ಪೆರಾಜೆ ಕಲ್ಲಿನ ಗಣಿಗಾರಿಕೆ- ಸ್ಪೋಟಕ ಬಳಸದೇ ಗಣಿಗಾರಿಕೆ ನಡೆಸುವಂತೆ ಸೂಚನೆ ಹಿನ್ನಲೆಯಲ್ಲಿ ಪೆರಾಜೆ ಶ್ರೀ ಶಾಸ್ತಾವು ದೇವಳದಲ್ಲಿ ಸಾರ್ವಜನಿಕರಿಂದ ವಿಶೇಷ ಪೂಜೆ ನಡೆಯಿತು.
ಪೆರಾಜೆ ಗ್ರಾಮದ ಅಮಚೂರುನಲ್ಲಿ ಕಲ್ಲಿನ ಗಣಿಗಾರಿಕೆ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಳೆದ ವರ್ಷದಲ್ಲಿ ಹಲವಾರು ಬಾರೀ ಭೂಕಂಪಗಳು ಸಂಭವಿಸಿದರಿಂದ ಸಾರ್ವಜನಿಕಕರು ಸ್ಪೋಟಕ ಬಳಸದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ, ಆಗಿನ ಶಾಸಕ ಬೋಪಯ್ಯ ಅವರಿಗೆ ದೂರು ಸಲ್ಲಿಸಲಾಗಿತ್ತು. ಆದರೂ ಕ್ರಮಕೈಗೊಂಡಿಲ್ಲ. ಇದೀಗ ಈಗಿನ ಶಾಸಕರಾದ ಪೊನ್ನಣ್ಣ ಅವರಿಗೆ ಸ್ಥಳೀಯರು ಮತ್ತು ಸಾರ್ವಜನಿಕರು ಮನವರಿಕೆ ಮಾಡಿ, ಮನವಿ ಸಲ್ಲಿಸಲಾಗಿದ್ದು, ಕೂಡಲೇ ಮನವಿಗೆ ಸ್ಪಂದಿಸಿದ ಶಾಸಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸ್ಥಳಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ ಕೂಡಲೇ ಇಲಾಖೆಯ ಅಧಿಕಾರಿ ಪರಿಶೀಲನೆ ನಡೆಸಿ, ಸ್ಪೋಟಕ ಬಳಸದೆ, ಮಾನವ ಶ್ರಮದ ಮೂಲಕ ಗಣಿಗಾರಿಕೆ ನಡೆಸುವಂತೆ ಗಣಿಗಾರಿಕೆಯ ಪಾಲುದಾರರಿಗೆ ನೋಟಿಸ್ ನೀಡಲಾಗಿದೆ.
ತಪ್ಪಿದಲ್ಲಿ ಕೆ.ಎಂ.ಎಂ.ಸಿ.ಆರ್ 1994 ರ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳುವುದಾಗಿ ಕೊಡಗು ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಚ್ಚರಿಸಿದೆ. ಈ ಹಿನ್ನಲೆಯಲ್ಲಿ ಪೆರಾಜೆ ಶ್ರೀಶಾಸ್ತಾವು ದೇವಳದಲ್ಲಿ ಸ್ಥಳೀಯ ರು ಮತ್ತು ಸಾರ್ವಜನಿಕರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಂದ್ರಾ, ಒಡಿಶಾ ಕರಾವಳಿಯಲ್ಲಿ ಇದ್ದು, ಆಗಸ್ಟ್ 20,21ರಂದು ಗುಜರಾತ್…
ಹಲಸಿನ ಹಣ್ಣಿನ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ಎತ್ತಿನಹೊಳೆ ಯೋಜನೆಯಡಿ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು…
ದೇಶದ ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ…
ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…