ಬೇರೆ ಬೇರೆ ವಿಧದಲ್ಲಿ ಫೋಟೊ ಶೂಟ್ ನಡೆಯುತ್ತಿದೆ. ಆದರೆ ಕೇರಳದಲ್ಲಿ ನಡೆದ ವಿಭಿನ್ನ ಮಾದರಿಯ ಫೋಟೊ ಶೂಟ್ ಈಗ ವೈರಲ್ ಆಗಿದೆ. ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ವಧುವಿನ ಫೋಟೋಶೂಟ್ ಮಾಡಿಸಿದ್ದಾರೆ. ಇದು ಈಗ ವೈರಲ್ ಆಗಿದೆ.
ವಿವಾಹ ಸಮಾರಂಭದ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಲು ವೆಡ್ಡಿಂಗ್ ಫೋಟೊಶೂಟ್ ಮಾಡಲಾಗುತ್ತದೆ. ಆದರೆ ಈಗ ಕೇರಳದ ನವವಧುವೊಬ್ಬರು ವಿನೂತನ ಶೈಲಿಯಲ್ಲಿ ಫೋಟೊಶೂಟ್ ಮಾಡಿಸಿದ್ದು, ಈ ಚಿತ್ರಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಇದರ ಚಿತ್ರ ಮತ್ತು ವೀಡಿಯೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ರಸ್ತೆಯ ಮಧ್ಯದಲ್ಲಿ ವಧುವಿನ ಫೋಟೋಶೂಟ್ ಎಂಬ ಲೈನ್ ಬರೆದು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ಇದುವರೆಗೆ 4.3 ಮಿಲಿಯನ್ ವೀಕ್ಷಣೆ ಹಾಗೂ 3,70,400 ಲೈಕ್ ಬಂದಿವೆ. ವಧುವಿನ ಈ ಸೃಜನಶೀಲ ಫೋಟೊಗ್ರಾಫಿ ಸಾಮಾಜಿಕ ಜಾಲತಾಣದಲ್ಲಿ ತೀರಾ ವೈರಲ್ ಆಗಿದೆ.
ಈಚೆಗಷ್ಟೇ ಸುಳ್ಯದ ರಸ್ತೆಯ ಫೋಟೊ ಕೂಡಾ ಇದೇ ಮಾದರಿಯಲ್ಲಿ ವೈರಲ್ ಆಗಿತ್ತು. ಆ ಸಂದರ್ಭದಲ್ಲಿ ಕೀಬೋರ್ಡ್ ವಾರಿಯರ್ ಎಂಬ ವಿಷಯವೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಜನರು ತಮ್ಮ ಅಸಮಾಧಾನಗಳನ್ನು,ಬೇಸರಗಳನ್ನು, ಅನೇಕ ಸಮಯಗಳ ಬೇಡಿಕೆಗಳು ಈಡೇರದೇ ಇದ್ದಾಗ ಸಾಮಾಜಿಕ ಜಾಲತಾಣಗಳ ಮೂಲಕ ಆಡಳಿತವನ್ನು ಎಚ್ಚರಿಸುವ ಮಾದರಿಗಳು ದೇಶದೆಲ್ಲೆಡೆಯೂ ನಡೆಯುತ್ತದೆ.
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮಳೆಯ…