Advertisement
MIRROR FOCUS

ಕಂಪೌಂಡ್‌ ವಾಲಿನಲ್ಲಿ ಕಾಳುಮೆಣಸು ಕೃಷಿ | ನಗರದಲ್ಲಿ ಕಾಳುಮೆಣಸು ಸ್ವಾವಲಂಬನೆ |

Share

ಈಗ ಹಲವು ಕಡೆ ಕಾಳುಮೆಣಸು ಬೆಳೆಯುವ ವಿವಿಧ ಪ್ರಯತ್ನಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆ ನಗರ ಪ್ರದೇಶದಲ್ಲೂ ಮನೆ ಬಳಕೆಗೆ ಅಗತ್ಯವಿದ್ದಷ್ಟು ಕಾಳುಮೆಣಸು ಹೇಗೆ ಬೆಳೆಯಬಹುದು ಎನ್ನುವುದು ಕೂಡಾ ಆಸಕ್ತಿಯ ವಿಷಯ. ಇದನ್ನು ಬ್ಯಾಂಕ್‌ ಉದ್ಯೋಗಿ, ಪುತ್ತೂರಿನ ವಿಶ್ವಾಸ್‌ ಸುಬ್ರಹ್ಮಣ್ಯ ಅವರು ಮಾಡಿದ್ದಾರೆ. ತಮ್ಮ ಮನೆಗೆ ಅಗತ್ಯ ಇರುವಷ್ಟು ಕಾಳುಮೆಣಸು ಬೆಳೆಯುತ್ತಿದ್ದಾರೆ.…..ಮುಂದೆ ಓದಿ….

Advertisement
Advertisement
Advertisement

ವಿಶ್ವಾಸ್‌ ಸುಬ್ರಹ್ಮಣ್ಯ ಅವರು ಪುತ್ತೂರಿನಲ್ಲಿ ಮನೆ ನಿರ್ಮಾಣದ ಮಾಡಿದ ಬಳಿಕ ಮನೆಯ ಪಕ್ಕದ ಕಂಪೌಂಡ್‌ ವಾಲ್‌ಗೆ ಸುಮಾರು 10 ವರ್ಷಗಳ ಹಿಂದೆ ಕಾಳುಮೆಣಸು ಬಳ್ಳಿ ಬಿಟ್ಟಿದ್ದರು. ಅದಾಗಿ 3-4 ವರ್ಷಗಳ ಬಳಿಕ ಕಾಳುಮೆಣಸು ಕೊಯ್ಲು ಆರಂಭವಾಗಿದೆ, ಗೋಡೆಯ ತುಂಬೆಲ್ಲಾ ಕಾಳುಮೆಣಸು ಬಳ್ಳಿ ಹಬ್ಬುತ್ತಾ ಸಾಗಿದೆ. ಬಹುದೊಡ್ಡ ಆರೈಕೆ ಮಾಡುತ್ತಿಲ್ಲ ಎನ್ನುವ ವಿಶ್ವಾಸ್‌ ಕೃಷ್ಣ ಅವರು, ವರ್ಷಕ್ಕೊಂದು ಬಾರಿ ಸಾವಯವ ಗೊಬ್ಬರ ನೀಡುತ್ತೇವೆ. ಒಂದೆರಡು ಬಳ್ಳಿ ಅಂದು ನಾಟಿ ಮಾಡಿದ್ದು, ಈಗ ಅದು ಇಡೀ ಗೋಡೆ ತುಂಬಾ ವ್ಯಾಪಿಸಿದೆ, ಸದ್ಯ  5 ಕೆಜಿಯಷ್ಟು ಕಾಳುಮೆಣಸು ಲಭ್ಯವಾಗುತ್ತದೆ. ನಮ್ಮ ಮನೆ ಬಳಕೆಗೆ ಸಾಕಾಗುತ್ತದೆ ಎನ್ನುತ್ತಾರೆ ವಿಶ್ವಾಸ್‌ ಸುಬ್ರಹ್ಮಣ್ಯ. ಯಾವುದೇ ಔಷಧಿ ಸಿಂಪಡಣೆ ಮಾಡುತ್ತಿಲ್ಲ, ರೋಗವೂ ಕಡಿಮೆ ಎಂದು ಹೇಳುತ್ತಾರೆ.

Advertisement

ನಗರ ಪ್ರದೇಶದಲ್ಲಿ ಗೋಡೆಯ ಅಲಂಕಾರಕ್ಕೂ ಕಾಳುಮೆಣಸು ಬಳ್ಳಿಯ ಮಾದರಿ ಆದರೆ, ಮನೆ ಉಪಯೋಗಕ್ಕೆ ಕಾಳುಮೆಣಸು ಕೂಡಾ ಲಭ್ಯವಾದಂತಾಗುತ್ತದೆ. ಈ ಮೂಲಕ ಕಾಳುಮೆಣಸು ಸ್ವಾವಲಂಬನೆಯ ಮಾದರಿಯನ್ನು ವಿಶ್ವಾಸ್‌ ಸುಬ್ರಹ್ಮಣ್ಯ ತೋರಿಸಿದ್ದಾರೆ.

Advertisement

Vishwas subrahmanya from Puttur has set a model in urban households by successfully growing a pepper vine on the compound wall of his residence.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |

22.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

3 hours ago

ಮನೆಯು ಮತ್ತೊಮ್ಮೆ ಮೊದಲ ಪಾಠಶಾಲೆಯಾಗಲಿ

“ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ…

21 hours ago

ದ ಕ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ

ಕೃಷಿ ಇಲಾಖೆಯಿಂದ ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ…

22 hours ago

ಹವಾಮಾನ ವರದಿ | 20-11-2024 | ರಾಜ್ಯದಲ್ಲಿ ಒಣಹವೆ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ |

21.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ ಸೇರಿದಂತೆ…

1 day ago

ರಾಜ್ಯದ ಕೈಗಾರಿಕೆಗಳಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಲು ಆದ್ಯತೆ | ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ತಂತ್ರಜ್ಞಾನ ಮತ್ತು ಕೈಗಾರಿಕಾ ಪ್ರಗತಿಯ ಸಂಕೇತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. …

1 day ago

ನಬಾರ್ಡ್ ಸಾಲದ ಮೊತ್ತ ಇಳಿಕೆ ಹಿನ್ನೆಲೆ | ಕೇಂದ್ರ ಹಣಕಾಸು ಸಚಿವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ

ನಬಾರ್ಡ್ ನಿಂದ ರಾಜ್ಯಕ್ಕೆ ನೀಡಲಾಗುವ ಸಾಲದ ಮೊತ್ತವನ್ನು 5600 ಕೋಟಿ ರೂಪಾಯಿಗಳಿಂದ, ಈ…

1 day ago