ಅಡಿಕೆಗೆ ಔಷಧಿ ಸಿಂಪಡಣೆ ಜಾಬ್‌ ವರ್ಕ್‌ | ಅರಳಿದ “ಪಿಂಗಾರ” ಸಂಸ್ಥೆ | 7 ತಿಂಗಳಲ್ಲಿ 20 ಲಕ್ಷ ವ್ಯವಹಾರ |

Advertisement

ಅಡಿಕೆಗೆ ಔಷಧಿ ಸಿಂಪಡಣೆ ಬಹುದೊಡ್ಡ ಸವಾಲು. ಕಾರಣ ನುರಿತ ಕಾರ್ಮಿಕರ ಕೊರತೆ ಹಾಗೂ ಮಳೆಗಾಲ  ಮರ ಏರುವ ಸಮಸ್ಯೆ. ಇದಕ್ಕೆ ಪರಿಹಾರವಾಗಿ ಪೈಬರ್‌ ದೋಟಿ ಬಳಕೆಗೆ ಬಂದಿತು. ಇದಕ್ಕಾಗಿಯೇ ತರಬೇತಿ ನಡೆಯಿತು. ಕೆಲವು ಕಡೆ ಜಾಬ್‌ ವರ್ಕ್‌ ಆರಂಭವಾದವು. ಇಂತಹ ಜಾಬ್‌ ವರ್ಕ್‌ ಮಾಡಿದ ಮುಂಚೂಣಿಯಲ್ಲಿರುವ ಸಂಸ್ಥೆ ವಿಟ್ಲ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಫ್‌ ಪಿ ಒ ಪಿಂಗಾರ. ಈ ವರ್ಷ ದೋಟಿ ತಂಡದ ಮೂಲಕ 20 ಲಕ್ಷ ವ್ಯವಹಾರ ನಡೆಸಿದೆ. ಸಂಸ್ಥೆಯನ್ನು ರಾಮ್‌ ಕಿಶೋರ್‌ ಮಂಚಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

Advertisement

ಅಡಿಕೆ ಕೃಷಿಕರಿಗೆ ವರವಾಗುವಂತಹ ಕಾರ್ಯವೊಂದನ್ನು  ವಿಟ್ಲದ ಪಿಂಗಾರ ಸಂಸ್ಥೆ ಮಾಡಿದೆ. ಪಿಂಗಾರವು ರೈತರಿಂದಲೇ ರಚನೆಯಾದ ಸಂಸ್ಥೆ. ರೈತ ಪರವಾದ ಹಲವು ಕಾರ್ಯಕ್ರಮ, ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸುತ್ತಿರುವ ಈ ಸಂಸ್ಥೆ ಈ ಬಾರಿ ಅಡಿಕೆ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿತ್ತು. ಕಾರ್ಬನ್‌ ಪೈಬರ್‌ ದೋಟಿ ಮೂಲಕ ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಗೆ ಸಾಧ್ಯ ಎಂಬುದು ಮನಗಂಡ ಬಳಿಕ ಈ ಸಂಸ್ಥೆ ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಗೆ ಜಾಬ್‌ ವರ್ಕ್‌ ನಡೆಸಲು ಸಿದ್ಧತೆ ನಡೆಸಿ ಮಾರ್ಚ್‌ ಆರಂಭದಿಂದ ಈ ಕೆಲಸ ಆರಂಭಿಸಿತು. ಇದೀಗ ಒಟ್ಟು 20 ಲಕ್ಷ ವ್ಯವಹಾರ ಇದೇ ಕಾರ್ಯದಿಂದ ನಡೆಸಿದೆ.

Advertisement
Advertisement
Advertisement

ಇಲ್ಲಿ ಇದಕ್ಕಾಗಿಯೇ 22 ಜನ ಕೆಲಸ ಮಾಡಿದ್ದಾರೆ. ಪಿಂಗಾರ ಸಂಸ್ಥೆಯ ವತಿಯಿಂದಲೇ ಖಾಯಂ ಆಗಿರುವ 12 ಜನ ಇದ್ದರೆ ಉಳಿದವರೆಲ್ಲಾ ಅಗತ್ಯ ಇದ್ದಾಗ ನೆರವಾಗುವ ತಂಡ. ದೋಟಿ ಹಾಗೂ ಪಂಪ್‌ ಸೇರಿದಂತೆ ಸುಮಾರು 10 ಲಕ್ಷ ರೂಪಾಯಿ ದೋಟಿಯ ಜಾಬ್‌ ವರ್ಕ್‌ ತಂಡಕ್ಕೆ ವಿನಿಯೋಗಿಸಿದ ಪಿಂಗಾರ ಸಂಸ್ಥೆ ಈ ವರ್ಷ ಮೊದಲ ಹೆಜ್ಜೆಯಲ್ಲಿ 20 ಲಕ್ಷ ವ್ಯವಹಾರ ಮಾಡಿದೆ. ವಿಟ್ಲ, ಪುಣಚ, ಪುತ್ತೂರು ಸೇರಿದಂತೆ ಕಾಸರಗೋಡು, ಕಡಬ ಪ್ರದೇಶದ ಕೆಲವು ಅಡಿಕೆ ಬೆಳೆಗಾರರ ತೋಟಗಳಿಗೆ ತೆರಳಿ ಔಷಧಿ ಸಿಂಪಡಣೆ ಹಾಗೂ ಅಡಿಕೆ ಕೊಯ್ಲು ಮಾಡಿದ್ದಾರೆ. ಒಟ್ಟು 8 ದೋಟಿ ಬಳಕೆಯಾಗಿದೆ. ತೀರಾ ಬೇಡಿಕೆ ಇದ್ದಾಗ ಬಾಡಿಗೆಗೆ ಪಡೆದು 11 ದೋಟಿಯವರೆಗೂ ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಅಡಿಕೆ ಔಷಧಿ ಸಿಂಪಡಣೆಯ  ಜಾಬ್‌ ವರ್ಕ್‌ ಮೂಲಕ ಯಶಸ್ವಿಯಾದ ಪಿಂಗಾರ ಸಂಸ್ಥೆ ಈಗ ಮಾದರಿಯಾಗಿದೆ.

Advertisement
Advertisement
ಕಳೆದ ಮಾರ್ಚ್‌ ತಿಂಗಳಿನಿಂದ ಅಡಿಕೆ ಬೆಳೆಗಾರರ ಹಿತಕ್ಕಾಗಿ, ಔಷಧಿ ಸಿಂಪಡಣೆಯ ಸಮಸ್ಯೆ ನಿವಾರಣೆಗೆ ಪಿಂಗಾರ ಸಂಸ್ಥೆಯು ತಂಡವನ್ನು ರಚನೆ ಮಾಡಿ ಪೈಬರ್‌ ದೋಟಿಯ ಮೂಲಕ ಕೆಲಸ ಆರಂಭಿಸಿದೆ. ಈಗಾಗಲೇ 20 ಲಕ್ಷ ವ್ಯವಹಾರ ದೋಟಿಯ ಮೂಲಕ ಸಂಸ್ಥೆ ನಡೆಸಿದೆ ಎನ್ನುತ್ತಾರೆ ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ.[/su_quote]

 

Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಅಡಿಕೆಗೆ ಔಷಧಿ ಸಿಂಪಡಣೆ ಜಾಬ್‌ ವರ್ಕ್‌ | ಅರಳಿದ “ಪಿಂಗಾರ” ಸಂಸ್ಥೆ | 7 ತಿಂಗಳಲ್ಲಿ 20 ಲಕ್ಷ ವ್ಯವಹಾರ |"

Leave a comment

Your email address will not be published.


*