MIRROR FOCUS

ಇವರ ಕೃಷಿ ಯಶಸ್ಸಿನ ಮೂಲ ನೀರು | 40 ಡಿಗ್ರಿ ತಾಪಮಾನದಲ್ಲೂ ಕಾಳುಮೆಣಸು ಯಶಸ್ವಿ | ಬರಡಾಗುತ್ತಿದ್ದ ಭೂಮಿಯನ್ನು ಸಮೃದ್ಧಗೊಳಿಸಿದ ಕೃಷಿಕ ಸುರೇಶ್‌ ಬಲ್ನಾಡು |

Share

ಕಾಳುಮೆಣಸು ಕೃಷಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ಪುತ್ತೂರಿನ ಕೃಷಿಕ ಸುರೇಶ್‌ ಬಲ್ನಾಡು ಅವರು ಅಡಿಕೆ ನಾಡಿನಲ್ಲಿ ಪರ್ಯಾಯ ಕೃಷಿ ಮಾಡಿರುವ ಯಶಸ್ವೀ ಕೃಷಿಕ. ತಮ್ಮ ಇಡೀ ಜಮೀನಿನಲ್ಲಿ ಕಾಳುಮೆಣಸು ಕೃಷಿ ಮಾಡುತ್ತಿರುವ ಸುರೇಶ್‌ ಬಲ್ನಾಡು ಅವರು ಇಂದು ಕಾಳುಮೆಣಸನ್ನೂ ಪ್ರಮುಖ ಕೃಷಿಯನ್ನಾಗಿಸಿದ್ದಾರೆ. ಇಂದು 40 ಡಿಗ್ರಿ ತಾಪಮಾನದಲ್ಲೂ ಕಾಳುಮೆಣಸು ಕೃಷಿ ಯಶಸ್ವಿಯಾಗಿದೆ. ಇವರ ಇಡೀ ಕೃಷಿಯ ಹಿಂದೆ ನೀರಿನ ಸದ್ಭಳಕೆಯ ಸಾಹಸಗಾಥೆಯೂ ಇದೆ. ಕೆಲ ವರ್ಷಗಳ ಹಿಂದೆ ಕೃಷಿಯಲ್ಲಿ ನೀರಿನ ಸಮಸ್ಯೆಯಿಂದ ಕಂಗೆಡುತ್ತಿದ್ದ ಸುರೇಶ್‌ ಅವರು ಮಳೆ ನೀರು ಕೊಯ್ಲು, ನೀರಿನ ಸಂಗ್ರಹದ ಮಾದರಿಗಳೂ ಇಂದು ಯಶಸ್ವಿಯಾಗಿದೆ. ಈ ವಾರದ ನಮ್ಮ ಅತಿಥಿಯಾಗಿ ಸುರೇಶ್‌ ಬಲ್ನಾಡು ನಮ್ಮ ಜೊತೆ ಮಾತನಾಡಿದ್ದು ಹೀಗೆ…..…..ಮುಂದೆ ಓದಿ….

ಸುರೇಶ್‌ ಬಲ್ನಾಡು
ನಾವುಅಡಿಕೆಗೆ ಪರ್ಯಾಯ ಅಂತ ಆರಂಭದಲ್ಲಿ ಕಾಳುಮೆಣಸು ಕೃಷಿ ಮಾಡಲಿಲ್ಲ, ಉಪಬೆಳೆಯಾಗಿತ್ತು. ಬಳಿಕ ಪ್ರಮುಖ ಉಪಬೆಳೆಯಾಯಿತು. ಈಗ ಎರಡು ವರ್ಷಗಳಿಂದ ಮುಖ್ಯ ಬೆಳೆಯೇ ಆಗಿದೆ. ಎಲ್ಲಾ ಮರದಲ್ಲೂ ಕಾಳುಮೆಣಸು ಇದೆ. ತೆಂಗು, ಅಡಿಕೆ, ರಬ್ಬರ್‌, ಸಾಗುವಾನಿ, ಗೇರುಮರ.. ಹೀಗೇ ಎಲ್ಲಾ ಮರಗಳಿಗೂ ಕಾಳುಮೆಣಸು ನಾಟಿ ಆಗಿದೆ. ಅದರ ಜೊತೆಗೆ ಸಿಮೆಂಟ್‌ ಕಂಬಗಳನ್ನೂ ಅಳವಡಿಕೆ ಮಾಡಿ ಅದರಲ್ಲೂ ನಾಟಿ ಮಾಡಿದ್ದೇವೆ, ಯಾವ ಸಮಸ್ಯೆಯೂ ಆಗಿಲ್ಲ.
ಕಾಳುಮೆಣಸು ಆಹಾರ ಬೆಳೆ. ಔಷಧೀಯ ಗುಣ ಇರುವ ಬೆಳೆ, ಇದಕ್ಕೆ ತೂಗುಗತ್ತಿ ಇಲ್ಲ. ಅಡಿಕೆಯ ಮೇಲೆ ಹಲವು ತೂಗುಗತ್ತಿ ಇದೆ. ಆದರೆ  ಕಾಳುಮೆಣಸು ಅಂತಹ ತೂಗುಗತ್ತಿ ಇಲ್ಲ , ಸವಾಲುಗಳು ಎಲ್ಲಾ ಕೃಷಿಯಂತೆಯೇ ಇದೆ.
ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ ಅವರ ಜೊತೆ ಮಾತುಕತೆ ಸುರೇಶ್‌ ಬಲ್ನಾಡು
ಕರಾವಳಿ ಜಿಲ್ಲೆಯಲ್ಲಿ ಕಾಳುಮೆಣಸನ್ನು ಮುಖ್ಯಬೆಳೆಯಾಗಿ ಮಾಡಿದವರು ಕಡಿಮೆ. ಅಡಿಕೆ , ರಬ್ಬರ್‌ ಕಡೆಗೇ ಹೋಗಿದ್ದಾರೆ. 40 ಡಿಗ್ರಿ ಹೋದರೂ ಕಾಳುಮೆಣಸು ಆಗಿದೆ. ಆರಂಭದಲ್ಲಿ ಈ ತಾಪಮಾನದಲ್ಲಿ ಕಾಳುಮೆಣಸು ಉತ್ತಮ ಫಲಿತಾಂಶ ನೀಡದು ಎನ್ನುವ ಅಭಿಪ್ರಾಯ ಇತ್ತು. ಹೀಗಾಗಿ ಇದು ಉಪಬೆಳೆಗೇ ಸೂಕ್ತ ಎನ್ನುವ ಅಭಿಪ್ರಾಯ ಇತ್ತು. ಆದರೆ ಈ ಬಾರಿ 40 ಡಿಗ್ರಿಗಿಂತಲೂ ಅಧಿಕ ತಾಪಮಾನವಾಗಿದೆ, ಕಾಳುಮೆಣಸಿಗೆ ಸಮಸ್ಯೆ ಆಗಿಲ್ಲ. ಈ ಬಾರಿಯ ವಾತಾವರಣ ಸಮಸ್ಯೆ ಆಗಿಲ್ಲ. ನೀರಾವರಿ ವ್ಯವಸ್ಥೆಯೂ ಈಗ ಸರಿ ಆಗಿದೆ. ನಮ್ಮಲ್ಲಿ ಗಿಡಗಳಿಗೆ ಸ್ಟ್ರೆಸ್‌ ಬೇಕಾಗಿಲ್ಲ, ಪ್ರಾಕೃತಿಕವಾಗಿಯೇ ಆಗುತ್ತದೆ. ನೀರಿನ ಒತ್ತಡ ಸಿಕ್ಕಿದರೆ ಫಸಲೂ ಉತ್ತಮವಾಗಿರುತ್ತದೆ. ಇದೆಲ್ಲಾ ಇಲ್ಲಿ ಪ್ರಾಕೃತಿಕವಾಗಿ ಆಗುತ್ತದೆ.
ನಾವು ಅಡಿಕೆ ಹಾಗೂ ಕಾಳುಮೆಣಸು ಎರಡಕ್ಕೂ ಆದ್ಯತೆ ನೀಡುತ್ತೇವೆ.ಎರಡು ವರ್ಷದಿಂದ ಕಾಳುಮೆಣಸಿಗೆ ಆದ್ಯತೆ,  ಅಡಿಕೆಯಿಂದಲೂ ಕಾಳುಮೆಣಸು ಹೆಚ್ಚು  ಆತ್ಮೀಯವಾಗಿರುತ್ತದೆ. ಅಂದರೆ ದಿನವೂ ನೋಡಲು ಆಗುತ್ತದೆ, ದಿನದ ಬದಲಾವಣೆ ತಿಳಿಯುತ್ತದೆ. ಅಡಿಕೆ ಮರದ ಮೇಲೆ ಇರುತ್ತದೆ, ರೋಗ ಬಂದ ಮೇಲೆಯೇ ತಿಳಿಯುತ್ತದೆ. ಇಲ್ಲಿ ಹಾಗಲ್ಲ, ದಿನದ ಬದಲಾವಣೆ ಗಮನಕ್ಕೆ ಬರುತ್ತದೆ. ಅಡಿಕೆಗೆ ಈಗ ಹಲವಾರು ರೋಗ ಬರುತ್ತದೆ, ಕಾಳುಮೆಣಸಿಗೂ ಇದೆ, ಆದರೆ ಪ್ರಯೋಗದಿಂದ ನಿಯಂತ್ರಣ ಮಾಡಲು ಸಾಧ್ಯವಿದೆ. ಇದಕ್ಕೂ ಮೊದಲು ಅನೇಕ ಸಮಯಗಳ ಪ್ರಯತ್ನ ಇದೆ. ಕೃಷಿಯಲ್ಲಿನ ಪ್ರಯೋಗವು ಯಶಸ್ಸಿಗೆ ಕಾರಣವಾಗುತ್ತದೆ.

ಕಾಳುಮೆಣಸು ಕೃಷಿಯಲ್ಲಿ ಬೆಳೆಯುವುದು ಮಾತ್ರವಲ್ಲ ಮೌಲ್ಯವರ್ಧನೆಯೂ ಅಗತ್ಯ ಇದೆ. ಈ ಬಗ್ಗೆ  ಚಿಂತನೆ ಇದೆ,  ಈಗಾಗಲೇ ಆಯಿಲ್‌ ತೆಗೆಸಿದೆ. ಅದರ ಮಾರುಕಟ್ಟೆ, ಧಾರಣೆಯ ಬಗ್ಗೆಯೂ ಗಮನಹರಿಸಲಾಗಿದೆ. ಕಾಳುಮೆಣಸು ಗ್ರೇಡಿಂಗ್‌ ಮಾಡುವುದು ಹಾಗೂ ನಾವೇ ಮಾರುಕಟ್ಟೆ ಮಾಡುವುದು ಕೂಡಾ ಮುಂದೆ ಅಗತ್ಯ ಇದೆ. ನಮ್ಮ ಕೃಷಿ ಉತ್ಪನ್ನಕ್ಕೆ ನಾವೇ ಮಾರುಕಟ್ಟೆ, ನಾವೇ ಧಾರಣೆ ನಿಗದಿ ಮಾಡುವ ಹಾಗೆ ಆಗಬೇಕು ಎನ್ನುವುದು ನನ್ನ ಯೋಚನೆ.
ನಮ್ಮ ಕೃಷಿಯ ಯಶಸ್ಸಿನ ಗುಟ್ಟು ಹಲವಾರು ಇದೆ. ನಾವು ಮಳೆಗಾಲದಲ್ಲೂ ಗೊಬ್ಬರ ನೀಡುತ್ತೇವೆ. ಔಷಧಿ ಸಿಂಪಡಣೆ ಕಾಲಕಾಲಕ್ಕೆ ಮಾಡುತ್ತೇವೆ. ಅದರ ಜೊತೆಗೆ ನೀರಾವರಿಯೂ ಬಹುಮುಖ್ಯವಾದ ಯಶಸ್ಸಿನ ಮೂಲ. ಆರಂಭದಲ್ಲಿ ನೀರಾವರಿ ವ್ಯವಸ್ಥೆಗೆ ನಾವು ಅಂತರ್ಜಲ ನಂಬುತ್ತಿದ್ದೆವು, ಕೊನೆಗೆ ನೀರು ಕಡಿಮೆಯಾಗಿ ನೀರಿನ ಕೊರತೆ ಕಾಡಿತ್ತು. ಸುಮಾರು 10 ವರ್ಷಗಳ ಹಿಂದೆ ನೀರಿನ ಕೊರತೆ ವಿಪರೀತವಾಗಿ ಅಡಿಕೆ ಮರಗಳಿಗೆ ಬುಡಕ್ಕೆ ನೀರು ಸಿಂಪಡಿಸುವವರೆಗೂ ಕಾಲ ಬಂದಿತ್ತು. ಆ ನಂತರ ಕೃಷಿ ಹೊಂಡ ಮಾಡಿದೆವು, ಈಗಾಗಲೇ 3 ಕೃಷಿ ಹೊಂಡ ಮಾಡಿದ್ದೇವೆ. ಭೂಮಿಯ ಮೇಲಿನ ನೀರು ಅಂದರೆ ವರತೆ ನೀರು, ಹರಿದು ಹೋಗುವ ನೀರು ಪೆಬ್ರವರಿವರೆಗೆ ಇರುತ್ತದೆ. ಅದೆಲ್ಲವನ್ನೂ ಕೃಷಿ ಹೊಂಡಕ್ಕೆ ತುಂಬಿಸಿ ಸ್ಟೋರ್‌ ಮಾಡಿ ಇಡುತ್ತೇವೆ. ಈಗ ಅಟೋಮೇಶನ್‌ ನೀರಾವರಿ ವ್ಯವಸ್ಥೆ ಮಾಡಿದ್ದೇವೆ, ನೀರಾವರಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದೇವೆ. ಮನೆಯಲ್ಲಿ ಉಪಯೋಗಿಸುವ ನೀರನ್ನೂ ಶುದ್ದ ಮಾಡಿ ತೋಟಕ್ಕೆ ಬಳಕೆ ಮಾಡುತ್ತೇವೆ. ಹಿತಮಿತವಾಗಿ , ಲೆಕ್ಕ ಮಾಡಿ ನೀರು ಬಿಡುವುದುರಿಂದ ಕೃಷಿಯನ್ನು ಉಳಿಸಿ-ಬೆಳೆಸಿಕೊಳ್ಳಲು ಆಗಿದೆ. ಹಿಂದೆ ಸುಮಾರು 10 ವರ್ಷಗಳ ಹಿಂದೆ ನಮ್ಮ‌ ಕೃಷಿ ನೋಡಿದವರಿಗೆ, ತಿಳಿದವರಿಗೆ ಈಗ ಅಚ್ಚರಿಯಾಗುತ್ತದೆ.

ಯಾವತ್ತೂ ಕೊಳವೆಬಾವಿ ನಂಬಬೇಡಿ, ಕಣ್ಣಿಗೆ ಕಾಣುವ ನೀರನ್ನು ಬಳಕೆ ಮಾಡುವುದು ಉತ್ತಮವಾದ ವಿಧಾನ. ನಾವು ದಿನವೂ 18 ಲೀಟರ್‌ ನೀರನ್ನು ನೀಡುತ್ತಿದ್ದೆವು, ಕೊನೆಗೆ ನೀರಿನ ಕೊರತೆಯಾದಾಗ 3 ಲೀಟರ್‌ ಗೆ ಇಳಿಕೆ ಮಾಡಿ ಸುಧಾರಿಸಿದ್ದೆವು, ಏನೂ ಸಮಸ್ಯೆ ಆಗಲಿಲ್ಲ. ಈಗ ಇನ್ನೊಂದು 30 ಲಕ್ಷ ಲೀಟರ್‌ ನೀರು ಸ್ಟೋರೇಜ್‌ ಆಗುವ ಟ್ಯಾಂಕ್‌ ರಚನೆಗೆ ಮುಂದಾಗಿದ್ದೇವೆ. ನೀರಿನ ಯಶೋಗಾಥೆಯನ್ನು ಈಗ ಯೋಚಿಸಿದಾಗ ಖುಷಿ ಹೆಚ್ಚು ಇದೆ. ನಮ್ಮ ನೀರಿನ ಹಿಂದಿನ ಸ್ಟೋರಿ ಈಗ ಕಾಣದು,ಈಗ ಯಶಸ್ಸು ಕಾಣುತ್ತದೆ. ಆದರೆ ಹಿಂದೆ ಕಷ್ಟ ಇತ್ತು. 10 ವರ್ಷದ ಹಿಂದೆ ಕೃಷಿ ಉಳಿಸಿಕೊಳ್ಳುವುದು ಕಷ್ಟ ಆಗಿತ್ತು. ಈಗ ಅಂತಹ ಸ್ಥಿತಿ ಇಲ್ಲ.

Suresh Balnadu, a farmer from Puttur, who has been awarded for his outstanding work in pepper cultivation, is a shining example of a successful farmer who has embraced alternative farming practices in the land of Arecanut. By dedicating his entire farm to cultivating pepper, Suresh has elevated the importance of this crop in the region. His story is truly inspirational.

Today, pepper cultivation is successful at a temperature of 40 degrees. Behind their entire agriculture success story, there is also a tale of courageous water management. Suresh, who was struggling with water issues in agriculture a few years ago, has now successfully implemented rainwater harvesting and water collection methods.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಕುಕ್ಕೆ ಸುಬ್ರಹ್ಮಣ್ಯವನ್ನೂ…… ಪವಿತ್ರ ಕುಮಾರಧಾರ ನದಿಯನ್ನೂ ಮಲಿನ ಮಾಡ್ತೀರಾ….?

ಪವಿತ್ರ ಕುಮಾರಧಾರಾ ನದಿಯನ್ನೂ ಮಲಿನ ಮಾಡಲು ಹೊರಟಿದೆಯಾ ಭಕ್ತ ಸಮೂಹ..? ಅದಕ್ಕೆ ಕೆಲವು…

4 hours ago

ತಣ್ಣೀರನ್ನು ತಣಿಸಿ ಕುಡಿವ ಅಜಾತಶತ್ರು

ತಮ್ಮಂದಿರಿಗೆ ಅಣ್ಣನಾಗಿ, ಪ್ರಜೆಗಳಿಗೆ ರಾಜನಾಗಿ, ಧರ್ಮದ ಪ್ರತಿನಿಧಿಯಾಗಿ, ಪ್ರಾಮಾಣಿಕತೆಗೆ ಕನ್ನಡಿಯಾಗಿ, ಶುದ್ಧ ಚಾರಿತ್ರ್ಯವಂತನಾಗಿ,…

15 hours ago

ಕುಂಭಮೇಳ | ಕುಂಭಸ್ನಾನ ಮುಗಿಸಿ ಹೊರಟಾಗ….

ಮುಖ್ಯ ರಸ್ತೆಗೆ ಸೇರಲು ಎಂಟತ್ತು‌ ಕಿಮೀ ಹಳ್ಳಿಗಾಡಿನ, ಗದ್ದೆ ಬದುಗಳ, ಯಮುನೆಯ ತಟದ…

18 hours ago

ಮಹಾಲಕ್ಷ್ಮಿ ರಾಜಯೋಗವು ಯಾವ ರಾಶಿಗಳಿಗೆ…?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

18 hours ago

ರೈತರಿಗೆ ಊರುಗೋಲಾಗಿರುವ ಕೃಷಿ ಪತ್ತಿನ ಸಹಕಾರಿ ಸಂಘ

ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಸಂಕಷ್ಟ ಕಾಲದಲ್ಲಿ ಕೈ…

1 day ago

ಎತ್ತಿನಹೊಳೆ ಕಾಮಗಾರಿ | ಅರಣ್ಯ ಭೂಮಿ ಬಳಕೆಗೆ ಅನುಮತಿ ಕೋರಿಕೆ | ಮಾ.18 ರಂದು ದೆಹಲಿಗೆ ಉಪಮುಖ್ಯಮಂತ್ರಿ

ಪರಿಸರ ಇಲಾಖೆಯಿಂದ ಅನುಮತಿ ದೊರೆಯದ ತನಕ ಎತ್ತಿನಹೊಳೆ ಕಾಮಗಾರಿ ಮುಂದುವರೆಸಲು ಕಷ್ಟಕರವಾಗಿದೆ.

1 day ago