ಪುತ್ತೂರಿನ ಸಂಗೀತ ಸಾಧಕಿ – ಪವಿತ್ರಾ ರೂಪೇಶ್

December 12, 2020
1:56 PM

ಅದು ತೊದಲು ನುಡಿಯಲ್ಲಿ ಮಾತನಾಡುತ್ತಾ ಅಕ್ಷರಗಳನ್ನು ಕಲಿಯುವ ಪ್ರಾಯ. ಆದರೆ ಅದಾಗಲೇ ಸರಸ್ವತಿ ದೇವಿ ಆ ಪುಟ್ಟ
ಹುಡುಗಿಯ ಬಾಯಲ್ಲಿ ತಾಳ-ರಾಗ-ಲಯಬದ್ಧವಾಗಿ ಹಾಡಲು ಆಶೀರ್ವಾದಿಸಿ ಆಗಿತ್ತು.

Advertisement
Advertisement
Advertisement

ತನ್ನ ಮೂರನೇ ವಯಸ್ಸಿನಲ್ಲಿಯೇ ವಿದ್ವಾನ್ ಶ್ರೀ ಮಧೂರ್ ಪಿ. ಬಾಲಸುಬ್ರಹ್ಮಣ್ಯಂ ರಿಂದ ಸಂಗೀತಾಭ್ಯಾಸ ಮಾಡಿ ಕನಕದಾಸ ವಾಧಿರಾಜರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರೇ  ಪವಿತ್ರಾ ರೂಪೇಶ್. ಪುತ್ತೂರಿನ ಪ್ರತಿಷ್ಟಿತ ಉದ್ಯಮಿ ರೂಪೇಶ್ ಸೇಟ್‍ ಅವರ ಧರ್ಮಪತ್ನಿ. ಮಣಿಪಾಲದ ಫಾರ್ಮಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಉಡುಪ ಹಾಗೂ ವಿಜಯಲಕ್ಷ್ಮೀ .ಕೆ. ದಂಪತಿಗಳ ಸುಪುತ್ರಿಯಾಗಿರುವ ಪವಿತ್ರಾರವರಿಗೆ ಸಣ್ಣ ವಯಸ್ಸಿನಿಂದಲೇ ಸಂಗೀತ, ಹಾಡುಗಾರಿಕೆಯಲ್ಲಿ ವಿಶೇಷ ಆಸಕ್ತಿ. ವಿದುಷಿ  ಶುಭಾ ರಾವ್ ಹಾಗು ವಿದುಷಿ  ಶಕುಂತಳಾ ಭಟ್ ಮೊದಲಾದವರಿಂದ ಸಂಗೀತ ಅಭ್ಯಾಸ ಮಾಡಿ, ಸಂಗೀತದಲ್ಲಿ ಜ್ಯೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. 2005ರಲ್ಲಿ ಕರ್ನಾಟಕ ಸರಕಾರ ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿ
ಸಂಗೀತದಲ್ಲಿ ವಿದುಷಿಯಾದರು. ಇದಲ್ಲದೆ ಸಿ.ಸಿ.ಆರ್,ಟಿ. ವಿದ್ಯಾರ್ಥಿವೇತನವನ್ನು ಏಳು ವರ್ಷ ಪಡೆದುಕೊಂಡ ಗಟ್ಟಿಗಾತಿ ಇವರು.  ತಮ್ಮ ಸ್ವರ ಮಾಧುರ್ಯದಿಂದಾಗಿ ಮಂಗಳೂರು ಆಕಾಶವಾಣಿಯಲ್ಲಿ “ಎ” ಗ್ರೇಡ್ ಕಲಾವಿದರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2007ರಲ್ಲಿ ಝೀ ಕನ್ನಡ ವಾಹಿನಿ ಗೃಹಿಣಿಯರಿಗಾಗಿ ನಡೆಸಿದ ಸರಿಗಮಪ ಸೀಸನ್‍ನಲ್ಲಿ ಅಂತಿಮ
ಹಂತದವರೆಗೂ ಪುತ್ತೂರನ್ನು ಪ್ರತಿನಿಧಿಸಿದ ಇವರು ತಮ್ಮ ಮನೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಕ್ಕಳಿಗೆ ಸಂಗೀತ ಹಾಗೂ
ಸುಗಮ ಸಂಗೀತ ಹೇಳಿಕೊಡುತ್ತಿದ್ದಾರೆ.

Advertisement

 

Advertisement

ಮಂಗಳೂರು, ಉಡುಪಿ, ಪುತ್ತೂರು, ಬೆಂಗಳೂರು, ಮೈಸೂರು, ಉಡುಪಿ ಶ್ರೀ ಕೃಷ್ಣಮಠ, ಮಂಗಳೂರಿನ ಕರಾವಳಿ ಉತ್ಸವ,
ದೇವಸ್ಥಾನಗಳು ಹಾಗೂ ಬೇರೆ ಬೇರೆ ಪ್ರಸಿದ್ದ ಸ್ಥಳಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಪವಿತ್ರಾ ರೂಪೇಶ್‍ರವರು ತಮ್ಮ ಊರಾದ ಪುತ್ತೂರಿನಲ್ಲಿ “ಕಾಮಾಕ್ಷಿ ಸಂಗೀತ ಪಾಠಶಾಲೆ” ಯ ಮುಖ್ಯಸ್ಥರಾಗಿದ್ದಾರೆ. ಸದ್ಯ ತಮ್ಮದೇ ಒಂದು ಯೂ ಟ್ಯೂಬ್‌ ಚಾನೆಲ್ 

Advertisement

  ಪ್ರಾರಂಭಿಸಿರುವ ಪವಿತ್ರಾ ರೂಪೇಶ್ ತಮ್ಮ “ಮಿಲೇ ಹೋ ತುಮ್” ಹಿಂದಿ ಆಲ್ಬಮ್ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಶಾಸ್ತ್ರೀಯ ಹಾಗೂ ಫಿಲ್ಮಿ ಮ್ಯೂಸಿಕ್ ಎರಡರಲ್ಲೂ ಸೈ ಎನಿಸಿಕೊಂಡಿರುವ ಪವಿತ್ರಾ ರೂಪೇಶ್ ತಮ್ಮ ಈ ಯಶಸ್ಸಿಗೆ ತಂದೆ- ತಾಯಿ, ಪತಿ, ಅತ್ತೆ- ಮಾವನ, ಬಂಧು-ಬಳಗದವರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ.  ಪುತ್ತೂರಿನ ಈ ಸಂಗೀತ ಸಾಧಕಿಯ ಮುಂದಿನ ಪಯಣಕ್ಕೆ ಶುಭ ಹಾರೈಸೋಣ.

 

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |
November 23, 2024
5:59 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror