ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಚಣಿಲ ಸಿ ಟಿ ಸತ್ಯನಾರಾಯಣ ಅವರಿಗೆ ಪಿಎಚ್‌ಡಿ ಪದವಿ ಪ್ರಾಪ್ತವಾಗಿದೆ. ಅದ್ವೈತ ವೇದಾಂತ ಶಾಸ್ತ್ರದ ” A critical Analysis of Tarkika Theories as Found in Advaita Siddhi ” ಎನ್ನುವ ವಿಷಯವನ್ನು ಕುರಿತು ನಡೆಸಿದ ಸಂಶೋಧನಾ ಗ್ರಂಥವನ್ನು ಪರಿಗಣಿಸಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸೆ.27 ರಂದು ಪಿಎಚ್‌ಡಿ ಉಪಾಧಿಯನ್ನು ಉದ್ಘೋಷಿಸಿದೆ. ಈ ವರ್ಷದ ಕೊನೆಯಲ್ಲಿ ನಡೆಯುವ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಚಣಿಲದ ತಿರುಮಲೇಶ್ವರ ಭಟ್ ಹಾಗೂ ವತ್ಸಲಾ ದಂಪತಿಗಳ ಪುತ್ರನಾಗಿರುವ ಸತ್ಯನಾರಾಯಣ ಅವರು ಅದ್ವೈತ ವೇದಾಂತದಲ್ಲಿ ಎಂಎ ಹಾಗೂ ಎಂಫಿಲ್ ಪದವಿಯನ್ನು ಪಡೆದು ವೇದ್ಯ ವೇದ ವಿಜ್ಞಾನ ಶೋಧ ಸಂಸ್ಥಾನಮ್ ಇಲ್ಲಿ ಉಪ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…