ಅನೇಕ ಸಮಯಗಳ ಬಳಿಕ ಕಾಳುಮೆಣಸು ಧಾರಣೆಯಲ್ಲಿ ಚೇತರಿಕೆ ಕಾಣುತ್ತಿದೆ. ವಾರದಿಂದ ವಾರಕ್ಕೆ ಧಾರಣೆಯಲ್ಲಿ ಏರಿಕೆ ಕಾಣುತ್ತಿದೆ. ಇದೀಗ 530 ರೂಪಾಯಿವರೆಗೂ ಖರೀದಿ ನಡೆದಿದೆ.
ಕಳೆದ ಅನೇಕ ವರ್ಷಗಳಿಂದ ಕಾಳುಮೆಣಸು ಧಾರಣೆ ಏರಿಕೆ ಕಾಣಲಿಲ್ಲ. 450 ರೂಪಾಯಿ ಆಸುಪಾಸಿನಲ್ಲಿ ಕಾಳುಮೆಣಸು ಧಾರಣೆ ಸ್ಥಿರವಾಗಿತ್ತು. ಇದೀಗ ಕಳೆದ ಒಂದು ತಿಂಗಳಿನಿಂದ ಕಾಳುಮೆಣಸು ಧಾರಣೆ ಚೇತರಿಕೆ ಕಾಣುತ್ತಿತ್ತು. ಈಗ 500 + ಧಾರಣೆಯ ಮೂಲಕ ಮತ್ತೆ ಕೃಷಿಕರ ಗಮನ ಸೆಳೆದಿದೆ. ಕೆಲವು ವರ್ಷಗಳ ಹಿಂದೆ 700 ರೂಪಾಯಿವರೆಗೂ ತಲಪಿದ್ದ ಧಾರಣೆಯ ಮೂಲಕ ಕೃಷಿಕರ ಕಪ್ಪುಚಿನ್ನ ಎಂದೇ ಗುರುತಿಸಿಕೊಂಡಿತ್ತು. ಅದಾಗಿ ಇಳಿಕೆಯಾದ ಮಾರುಕಟ್ಟೆ ಚೇತರಿಕೆ ಕಂಡಿರಲಿಲ್ಲ. ಇದೀಗ ಮತ್ತೆ ಚೇತರಿಕೆ ಕಾಣುತ್ತಿದೆ.
ಸದ್ಯದ ಮಾರುಕಟ್ಟೆ ಮಾಹಿತಿ ಪ್ರಕಾರ, ಮಾರುಕಟ್ಟೆಯಲ್ಲಿ ಕಾಳುಮೆಣಸು ಕೊರತೆ ಕಂಡುಬಂದಿದೆ. ವಿದೇಶಗಳಲ್ಲೂ ಏರುಗತಿಯ ಮಾರುಕಟ್ಟೆ ವಾತಾವರಣ ಇದೆ. ವಿಯೆಟ್ನಾಂನಂತಹ ದೇಶದಲ್ಲಿ ಕೂಡಾ ಕಾಳುಮೆಣಸು ಬೇಡಿಕೆ ಶುರುವಾಗಿದೆ. ಧಾರಣೆ ಇಳಿಕೆಯ ಕಾರಣದಿಂದ ದೇಶೀಯ ಮಾರುಕಟ್ಟೆಯಲ್ಲಿ ಕೃಷಿಕರು ಕಾಳುಮೆಣಸು ಮಾರುಕಟ್ಟೆಗೆ ಬಿಡುತ್ತಿರಲಿಲ್ಲ. ದಾಸ್ತಾನು ಇರಿಸಿಕೊಂಡರೆ, ಅಲ್ಪಸ್ವಲ್ಪ ಪ್ರಮಾಣದಲ್ಲಿ ಕೃಷಿಕರು ಕಾಳುಮೆಣಸು ಮಾರುಕಟ್ಟೆಗೆ ಬಿಡುತ್ತಿದ್ದರು.
ದೇಶದ ಕಾಳುಮೆಣಸು ಉತ್ಪಾದನೆ 70 ಸಾವಿರ ಟನ್ ಇದೆ. ಆದರೆ ಅದರಲ್ಲಿ ಕರ್ನಾಟಕದ ಉತ್ಪಾದನೆಯೇ 33 ಸಾವಿರ ಟನ್. ಕೇರಳದಲ್ಲಿ 28 ಸಾವಿರ ಟನ್ ಬೆಳೆಯಲಾಗುತ್ತದೆ. ಕಾಳುಮೆಣಸನ್ನು ಭಾರತದಲ್ಲಿ ಪ್ರಮುಖವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಮಹಾರಾಷ್ಟ್ರ, ಗೋವಾ, ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರಾಗಳಲ್ಲಿ ಬೆಳೆಯಲಾಗುತ್ತದೆ. ಈಚೆಗೆ ಧಾರಣೆ ಹಾಗೂ ರೋಗದ ಸಮಸ್ಯೆಯಿಂದ ಕಾಳುಮೆಣಸು ಗಿಡ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ಇದೀಗ ಔಷಧಿ ಸಹಿತ ಸಾಂಬಾರ ವಸ್ತುವಾಗಿ ಕಾಳುಮೆಣಸು ಮತ್ತೆ ಬೇಡಿಕೆ ಶುರುವಾಗಿದೆ. ಪ್ರತೀ ಕೆಜಿಗೆ 500 ರೂಪಾಯಿ ತಲುಪಿದರೂ ಮಾರುಕಟ್ಟೆಗೆ ಕಾಳುಮೆಣಸು ಪ್ರವೇಶವಾಗುತ್ತಿಲ್ಲ. ಹೀಗಾಗಿ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇದೇ ವೇಳೆ ಕಾಳುಮೆಣಸು ಬೆಳೆಯಲ್ಲೂ ಕೊರತೆ ಇದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.
ಕಳೆದ ಬೆಳೆಯಲ್ಲೂ ಕಾಳುಮೆಣಸು ಇಳುವರಿ ಕೊರತೆಯಾಗಿತ್ತು. ಈ ಬಾರಿ ಕೂಡಾ ಸುಮಾರು 5-8 ಸಾವಿರ ಟನ್ ಕಾಳುಮೆಣಸು ಕೊರತೆ ಉಂಟಾಗಿದೆ. ವಿದೇಶಗಳಲ್ಲಿ ಕೂಡಾ ಕಾಳುಮೆಣಸು ಇಳುವರಿಯಲ್ಲಿ ಕೊರತೆ ಕಂಡುಬಂದಿದೆ. ಮುಂದಿನ ಋತುವಿನಲ್ಲಿ ಇಂಡೋನೇಷ್ಯಾದಲ್ಲಿ ಬೆಳೆ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಜಾಗತಿಕ ಬೆಲೆಗಳು ಸಹ ಏರಿಕೆಯ ಸಾಧ್ಯತೆಯಿದೆ. ಆದರೆ ವಿಯೆಟ್ನಾಂನಲ್ಲಿ ಕಾಳುಮೆಣಸು ಉತ್ಪಾದನೆಯು ಕಳೆದ ವರ್ಷ 1.30 ಲಕ್ಷ ಟನ್‌ಗೆ ಹತ್ತಿರದಲ್ಲಿದೆ ಎಂದು ಅಂದಾಜಿಸಲಾಗಿದೆ.
ಹೀಗಾಗಿ ಸದ್ಯ ಕಾಳುಮೆಣಸು ದರ ಏರಿಕೆಯ ನಿರೀಕ್ಷೆ ಇದೆ. ಆದರೆ ಇದೇ ಟ್ರೆಂಡ್ ಮುಂದುವರಿಯುವ ಲಕ್ಷಣಗಳ ಬಗ್ಗೆ ಕಾಳುಮೆಣಸು ಮಾರುಕಟ್ಟೆ ವಲಯವು ಯಾವ ಸ್ಪಷ್ಟತೆಯನ್ನೂ ನೀಡುವುದಿಲ್ಲ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…