ಪುತ್ತೂರು | ಫಿಲೋಮಿನ ಕಾಲೇಜಿನಲ್ಲಿ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ |

October 23, 2022
12:12 PM

ಮಾಯಿದೇ ದೇವುಸ್ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಪ್ರಜಾಸತ್ತಾತ್ಮಕ ಚುನಾವಣೆ ಕಾಲೇಜಿನ ಚುನಾವಣಾ ನೀತಿಸಂಹಿತೆಯ ಪಾಲನೆಯೊಂದಿಗೆ ಕಾಲೇಜಿನ
ಪ್ರಾಚಾರ್ಯರಾದ ಡಾ । ಆಂಟೋನಿ ಪ್ರಕಾಶ್ ಮೊಂತೆರೋ ಅವರ ನಿರ್ದೇಶನ ಹಾಗು ಮಾರ್ಗದರ್ಶನ, ಕ್ಯಾಂಪಸ್
ನಿರ್ದೇಶಕ  ಸ್ಟ್ಯಾನಿ ಪಿಂಟೊ ಅವರ ಸಹಕಾರದೊಂದಿಗೆ ,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು .

Advertisement
Advertisement

ಚುನಾವಣೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಹುದ್ದೆಗಳಿಗೆ ತಲಾ ಇಬ್ಬರು ಸ್ಪರ್ಧಿಗಳು, ಆರು ಸ್ಪರ್ಧಿಗಳಿದ್ದು ಅನುಕ್ರಮವಾಗಿ ಕಾರ್ಯದರ್ಶಿ 3ನೇ ಬಿಸಿಎಯ ಜಾನ್ವಿಸ್ಟನ್ ಟೈಟಸ್ ಡೈಸ್ ಮತ್ತು 3ನೇ ಬಿ. ಕಾಂ ಮೊಹಮ್ಮದ್ ಆಶಿಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿ ಮೊಹಮ್ಮದ್ ಆಶಿಕ್ ವಿಜೇತರಾಗಿ ಹೊರಹೊಮ್ಮಿದರು. ಮೂರನೇ ಬಿಸಿಎಯ ಅನುಶ್ರೀ ಕೆ ಮತ್ತು 3ನೇಬಿ.ಎಸ್ಸಿರಕ್ಷಾ ಅಂಚನ್ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದರ. ಕಾರ್ಯದರ್ಶಿಯಾಗಿ ಅನುಶ್ರೀ ಕೆ ಆಯ್ಕೆಯಾದರು.3ನೇ ಬಿ.ಎಸ್ಸಿ ನಯನಾ ಮತ್ತು 3ನೇ ಬಿಕಾಂನ ಶಿವಾನಿ ಜಂಟಿ ಹುದ್ದೆಗೆ ಸ್ಪರ್ಧಿಸಿದ್ದರು. ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.

Advertisement

ಈ ವಿದ್ಯಾಸಂಸ್ಥೆಯಿಂದ ಪಡೆದುಕೊಂಡ ವಿದ್ಯೆ ,ಶಿಸ್ತು ಹಾಗು ನಾಯಕತ್ವದ ಗುಣಗಳು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ದಾರಿದೀಪವಾಗಲಿ ಮತ್ತು ಇಂದು ಚುನಾಯಿತರಾದ ವಿದ್ಯಾರ್ಥಿ ನಾಯಕರು ಜವಾಬ್ದಾರಿಯುತವಾಗಿ ತಮ್ಮ ಕೆಲಸ ಕಾರ್ಯಗಳನ್ನು ನಿಭಾಯಿಸುವಂತಾಗಬೇಕು ಎಂದು  ಡಾ| ಆಂಟೋನಿ ಪ್ರಕಾಶ್ ಮೊಂತೇರೊ ಹೇಳಿದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ| ಚಂದ್ರಶೇಖರ್ ಮತ್ತು  ಭಾರತೀ ಎಸ್ ರೈ ಚುನಾವಣಾ
ಪ್ರಕ್ರಿಯೆ ನಡೆಸಿದರು . ಉಪ ಪ್ರಾಚಾರ್ಯರಾದ ಪ್ರೊ । ಗಣೇಶ್ ಭಟ್ ಹಾಗೂ ಡಾ। ಎ ಪಿ ರಾಧಾಕೃಷ್ಣ ಇವರ
ಉಪಸ್ಥಿತಿಯಲ್ಲಿ , ಡಾ| ವಿಜಯಕುಮಾರ್ ಮೊಳೆಯಾರ್ , ವಿನಯಚಂದ್ರ , ಡಾ| ರಾಧಾಕೃಷ್ಣ ಗೌಡ ,
ವಾಸುದೇವ ಎನ್ ಮತ್ತು ಪ್ರಾಧ್ಯಾಪಕ ವರ್ಗ ಹಾಗು ಕಚೇರಿ ಸಿಬ್ಬಂದಿ ಸಹಕಾರದೊಂದಿಗೆ ಚುನಾವಣೆ ನೆರವೇರಿತು.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ : ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ : ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ
April 25, 2024
3:00 PM
by: The Rural Mirror ಸುದ್ದಿಜಾಲ
ಬರಗಾಲ ಎಫೆಕ್ಟ್‌ : ಗಗನಕ್ಕೇರಿದ ತರಕಾರಿ ದರ : ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ ಯಾವುದೂ ಮುಟ್ಟುವಂಗಿಲ್ಲ..
April 25, 2024
2:39 PM
by: The Rural Mirror ಸುದ್ದಿಜಾಲ
ಕರಾವಳಿ ಜಿಲ್ಲೆಯ ಕೃಷಿ ಕ್ಷೇತ್ರದ ಕಡೆಗೆ ಗಮನ | ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ | ಮಂಗಳೂರು ಬಿಜೆಪಿ ಅಭ್ಯರ್ಥಿ ಭರವಸೆ |
April 25, 2024
2:00 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror