ಮಾಯಿದೇ ದೇವುಸ್ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಪ್ರಜಾಸತ್ತಾತ್ಮಕ ಚುನಾವಣೆ ಕಾಲೇಜಿನ ಚುನಾವಣಾ ನೀತಿಸಂಹಿತೆಯ ಪಾಲನೆಯೊಂದಿಗೆ ಕಾಲೇಜಿನ
ಪ್ರಾಚಾರ್ಯರಾದ ಡಾ । ಆಂಟೋನಿ ಪ್ರಕಾಶ್ ಮೊಂತೆರೋ ಅವರ ನಿರ್ದೇಶನ ಹಾಗು ಮಾರ್ಗದರ್ಶನ, ಕ್ಯಾಂಪಸ್
ನಿರ್ದೇಶಕ ಸ್ಟ್ಯಾನಿ ಪಿಂಟೊ ಅವರ ಸಹಕಾರದೊಂದಿಗೆ ,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು .
ಚುನಾವಣೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಹುದ್ದೆಗಳಿಗೆ ತಲಾ ಇಬ್ಬರು ಸ್ಪರ್ಧಿಗಳು, ಆರು ಸ್ಪರ್ಧಿಗಳಿದ್ದು ಅನುಕ್ರಮವಾಗಿ ಕಾರ್ಯದರ್ಶಿ 3ನೇ ಬಿಸಿಎಯ ಜಾನ್ವಿಸ್ಟನ್ ಟೈಟಸ್ ಡೈಸ್ ಮತ್ತು 3ನೇ ಬಿ. ಕಾಂ ಮೊಹಮ್ಮದ್ ಆಶಿಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿ ಮೊಹಮ್ಮದ್ ಆಶಿಕ್ ವಿಜೇತರಾಗಿ ಹೊರಹೊಮ್ಮಿದರು. ಮೂರನೇ ಬಿಸಿಎಯ ಅನುಶ್ರೀ ಕೆ ಮತ್ತು 3ನೇಬಿ.ಎಸ್ಸಿರಕ್ಷಾ ಅಂಚನ್ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದರ. ಕಾರ್ಯದರ್ಶಿಯಾಗಿ ಅನುಶ್ರೀ ಕೆ ಆಯ್ಕೆಯಾದರು.3ನೇ ಬಿ.ಎಸ್ಸಿ ನಯನಾ ಮತ್ತು 3ನೇ ಬಿಕಾಂನ ಶಿವಾನಿ ಜಂಟಿ ಹುದ್ದೆಗೆ ಸ್ಪರ್ಧಿಸಿದ್ದರು. ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ| ಚಂದ್ರಶೇಖರ್ ಮತ್ತು ಭಾರತೀ ಎಸ್ ರೈ ಚುನಾವಣಾ
ಪ್ರಕ್ರಿಯೆ ನಡೆಸಿದರು . ಉಪ ಪ್ರಾಚಾರ್ಯರಾದ ಪ್ರೊ । ಗಣೇಶ್ ಭಟ್ ಹಾಗೂ ಡಾ। ಎ ಪಿ ರಾಧಾಕೃಷ್ಣ ಇವರ
ಉಪಸ್ಥಿತಿಯಲ್ಲಿ , ಡಾ| ವಿಜಯಕುಮಾರ್ ಮೊಳೆಯಾರ್ , ವಿನಯಚಂದ್ರ , ಡಾ| ರಾಧಾಕೃಷ್ಣ ಗೌಡ ,
ವಾಸುದೇವ ಎನ್ ಮತ್ತು ಪ್ರಾಧ್ಯಾಪಕ ವರ್ಗ ಹಾಗು ಕಚೇರಿ ಸಿಬ್ಬಂದಿ ಸಹಕಾರದೊಂದಿಗೆ ಚುನಾವಣೆ ನೆರವೇರಿತು.
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …
ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಹಲವು ಮಹತ್ವದ ನಿರ್ಧಾರಗಳನ್ನು…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವುರಿಂದ, ಪಾರಂಪರಿಕ ಮಾಗಿ…
ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
2025-26 ನೇ ಸಾಲಿನ ಅಗ್ನಿವೀರರ ನೇಮಕಾತಿಗಾಗಿ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು…
ಎ.12 ರಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ರೈಲು ಸಂಚರಿಸಲಿದೆ. ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ…