ಮಳೆ ಸರಿಯಾದ ಸಮಯಕ್ಕೆ ಬಾರದೆ ಕೈಕೊಟ್ಟರೆ, ರೈತನ ಮೇಲೆ ಮಾತ್ರವಲ್ಲ, ರೈತನನ್ನು ನಂಬಿ ಬದುಕುವ ಎಲ್ಲರಿಗೂ ಸಮಸ್ಯೆಯೇ. ರಾಜ್ಯಕ್ಕೆ ಮುಂಗಾರು #Monsoon ಕಾಲಿಟ್ಟಿರೂ, ಅಂದುಕೊಂಡಷ್ಟು ಮಳೆಯಾಗುತ್ತಿಲ್ಲ. ಇದರಿಂದ ರೈತ #Farmer ಕಂಗಾಲಾಗಿದ್ದಾನೆ. ಮಳೆ ಬಾರದೆ ಇಳುವರಿ ಕೈ ಕೊಟ್ಟಿದೆ. ಇದರಿಂದ ಮಾರುಕಟ್ಟೆಗೆ #Market ಸಮರ್ಪಕವಾಗಿ ತರಕಾರಿ #Vegetables ಬಾರದ ಹಿನ್ನೆಲೆ ಬೆಲೆಗಳು ಗಗನಕ್ಕೆ ಏರುತ್ತಿವೆ. ಈಗಾಗಲೆ ತರಕಾರಿ ಬೆಲೆ ದುಪ್ಪಟ್ಟಾಗಿದ್ದು, ಇದರ ಬೆನ್ನಲ್ಲೇ ದಿನಸಿ ಸಾಮಗ್ರಿಗಳ ಬೆಲೆ ಕೂಡ ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ದಿನಸಿ ಸಾಮಗ್ರಿಗಳ ಬೆಲೆ 5 ರಿಂದ 10 ರೂಪಾಯಿ ಏರಿಕೆಯಾಗಿದೆ. ಕಳೆದ ವಾರ ಕೆಜಿಗೆ 50 ರೂ ಇದ್ದ ಸ್ಟೀಮ್ ಹಾಗೂ ಸೋನೆ ಮಸೂರಿ ರಾ ರೈಸ್ ಈ ವಾರ 50 ರಿಂದ 60 ರೂ. ಆಗಿದೆ. ಟೊಮೇಟೊ ಬೆಲೆ ದಶಕ ದಾಟಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ಬೆಲೆ ಮತ್ತಷ್ಟು ಹೆಚ್ಚಳವಾಗಿದೆ. ಹಾಗೇ ದಿನಸಿ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರ ಜೊತೆ ಗ್ರಾಹಕರೂ ಬೆಲೆ ಎರಿಕೆಯಿಂದ ಕಂಗಾಲಾಗಿದ್ದಾರೆ.
2026 ಜೂನ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರು ತಲುಪಲಿದೆ ಎಂದು ಗೃಹ ಸಚಿವ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…
ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
11.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…