2024-25 ರಿಂದ 2028-29ರ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ – 4ರ ಅನುಷ್ಠಾನಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.ಯೋಜನೆಯ ಒಟ್ಟು ವೆಚ್ಚ 70 ಸಾವಿರದ 125 ಕೋಟಿ ರೂಪಾಯಿ ಆಗಿದೆ.
ಸಂಪುಟ ಸಭೆಯ ಬಳಿಕ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು. ಈ ಯೋಜನೆಯಡಿ ಅರ್ಹ 25 ಸಾವಿರ ರಸ್ತೆ ಸಂಪರ್ಕವಿಲ್ಲದ ವಸತಿಗಳಿಗೆ ಹೊಸ ಸಂಪರ್ಕ ಕಲ್ಪಿಸಲು 62 ಸಾವಿರದ 500 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದರು. ಇದು 40 ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ತಿಳಿಸಿದರು. ರಸ್ತೆಗಳು ಅಗತ್ಯವಿರುವ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ದೂರದ ಗ್ರಾಮೀಣ ಪ್ರದೇಶಗಳ ಪರಿವರ್ತನೆಗೆ ವೇಗವರ್ಧಕಗಳ ಪಾತ್ರ ವಹಿಸುತ್ತವೆ. ವಾಸಸ್ಥಳಗಳನ್ನು ಹತ್ತಿರದ ಸರ್ಕಾರಿ ಶೈಕ್ಷಣಿಕ, ಆರೋಗ್ಯ, ಮಾರುಕಟ್ಟೆ, ಬೆಳವಣಿಗೆ ಕೇಂದ್ರಗಳನ್ನು ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ರಸ್ತೆಯೊಂದಿಗೆ ಸಂಪರ್ಕಿಸಲಾಗುವುದು. ಯೋಜನೆಯಡಿ, ರಸ್ತೆ ಜೋಡಣೆ ಯೋಜನೆಯನ್ನು PM ಗತಿ ಶಕ್ತಿ ಪೋರ್ಟಲ್ ಮೂಲಕ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…