ಚಂದ್ರಯಾನ 3ರ ಅಭೂತಪೂರ್ವ ಯಶಸ್ವಿನಿಂದ ಜಾಗತಿಕ ಮನ್ನಣೆಗಳಿಸಿದ ನಂತರ ಇಸ್ರೋ ಇನ್ನೊಂದು ಚಾರಿತ್ರಿಕ ಸಾಧನೆಗೆ ಮುಂದಾಗಿದೆ. ಹತ್ತಿರದ ಚಂದ್ರನಿಂದ ದೂರದ ಸೂರ್ಯನಿಗೆ ಗಮನಹರಿಸಿ ಭಾರತದ ಪ್ರಪ್ರಥಮ ಖಗೋಳ ಸೌರವೀಕ್ಷಣಾಲಯ ಆದಿತ್ಯ-ಎಲ್ 1 ಉಪಗ್ರಹವನ್ನು ಸೆ.2ರಂದು ಬೆಳಿಗ್ಗೆ 11.50ಕ್ಕೆ ಆಂಧ್ರದ ಶ್ರೀಹರಿಕೋಟ ಕೇಂದ್ರದಿಂದ ಉಡಾವಣೆ ಪ್ರಕ್ರಿಯೆ ಮಾಡುವುದಾಗಿ ಇಸ್ರೋ ಈಗಾಗಲೇ ಘೋಷಿಸಿದೆ.
ಪಿಲಿಕುಳ ವಿಜ್ಞಾನ ಕೇಂದ್ರವು ಆದಿತ್ಯ–ಎಲ್1 ಉಪಗ್ರಹದ ಮಾಹಿತಿ ಹಾಗೂ ಪ್ರಯೋಗಗಳ ಬಗ್ಗೆ ಇಸ್ರೋ ವಿಜ್ಞಾನಿಗಳ ನೇತೃತ್ವ ಹಾಗೂ ಭಾಗವಹಿಸುವಿಕೆಯೊಂದಿಗೆ ಜಿಲ್ಲೆಯ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಎರಡು ದಿನಗಳ ಪ್ರತ್ಯೇಕ ಕಾರ್ಯಗಾರಗಳನ್ನು ಆಯೋಜಿಸಿತ್ತು.
ಈಗ ಆದಿತ್ಯ-ಎಲ್1 ಉಪಗ್ರಹ ಉಡ್ಡಯನ ಸಂದರ್ಭದಲ್ಲಿ ವಿಜ್ಞಾನ ಕೇಂದ್ರ ಅದರ ನೇರಪ್ರಸಾರ ಹಾಗೂ ಭಿತ್ತಿ ಚಿತ್ರ ಪ್ರದರ್ಶನವನ್ನು ಬೆಳಿಗ್ಗೆ 11.30ಕ್ಕೆ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ಏರ್ಪಡಿಸಿದೆ. ಉಪಗ್ರಹದ ವಿವರಗಳನ್ನು ಕೇಂದ್ರದ ಸಿಬ್ಬಂದಿ ನೀಡಲಿದ್ದು, ಆಸಕ್ತರು ಭಾಗವಹಿಸುವಂತೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ. ಕೆ.ವಿ. ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…
ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮ…
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…