ಬೆಲೆ ಏರಿಕೆಯ ನಡುವೆಯೂ ಪೆಟ್ರೋಲ್, ಡೀಸೆಲ್ ಬಳಕೆಯೂ ಏರಿಕೆ…! |

Advertisement

ತೈಲ ಬೆಲೆ ಏರಿಕೆಯ ಹಾದಿಯಲ್ಲಿಯೇ ಇದೆ. ಹೀಗಾಗಿ ಎಲ್ಲೆಡೆಯೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯದ್ದೇ ಸುದ್ದಿ. ಈ ನಡುವೆಯೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬಳಕೆಯೂ ಹೆಚ್ಚಾಗಿದೆ…!. ಸರ್ಕಾರಿ ದಾಖಲೆಗಳು ಈ ಮಾಹಿತಿ ನೀಡುತ್ತವೆ.

Advertisement

ಸರ್ಕಾರಿ ಮಾಹಿತಿ ಪ್ರಕಾರ ಕಳೆದ ತಿಂಗಳಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಪೆಟ್ರೋಲ್ ಬಳಕೆ ಶೇಕಡಾ 14 ರಷ್ಟು ಹೆಚ್ಚಾಗಿದೆ, ಡೀಸೆಲ್ ಬಳಕೆ ಶೇಕಡಾ 2 ರಷ್ಟು ಹೆಚ್ಚಾಗಿದೆ. ಜಾಗತಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ತಕ್ಷಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗಲಿವೆ ಎಂದೂ ಸರ್ಕಾರಿ ಮಾಹಿತಿ ಹೇಳುತ್ತದೆ.

Advertisement
Advertisement
Advertisement

ಮಾರ್ಚ್ 22 ರಿಂದ ಏಪ್ರಿಲ್ 6 ರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 14 ಬಾರಿ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 105.41 ರೂ ಆಗಿದ್ದರೆ ಡೀಸೆಲ್ ಬೆಲೆ 96.67 ರೂ. ಆಗಿದೆ. ಈಚೆಗೆ ಭಾರತವು ಜೈವಿಕ ಇಂಧನ ಮಿಶ್ರಣವನ್ನು ವೇಗಗೊಳಿಸಿದೆ ಮತ್ತು ಏಪ್ರಿಲ್ 1, 2023 ರ ಹೊತ್ತಿಗೆ ದೇಶವು ಎಲ್ಲಾ ಪೆಟ್ರೋಲ್ ಪಂಪ್‌ಗಳಲ್ಲಿ ಶೇಕಡಾ 20 ರಷ್ಟು ಜೈವಿಕ ಇಂಧನ ಮಿಶ್ರಿತವಾದ ಇಂಧನವನ್ನು ಹೊಂದಿರುತ್ತದೆ ಎಂಬುದು ಈಗಿನ ಲೆಕ್ಕಾಚಾರ.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಬೆಲೆ ಏರಿಕೆಯ ನಡುವೆಯೂ ಪೆಟ್ರೋಲ್, ಡೀಸೆಲ್ ಬಳಕೆಯೂ ಏರಿಕೆ…! |"

Leave a comment

Your email address will not be published.


*