ಬೆಂಗಳೂರಿನ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್ ನ ಸಂಶೋಧನಾ ವಿದ್ಯಾರ್ಥಿ ವೈಷ್ಣವಿ ಅವರಿಗೆ Heterogeneous Catalysis ಕ್ಷೇತ್ರದಲ್ಲಿ,ಡಾ. ಗಣಪತಿ ವಿ ಶಾನಭಾಗ್ ಅವರ ಮಾರ್ಗದರ್ಶನದಲ್ಲಿ “Designing novel catalysts for conversion of biomass derivatives furfuryl alcohol and levulinic acid into value-added chemicals” ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ವೈಷ್ಣವಿ ಯವರು ಕೇಂದ್ರ ಸರಕಾರದ ಪತಿಷ್ಠಿತ Council of Scientific & Industrial Research ನಿಂದ SRF ಫೆಲೋಶಿಪ್ (CSIR-SRF Direct) ಪಡೆದಿರುವುದಷ್ಟೇ ಅಲ್ಲದೆ, ಅನೇಕ ರಾಷ್ಟೀಯ ಮತ್ತು ಅಂತರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನಗಲ್ಲಿ ಭಾಗವಹಿಸಿ ಅತ್ಯುತ್ತಮ ಮಂಡನೆಗಾಗಿ 6 Best Presentation award” ಪಡೆದಿದ್ದಾರೆ. ಇವರು ಬರೆದ 4 ಸಂಶೋಧನಾ ಲೇಖನಗಳು ಪ್ರತಿಷ್ಠಿತ ಅಂತರಾಷ್ಟೀಯ ಜರ್ನಲ್ ಗಳಲ್ಲಿ ಪ್ರಕಟವಾಗಿವೆ ಹಾಗೂ 3 ಲೇಖನಗಳು ಪ್ರಕಟವಾಗುವ ಪ್ರಕ್ರಿಯೆಯಲ್ಲಿವೆ. ಇವರು ಸಹ-ಲೇಖಕರಾಗಿ ಬರೆದ 2 ಪಠ್ಯ ಅಧ್ಯಾಯಗಳನ್ನು ಪ್ರತಿಷ್ಠಿತSpringer-Nature ಮತ್ತು Elsevier ಪ್ರಕಾಶನಗಳು ಪ್ರಕಟಿಸಿವೆ.
ಇವರು ಮೂಲತಃ ಕುಶಾಲನಗರದ ಶಿಕ್ಷಕಿ ಚಿತ್ರಾ ಮತ್ತು ಉದ್ಯಮಿ ಜನಾರ್ದನ ಅವರ ಸುಪುತ್ರಿಯಾಗಿದ್ದು, ಮಂಡೆಕೋಲು ಗ್ರಾಮದ ಬೊಳುಗಲ್ಲು ಪದ್ಮಾವತಿ ಮತ್ತು ದಿ. ಶಶಿಧರ ನಾಯಕ್ (ಮಾಜಿ ಸಿಇಓ ಮಂಡೆಕೋಲು ಸಹಕಾರಿ ಬ್ಯಾಂಕ್) ಇವರ ಪುತ್ರ ಸುಬ್ರಹ್ಮಣ್ಯ ಬಿ ಎಸ್ ಅವರ ಪತ್ನಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…