Advertisement
MIRROR FOCUS

2025 ರಲ್ಲಿ ಗಿಡಗಳನ್ನು ಉಡುಗೊರೆಯಾಗಿ ನೀಡಿ | ಅಭಿಯಾನ ನಡೆಸಲು ಒಡಿಶಾ ಸಚಿವರ ಮನವಿ |

Share

ಹವಾಮಾನ ಬದಲಾವಣೆ ಇಂದು ಬಹುದೊಡ್ಡ ಸವಾಲಾಗಿದೆ. ಹವಾಮಾನ ಸುಸ್ಥಿರವಾದ ಸ್ಥಿತಿಗೆ ಬರಲು ಪರಿಸರ ಉಳಿವು-ರಕ್ಷಣೆ ಅಗತ್ಯ ಇದೆ. ಹೀಗಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಹೂಗುಚ್ಛದ ಬದಲಾಗಿ ಗಿಡಗಳನ್ನು ನೀಡಬೇಕು. 2025 ರಲ್ಲಿ ಇದೊಂದು ಅಭಿಯಾನವಾಗಬೇಕು ಎಂದು ಒಡಿಶಾದ ಅರಣ್ಯ ಮತ್ತು ಪರಿಸರ ಸಚಿವ ಗಣೇಶ್ ರಾಮ್ ಸಿಂಗ್ಖುಂಟಿಯಾ ಹೇಳಿದ್ದಾರೆ.…..ಮುಂದೆ ಓದಿ….

Advertisement
Advertisement
Advertisement

ಹೊಸ ವರ್ಷ ಅಂದರೆ 2025 ರಲ್ಲಿ ಉಡುಗೊರೆಯಾಗಿ ಗಿಡಗಳನ್ನು ನೀಡುವಂತೆ ಜನರಿಗೆ ಮನವಿ ಮಾಡಿದ ಸಚಿವರು, ಪರಿಸರ ಬಿಕ್ಕಟ್ಟನ್ನು ಪರಿಹರಿಸಲು ಈ ವಿನೂತನ ಅಭಿಯಾನವು ನಡೆದು ಇಡೀ ದೇಶದಲ್ಲಿ ಇದೊಂದು  ಕ್ರಾಂತಿಯಾಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು. ಹಸಿರು ಮತ್ತು ಸುಸ್ಥಿರ ಪರಿಸರ ನಿರ್ಮಾಣಕ್ಕೆ ಜನರ ಸಹಭಾಗಿತ್ವ ಅಗತ್ಯವಾಗಿದೆ. ಇದಕ್ಕಾಗಿ   ಹೊಸ ವರ್ಷದ ಸಂದರ್ಭದಲ್ಲಿ ಹೂಗುಚ್ಛಗಳ ಬದಲಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿ ಎಂದು ಮನವಿ ಮಾಡಿದರು.

Advertisement

ಪರಿಸರ ಸಮಸ್ಯೆ, ಹವಾಮಾನ ಬದಲಾವಣೆಯನ್ನು ಪರಿಹರಿಸಲು ಈ ವಿನೂತನ ಅಭಿಯಾನವು  ಕ್ರಾಂತಿಯಾಗಬೇಕು, 2036 ರ ವೇಳೆಗೆ ಒಡಿಶಾ ತನ್ನ ಹಿಂದಿನ ಪರಿಸರದ ಸ್ಥಿತಿಗೆ ಮರಳಬೇಕಿದೆ. ಹೀಗಾಗಿ ಗಿಡ ನೆಡಲು ಜನರನ್ನು ಒಳಗೊಂಡ ಆಂದೋಲನವಾಗಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಒಡಿಶಾದ ಬಕುಲ್ ಪೌಂಡೇಶನ್‌ ಕಳೆದ 15 ವರ್ಷಗಳಿಂದ “ನನ್ನ ಮರ ಅಭಿಯಾನ”ವನ್ನು ನಡೆಸುತ್ತಿದೆ. ಪೌಂಡೇಶನ್‌ ನಡೆಸಿದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜಾಗತಿಕ ತಾಪಮಾನ ಏರಿಕೆ | ಪಶ್ಚಿಮ ಘಟ್ಟಗಳು ಹೇಗೆ ಬದಲಾಗಿವೆ..? | ಕೃಷಿ ಉಳಿವಿಗೆ ಏನು ಮಾಡಬೇಕು..? | 2025 ರಲ್ಲಿ ಏನು ಮಾಡಬಹುದು..?

ಕೃಷಿ ಸಂಕಷ್ಟದಲ್ಲಿದೆ. ಬೆಳೆ ನಷ್ಟ ಹೆಚ್ಚಾಗುತ್ತಿದೆ. ಒಂದೋ ವಿಪರೀತ ಮಳೆ ಅಥವಾ ಬರಗಾಲ.…

10 hours ago

ಕಾಫಿ ಬೆಳೆ |  2021-22 ರಲ್ಲಿ ಒಂದು ಶತಕೋಟಿ ಡಾಲರ್ ರಫ್ತು |

ಭಾರತದ ರಫ್ತು ಪದಾರ್ಥಗಳಲ್ಲಿ ಕಾಫಿ ಮುಖ್ಯ ಬೆಳೆಗಳಲ್ಲಿ ಒಂದಾಗಿದ್ದು, 2021-22ನೇ ಸಾಲಿನಲ್ಲಿ ಒಂದು…

11 hours ago

ಮಲೇಷ್ಯಾದಿಂದ ಬೆಂಗಳೂರಿಗೆ ಕಳ್ಳ ಸಾಗಣೆಯಾಗುತ್ತಿದ್ದ 379 ವನ್ಯಜೀವಿಗಳ ರಕ್ಷಣೆ

ಮಲೇಷ್ಯಾದಿಂದ ಬೆಂಗಳೂರಿಗೆ ಕಳ್ಳಸಾಗಣೆಯಾಗುತ್ತಿದ್ದ ಅಳಿವಿನಂಚಿನಲ್ಲಿರುವ 379 ವನ್ಯಜೀವಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…

11 hours ago

ಪಿಎಂ ಫಸಲ್‌‌‌‌ಬಿಮಾ ಯೋಜನೆ ವಿಸ್ತರಣೆ | ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.ರೈತರ…

11 hours ago

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ | ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು…

11 hours ago

ಹೊಸ ವರ್ಷಾಚರಣೆ | ಬೆಂಗಳೂರಿನಲ್ಲಿ 15 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹ..!

ಹೊಸ ವರ್ಷಾರಣೆಯ ಸಂದರ್ಭದಲ್ಲಿ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 15…

11 hours ago