ಯಕ್ಷದ್ರುವ ಪೌಂಡೇಶನ್‌ಗೆ ದೇಣಿಗೆ ನೀಡಿದರು.

ಅಪರ್ಣಾ ಪುಚ್ಚಪ್ಪಾಡಿ ಸ್ವಾಗತಿಸಿ ನಿರೂಪಿಸಿದರು. ಮಹೇಶ್‌ ಪುಚ್ಚಪ್ಪಾಡಿ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಂದೇ ತೋಟದಲ್ಲಿ ಹಲವು ಬೆಳೆ – ವರ್ಷಪೂರ್ತಿ ಆದಾಯ | ಗದಗದ ರೈತ ಸಹೋದರರ ಸಮಗ್ರ ಕೃಷಿ ಮಾದರಿ
March 10, 2026
11:25 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಇಳುವರಿ ಕುರಿತು “ದ ರೂರಲ್ ಮಿರರ್.ಕಾಂ” ಸಮೀಕ್ಷೆ | ಬಹುತೇಕ ತೋಟಗಳಲ್ಲಿಅಡಿಕೆ ಇಳುವರಿ ಕುಸಿತ
March 10, 2026
10:42 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ | ಮಾರ್ಚ್‌ ತಿಂಗಳ ಇಳಿಕೆಗೆ ಹಲವು ಕಾರಣ…
March 10, 2026
1:25 PM
by: ದ ರೂರಲ್ ಮಿರರ್.ಕಾಂ
ಪೂರ್ವ ಮುಂಗಾರು ಸಿಡಿಲು, ಗಾಳಿ ಮಳೆಗೆ ಮುನ್ನೆಚ್ಚರಿಕೆ ವಹಿಸಿ : ವಿಜಯನಗರ ಜಿಲ್ಲಾಧಿಕಾರಿ ಸೂಚನೆ
March 10, 2026
6:48 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror