ತೆಂಗಿನ ಮರವನ್ನು ಮುಂದಿಟ್ಟು ಅದರ ಸುತ್ತವೇ ಇಡೀ ಕಾರ್ಯಕ್ರಮ. ಅದ್ಭುತವಾದ ಆಯೋಜನೆ, ಹೊಸ ಐಡಿಯಾ. ತೀರಾ ಗಮನ ಸೆಳೆದ ಕಾರ್ಯಕ್ರಮ ಅದು. ಆ ಕಾರ್ಯಕ್ರಮದ ಹೆಸರು ” ಜಿಮ್ಕಾನ “. ನಡೆದದ್ದು ಪುತ್ತೂರಿನ ಸೈಂಟ್ ಫಿಲೋಮಿನಾ ಹೈಯರ್ ಪ್ರೈಮರೀ ಸ್ಕೂಲ್. ಕಲ್ಪವೃಕ್ಷಕ್ಕೆ ಮೌಲ್ಯವರ್ಧನೆ ಮಾಡುವ ಪ್ರಯತ್ನ ಇಲ್ಲಿದೆ. ಇದೊಂದು ಮಾದರಿ ಕಾರ್ಯಕ್ರಮವೂ ಹೌದು. ಮುಂದೆ ಓದಿ
ಜಿಮ್ಕಾನ ದ ಹೆಸರಿನ ನಡುವೆ ಒಂದು ತೆಂಗಿನಮರವನ್ನು ಇಟ್ಟುಕೊಂಡಿದ್ದಾರೆ. ಇದೊಂದು ಪೇರೆಂಟ್ಸ್ ಸ್ಪೋರ್ಟ್ಸ್ ಮೀಟ್. ಸ್ಪೋರ್ಟ್ ಮೀಟ್ ಗೂ ತೆಂಗಿನ ಮರಕ್ಕೂ ಏನು ಸಂಬಂಧ ಅಂತ ಪಕ್ಕನೆ ನಿಮಗೆ ಅನ್ನಿಸಿರಬಹುದು. ಅಲ್ಲೇ ಇರುವುದು ಗಮ್ಮತ್ತಿನ ವಿಷಯ. ತೆಂಗಿನ ಮರ ಹತ್ತುವ ಕಾಂಪಿಟೀಷನ್ನೂ ಇಲ್ಲಿಲ್ಲ, ಎಳನೀರು ಕೆತ್ತುವ ಸ್ಪರ್ಧೆ ಇಲ್ಲವೇ ಇಲ್ಲ. ಆದರೆ ಇದೊಂದು ವಿಶಿಷ್ಟ ಕಾರ್ಯಕ್ರಮ. ಕಲ್ಪವೃಕ್ಷಕ್ಕೆ ಮೌಲ್ಯವರ್ಧನೆ ಮಾಡುವ ಪ್ರಯತ್ನ. ಹಲವು ಆಯಾಮಗಲ್ಲಿ ಯೋಚಿಸಿ, ಕೆಲವೊಂದು ಆಧುನಿಕ ಯಾಂತ್ರಿಕ ಜೀವನದಿಂದ ಅನಗತ್ಯ ಚಟುವಟಿಕೆಗಳಿಂದ ಹೊರಬರುವ ಪ್ರಯತ್ನ. ಇಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ರಿಂದ ಹಿಡಿದು ಶಿಕ್ಷಕರು, ಸಹಾಯಕರು ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.ಮುಂದೆ ಓದಿ
ಇದೊಂದು ಖರ್ಚು ವೆಚ್ಚಗಳಿಗೆ ಬೆಲೆಕೊಡದ ಕಾರ್ಯಕ್ರಮ. ಇದೊಂದು ಎಲ್ಲರೂ ಒಟ್ಟುಗೂಡಿ ಶ್ರಮದಿಂದ ಸಾಧಿಸಲು ಹೊರಟ ಕಾರ್ಯಕ್ರಮ. ಇದೊಂದು ಕಲ್ಪವೃಕ್ಷ ದ ಪ್ರತಿ ಭಾಗಗಳಿಗೂ ಬೆಲೆ ಬರುವಂತೆ ಮಾಡುವ ಕಾರ್ಯಕ್ರಮ. ಇದೊಂದು ಮಕ್ಕಳು ಮೊಬೈಲ್ ಚಟದಿಂದ ಹೊರಬರುವಂತೆ ಮಾಡಲಿರುವ ಕಾರ್ಯಕ್ರಮ. ಇದೊಂದು ಸೃಜನಶೀಲತೆಗೆ, ಕಲಾತ್ಮಕತೆಗೆ ಒತ್ತುಕೊಡುವ ಕಾರ್ಯಕ್ರಮ. ಇದೊಂದು ಸಣ್ಣ ಮಕ್ಕಳಿರುವಾಗ ಆಡಿದ ಆಟಗಳನ್ನು ಮತ್ತೆ ಆಡಿ ಅಂಥಹಾ ಆಟಗಳಿಗೆ ಮರುಜೀವ ಕೊಡುವ ಕಾರ್ಯಕ್ರಮ. ಇದೊಂದು ನಮ್ಮ ಹಳೆ ತಲೆಮಾರಿನವರು ಆಚರಿಸಿಕೊಂಡು, ಸಂಪ್ರದಾಯದ ಆಹಾರಗಳ ತಯಾರಿಕೆಗೆ ಒತ್ತುಕೊಡುವ ಕಾರ್ಯಕ್ರಮ.ಮುಂದೆ ಓದಿ
ವೇದಿಕೆಯಲ್ಲಿ ಆಸೀನರಾದ ಸಂಸ್ಥೆ ಯ ಸಂಚಾಲಕರಿಗೆ, ಗಣ್ಯ ಅತಿಥಿಗಳಿಗೆ ಎಳೆ ತೆಂಗಿನ ಮಡಲಿನಿಂದ ಮಾಡಿದ ಬ್ಯಾಡ್ಜ್, ಕೈಗೆ ಹಸಿರುಬಣ್ಣದ ಮಡಲಿನ ವಾಚ್, ಒಣ ಸಿಪ್ಪೆಸಹಿತ ತೆಂಗಿನ ಕಾಯಿಗೆ ಸುಂದರವಾಗಿ ಚಿತ್ರವನ್ನು ಬಿಡಿಸಿ ಆಕರ್ಷಕವಾಗಿ ಕಾಣುವ ಸ್ಮರಣಿಕೆ, ವಿವಿಧ ರೀತಿಯ ತರಕಾರಿ ಬೀಜಗಳುಳ್ಳ ಪೌಚ್, ತೆಂಗಿನ ಗರಿಗಳನ್ನು ಕಲಾತ್ಮಕವಾಗಿ ತಯಾರಿಸಿದ ಹೂವುಗಳನ್ನು ಕೊಟ್ಟು ಮುಖ್ಯಶಿಕ್ಷಕಿ ಸಿಸ್ಟರ್ ಲೋರಾ ಪಾಯಸ್ ಅವರು ಗೌರವಿಸುತ್ತಾರೆ.ಮುಂದೆ ಓದಿ
ಸ್ಟೇಜ್ ನ ಎದುರುಗಡೆ ಕಲ್ಪವೃಕ್ಷ ದ ಪ್ರತಿ ಭಾಗಗಳಲ್ಲೂ ವಿವಿಧ ಸೃಜನಶೀಲತೆ. ಆಟಗಳಲ್ಲಿ ಪ್ರಥಮ ಸ್ಥಾನ ಬಂದವರಿಗೆ ಬಂಗಾರ ಬಣ್ಣದ ಜಿಮ್ಕಾನಾ ಸ್ಟಿಕ್ಕರ್ ಅಂಟಿಸಿದ ತೆಂಗಿನಕಾಯಿ. ದ್ವಿತೀಯಕ್ಕೆ ಬೆಳ್ಳಿಯ ಕಾಯಿ. ತೃತೀಯಕ್ಕೆ ಕಂಚುಬಣ್ಣದ ಕಾಯಿ. ಅದರೊಟ್ಟಿಗೆ ಸರ್ಟಿಫಿಕೇಟ್. ನಮ್ಮ ಪರಿಸರದ ವಸ್ತುಗಳನ್ನೇ ನಾವು ಮೌಲ್ಯವರ್ಧನೆ ಮಾಡಿ ನಾವೇ ಕೃಷಿಕರ ಬೆವರಿಗೆ ಬೆಲೆಬರುವಂತೆ ಮಾಡುವ ಪರಿಕಲ್ಪನೆ.ಮುಂದೆ ಓದಿ
ಇನ್ನೂ ಮುಂದುವರಿದು ಬೆಳಗಿನ ಉಪಹಾರ ಅವರವರ ಮನೆಯಿಂದ ಸಜ್ಜಿಗೆ ಅವಲಕ್ಕಿ ತಂದು ಒಂದೇ ಪಾತ್ರೆಯಲ್ಲಿ ಹಾಕಿ ಮತ್ತೆ ಹಂಚಿ ತಿನ್ನುವ, ಭಾಂದವ್ಯವನ್ನು ಗಟ್ಟಿಗೊಳಿಸುವ ಪರಿಕಲ್ಪನೆ. ಮಧ್ಯಾಹ್ನದ ಊಟಕ್ಕೂ ಪ್ರತಿ ಪೋಷಕರ ಮನೆಯಲ್ಲಿ ಬೆಳೆದ ತರಕಾರಿ, ಅಡುಗೆ ಸಾಮಗ್ರಿ. ತರಕಾರಿ ಹಚ್ಚುವುದರಿಂದ ಹಿಡಿದು ಅಡುಗೆ ತಯಾರಿ, ದೊಡ್ಡ ಹಾಳೆಯ ಪಾತ್ರದಿಂದ ಗೆರಟೆಯ ಸೌಟಲ್ಲಿ ಬಡಿಸುವವರು ಶಿಕ್ಷಕರು, ಪೋಷಕರು.ಮುಂದೆ ಓದಿ
ಇಲ್ಲಿ ತನ್ಮಯತೆ ಇತ್ತು. ಪಾಲ್ಗೊಳ್ಳುವಿಕೆ ಇತ್ತು, ತಲೆಯೊಳಗೆ ಸಾವಿರ ಚಿಂತೆಗಳಿದ್ದರೂ ಎಲ್ಲವನ್ನು ಮರೆತು ಮತ್ತೆ ಬಾಲ್ಯದ ಆಟಗಳನ್ನು ಸವಿಯುವ, ಅತ್ಯುತ್ಸಾಹದಿಂದ ಪಾಲ್ಗೊಳ್ಳುವ ಮತ್ತೆ ಮಕ್ಕಳಾಟಗಳನ್ನಾಡುವ ಹಿರಿಯ ಮನಸ್ಸುಗಳಿತ್ತು.ಮುಂದೆ ಓದಿ
ಕೆಲವರು ನಿಧಾನ ಸೈಕಲ್ ರೇಸ್ನಲ್ಲಿ ಎಡವಿದರು, ಗೋಣಿಕಾಲಿಗೆ ತಾಗಿ ಓಡುವಾಗ ಬಿದ್ದು ಎದ್ದು ಮತ್ತೆ ಬಿದ್ದರು, ಲಗೋರಿಯಲ್ಲಿ ಬೆನ್ನಿಗೆ ಬಾಸುಂಡೆ ಬರುವಂತೆ ಹೊಡೆದರು, ಟೊಪ್ಪಿ ಬೇಕಾ ಟೊಪ್ಪಿಯಾಟದಲ್ಲಿ ಸಂಭ್ರಮಿಸಿದರು, ಟಯರ್ ಉರುಳಿಸುವ ಆಟದಲ್ಲಿ ಹತ್ತಿರದ ಟ್ರಾಕ್ ನ ಆಟಗಾರನಿಗೆ ಕಾಲಿಗೆ ಢಿಕ್ಕಿಹೊಡೆದರು, ಗೋಲಿಯಾಟದಲ್ಲಿ ಮೈ ರೋಮಾಂಚನವಾಗುವಂತೆ ನಡುಬೆರಳಿನಿಂದ ಹೊಡೆದು ಚಾಂಪಿಯನ್ ಆದರು, ಪಲ್ಲೆ ಆಟದಲ್ಲಿ ಮಹಿಳೆಯರು ಕಷ್ಟಕಾಲದ ಹಂತದ ಸಮಯದಲ್ಲಿ ತಮ್ಮ ನೈಪುಣ್ಯತೆ ಯನ್ನು ತೊರಿಸಿದರು. ಮಡಕೆಹೊಡೆಯುವ ಸ್ಪರ್ಧೆಯಲ್ಲಿ ಕೆಲವರಂತೂ ಊರು ಬಿಟ್ಟು ಹೋಗುವ ರೀತಿಯಲ್ಲಿ ನಡೆದುಹೋಗುತ್ತಿದ್ದರು.ಮುಂದೆ ಓದಿ
ದಂಪತಿಗಳ ಹಾಳೆಎಳೆಯುವ ಸ್ಪರ್ಧೆ ಯಲ್ಲಿ ಗಂಡದಿರ ಮೇಲಿರುವ ಕೋಪವನ್ನು ಎಳೆಯುವ ರೀತಿಯಲ್ಲಿ ತೋರ್ಪಡಿಸುತ್ತಿದ್ದರು. ನಿಧಿ ಶೋಧನೆಯಲ್ಲಿ ಮೈದಾನವನ್ನೇ ಜಾಲಾಡಿದರು. ಆಟದ ಮೈದಾನವೆಂದರೆ ಅಲರ್ಜಿ ಎನ್ನುವವರಿಗೆ ಸಿಹಿ/ಖಾರ ತಿಂಡಿ ತಯಾರಿಕೆಗೆ ಅವಕಾಶವಿತ್ತು. ಒಳಾಂಗಣ ಆಟಗಳಿತ್ತು. ಬಣ್ಣದ ಚಿತ್ರ, ಪೆನ್ಸಿಲ್ ಡ್ರಾಯಿಂಗ್, ಮದರಂಗಿ, ಕವನ ರಚನೆ, ಕ್ಲೇ ಮಾಡೆಲಿಂಗ್.. ಇತ್ಯಾದಿ ಏನಿದ್ದರೂ ತೆಂಗಿಗೆ ಸಂಬಂಧಿಸಿದ ಕಲಾಗಾರಿಕೆಗೆ ಮಾತ್ರ ಅವಕಾಶ.ಎಡೆ ಎಡೆಯಲ್ಲಿ ಒಗಟುಗಳಿಗೆ ಸರಿಉತ್ತರ ನೀಡಿದ ಮಕ್ಕಳಿಗೆ ಬಾಳೆಹಣ್ಣಿನ ಬಹುಮಾನ. ಸಣ್ಣ ವಿರಾಮಗಳಲ್ಲಿ ಮಕ್ಕಳಿಂದ ಗಾದೆಮಾತುಗಳು.ಮುಂದೆ ಓದಿ
ಮಧ್ಯಾಹ್ನದ ಊಟಕ್ಕೆ ಹುರುಳಿಚಟ್ನಿ, ತಿಮರೆಚಟ್ನಿ, ಸಾಂಬಾರು, ಬಾಳೆಹೂವಿನ ಪಲ್ಯ, ಮಜ್ಜಿಗೆ ಮೆಣಸು, ಸೋಜಿ, ಮುಳ್ಳುಸೌತೆಯ ಉಪ್ಪಿನಕಾಯಿ. ಏನಿದ್ದರೂ ಸಾಂಪ್ರದಾಯಿಕ ಅಡುಗೆ. ಬಡಿಸಲು ದೊಡ್ಡ ಹಾಳೆಯ ಪಾತ್ರೆ, ಗೆರಟೆಯ ಸೌಟು, ಆಗಾಗ ಕುಡಿಯಲು ಗಾಂಧಾರಿ ಮೆಣಸಿನ ಖಾರ ಮಜ್ಜಿಗೆ. ಮಣ್ಣಿನ ಮಡಿಕೆಯಲ್ಲಿ ಬೆಲ್ಲ ಮತ್ತು ನೀರು. ಅವರವರ ಬಟ್ಟಲನ್ನು ಅವರವರೇ ತೊಳೆಯುವ ಶಿಸ್ತು.ಊಟದ ವಿರಾಮದಲ್ಲಿ ಹೆತ್ತವರು ಶಿಶುಗೀತೆಗೆ ಹಾಸ್ಯದ ಲೇಪನದೊಂದಿಗಿರುವ ಹಾಡನ್ನು ಹಾಡಿಕುಣಿದರು.ಮುಂದೆ ಓದಿ
ಹೊತ್ತು ಮುಳುಗಿದರೂ ಯಾರೊಬ್ಬರ ಮುಖದಲ್ಲಿ ಆಯಾಸ ಕಾಣಿಸಲಿಲ್ಲ, ಬಂಗಾರ, ಬೆಳ್ಳಿಯ ತೆಂಗಿನಕಾಯಿಯನ್ನು ಹಿಡಿದು ಸಂಭ್ರಮದ ಬಾಲ್ಯದ ದಿನಗಳನ್ನು ನೆನಪಿಸುತ್ತಾ ಸೆಲ್ಫಿ ಪಾಯಿಂಟ್ ನಲ್ಲಿ ನೆನಪಿಗಾಗಿ ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದರು.ಚುರುಕುತನದ ಕೆಲಸಗಳಿಂದ ಶಿಕ್ಷಕ ವೃಂದ ಎಲ್ಲ ಕೆಲಸಗಳೂ ಸುಸೂತ್ರವಾಗಿ ನಡೆಯುವಂತೆ ಸಾಥ್ ನೀಡಿದ್ದರು.ಮುಂದೆ ಓದಿ
ಇದೆಲ್ಲಾ ನಡೆದದ್ದು ಪುತ್ತೂರಿನ ಸೈಂಟ್ ಫಿಲೋಮಿನಾ ಹೈಯರ್ ಪ್ರೈಮರೀ ಸ್ಕೂಲ್ಇ ಲ್ಲಿಯ ಅಂಗಳದಲ್ಲಿ. ಗಣರಾಜ್ಯೋತ್ಸವ ದ ನಂತರ ನಡೆದ ಕಾರ್ಯಕ್ರಮಕ್ಕೆ ಮಾಯ್ ದೇ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್ ಶುಭಹಾರೈಸಿ, ತೆಂಗಿನ ಕಾಯಿ ಕುಟ್ಟುವುದರ ಮೂಲಕ ಮತ್ತು ಲಗೋರಿ ಆಡುವುದರ ಮೂಲಕ ಚಾಲನೆಯನ್ನು ನೀಡಿದ್ದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಹರೀಶ್ ಶೆಣೈ ಅವರು ಮುಖ್ಯ ಅತಿಥಿಗಳಾಗಿ ಶುಭಹಾರೈಸಿ ಸಾಂಪ್ರದಾಯಿಕ ಆಹಾರ ಸ್ಪರ್ಧೆಯನ್ನು ಉದ್ಘಾಟಿಸಿದ್ದರು. ಎಲ್ಲಾ ಮುಖ್ಯ ಅತಿಥಿಗಳು ಆಟಗಳನ್ನು ನೋಡಿ ಸಂಭ್ರಮಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾಯಸ್ ಅವರು ಎಲ್ಲಾ ಕಾರ್ಯಕ್ರಮ ವನ್ನು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿ ಧನ್ಯವಾದಗಳನ್ನು ಸಮರ್ಪಿಸಿದರು.ಮುಂದೆ ಓದಿ
Philomena School in Puttur has shown that by keeping a coconut tree concept, school anniversary and parents’ sports day can be done. Through this, School has shown the agricultural life and the way of increasing the value of agricultural products and also Value Addition of coconut.