ಅದು ತೊದಲು ನುಡಿಯಲ್ಲಿ ಮಾತನಾಡುತ್ತಾ ಅಕ್ಷರಗಳನ್ನು ಕಲಿಯುವ ಪ್ರಾಯ. ಆದರೆ ಅದಾಗಲೇ ಸರಸ್ವತಿ ದೇವಿ ಆ ಪುಟ್ಟ
ಹುಡುಗಿಯ ಬಾಯಲ್ಲಿ ತಾಳ-ರಾಗ-ಲಯಬದ್ಧವಾಗಿ ಹಾಡಲು ಆಶೀರ್ವಾದಿಸಿ ಆಗಿತ್ತು.
ತನ್ನ ಮೂರನೇ ವಯಸ್ಸಿನಲ್ಲಿಯೇ ವಿದ್ವಾನ್ ಶ್ರೀ ಮಧೂರ್ ಪಿ. ಬಾಲಸುಬ್ರಹ್ಮಣ್ಯಂ ರಿಂದ ಸಂಗೀತಾಭ್ಯಾಸ ಮಾಡಿ ಕನಕದಾಸ ವಾಧಿರಾಜರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರೇ ಪವಿತ್ರಾ ರೂಪೇಶ್. ಪುತ್ತೂರಿನ ಪ್ರತಿಷ್ಟಿತ ಉದ್ಯಮಿ ರೂಪೇಶ್ ಸೇಟ್ ಅವರ ಧರ್ಮಪತ್ನಿ. ಮಣಿಪಾಲದ ಫಾರ್ಮಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಉಡುಪ ಹಾಗೂ ವಿಜಯಲಕ್ಷ್ಮೀ .ಕೆ. ದಂಪತಿಗಳ ಸುಪುತ್ರಿಯಾಗಿರುವ ಪವಿತ್ರಾರವರಿಗೆ ಸಣ್ಣ ವಯಸ್ಸಿನಿಂದಲೇ ಸಂಗೀತ, ಹಾಡುಗಾರಿಕೆಯಲ್ಲಿ ವಿಶೇಷ ಆಸಕ್ತಿ. ವಿದುಷಿ ಶುಭಾ ರಾವ್ ಹಾಗು ವಿದುಷಿ ಶಕುಂತಳಾ ಭಟ್ ಮೊದಲಾದವರಿಂದ ಸಂಗೀತ ಅಭ್ಯಾಸ ಮಾಡಿ, ಸಂಗೀತದಲ್ಲಿ ಜ್ಯೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. 2005ರಲ್ಲಿ ಕರ್ನಾಟಕ ಸರಕಾರ ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿ
ಸಂಗೀತದಲ್ಲಿ ವಿದುಷಿಯಾದರು. ಇದಲ್ಲದೆ ಸಿ.ಸಿ.ಆರ್,ಟಿ. ವಿದ್ಯಾರ್ಥಿವೇತನವನ್ನು ಏಳು ವರ್ಷ ಪಡೆದುಕೊಂಡ ಗಟ್ಟಿಗಾತಿ ಇವರು. ತಮ್ಮ ಸ್ವರ ಮಾಧುರ್ಯದಿಂದಾಗಿ ಮಂಗಳೂರು ಆಕಾಶವಾಣಿಯಲ್ಲಿ “ಎ” ಗ್ರೇಡ್ ಕಲಾವಿದರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2007ರಲ್ಲಿ ಝೀ ಕನ್ನಡ ವಾಹಿನಿ ಗೃಹಿಣಿಯರಿಗಾಗಿ ನಡೆಸಿದ ಸರಿಗಮಪ ಸೀಸನ್‍ನಲ್ಲಿ ಅಂತಿಮ
ಹಂತದವರೆಗೂ ಪುತ್ತೂರನ್ನು ಪ್ರತಿನಿಧಿಸಿದ ಇವರು ತಮ್ಮ ಮನೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಕ್ಕಳಿಗೆ ಸಂಗೀತ ಹಾಗೂ
ಸುಗಮ ಸಂಗೀತ ಹೇಳಿಕೊಡುತ್ತಿದ್ದಾರೆ.
ಮಂಗಳೂರು, ಉಡುಪಿ, ಪುತ್ತೂರು, ಬೆಂಗಳೂರು, ಮೈಸೂರು, ಉಡುಪಿ ಶ್ರೀ ಕೃಷ್ಣಮಠ, ಮಂಗಳೂರಿನ ಕರಾವಳಿ ಉತ್ಸವ,
ದೇವಸ್ಥಾನಗಳು ಹಾಗೂ ಬೇರೆ ಬೇರೆ ಪ್ರಸಿದ್ದ ಸ್ಥಳಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಪವಿತ್ರಾ ರೂಪೇಶ್‍ರವರು ತಮ್ಮ ಊರಾದ ಪುತ್ತೂರಿನಲ್ಲಿ “ಕಾಮಾಕ್ಷಿ ಸಂಗೀತ ಪಾಠಶಾಲೆ” ಯ ಮುಖ್ಯಸ್ಥರಾಗಿದ್ದಾರೆ. ಸದ್ಯ ತಮ್ಮದೇ ಒಂದು ಯೂ ಟ್ಯೂಬ್ ಚಾನೆಲ್
ಪ್ರಾರಂಭಿಸಿರುವ ಪವಿತ್ರಾ ರೂಪೇಶ್ ತಮ್ಮ “ಮಿಲೇ ಹೋ ತುಮ್” ಹಿಂದಿ ಆಲ್ಬಮ್ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಶಾಸ್ತ್ರೀಯ ಹಾಗೂ ಫಿಲ್ಮಿ ಮ್ಯೂಸಿಕ್ ಎರಡರಲ್ಲೂ ಸೈ ಎನಿಸಿಕೊಂಡಿರುವ ಪವಿತ್ರಾ ರೂಪೇಶ್ ತಮ್ಮ ಈ ಯಶಸ್ಸಿಗೆ ತಂದೆ- ತಾಯಿ, ಪತಿ, ಅತ್ತೆ- ಮಾವನ, ಬಂಧು-ಬಳಗದವರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ. ಪುತ್ತೂರಿನ ಈ ಸಂಗೀತ ಸಾಧಕಿಯ ಮುಂದಿನ ಪಯಣಕ್ಕೆ ಶುಭ ಹಾರೈಸೋಣ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…