ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 23ನೇ ಕಂತಿನ ಆರ್ಥಿಕ ನೆರವನ್ನು ಜೂನ್ 20ರಂದು ಬಿಡುಗಡೆ ಮಾಡಲಾಗುತ್ತಿದೆ.
ಪ್ರಧಾನಮಂತ್ರಿ ಅವರು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ದೇಶದ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಹಣ ಜಮೆ ಮಾಡಲಿದ್ದಾರೆ. ಈ ದಿನವನ್ನು “PM-KISAN ಉತ್ಸವ ದಿವಸ್” ಎಂದು ಆಚರಿಸಲಾಗುತ್ತಿದೆ.
ಕರ್ನಾಟಕದ ರೈತರಿಗೆ ₹830.832 ಕೋಟಿ : 23ನೇ ಕಂತಿನ ಹಣ ಬಿಡುಗಡೆ ವೇಳೆ ಕರ್ನಾಟಕ ರಾಜ್ಯದ 41,54,160 ಫಲಾನುಭವಿ ರೈತರಿಗೆ ಒಟ್ಟು ₹830.832 ಕೋಟಿ ಆರ್ಥಿಕ ನೆರವು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ.
ಈ ಯೋಜನೆಯಡಿ ಪ್ರತಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ತಲಾ ₹2,000ರಂತೆ ಮೂರು ಸಮಾನ ಕಂತುಗಳಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
2019ರಿಂದ ಯೋಜನೆ ಜಾರಿ : ಕರ್ನಾಟಕದಲ್ಲಿ ಫೆಬ್ರವರಿ 2019ರಿಂದ PM-KISAN ಯೋಜನೆ ಜಾರಿಯಲ್ಲಿದೆ. 2019ರ ಫೆಬ್ರವರಿ 1ರ ಅನ್ವಯ ಸಾಗುವಳಿ ಭೂಮಿ ಹೊಂದಿರುವ ಅರ್ಹ ರೈತ ಕುಟುಂಬಗಳು (ಗಂಡ, ಹೆಂಡತಿ ಹಾಗೂ ಅಪ್ರಾಪ್ತ ಮಕ್ಕಳು) ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಕೃಷಿ ಚಟುವಟಿಕೆಗಳ ನಿರ್ವಹಣೆ, ಬಿತ್ತನೆ, ಗೊಬ್ಬರ ಖರೀದಿ, ಕಾರ್ಮಿಕ ವೆಚ್ಚ ಸೇರಿದಂತೆ ವಿವಿಧ ಕೃಷಿ ಅವಶ್ಯಕತೆಗಳಿಗೆ ಈ ನೆರವು ರೈತರಿಗೆ ಆರ್ಥಿಕ ಬೆಂಬಲ ಒದಗಿಸುತ್ತಿದೆ.
ರೈತರಿಗೆ ಸಕಾಲಿಕ ನೆರವು : ಪ್ರಧಾನ ಮಂತ್ರಿಗಳ ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ರಾಜ್ಯದ ಲಕ್ಷಾಂತರ ರೈತ ಕುಟುಂಬಗಳಿಗೆ ಕೃಷಿ ಚಟುವಟಿಕೆಗಳ ನಿರ್ವಹಣೆಗೆ ಅಗತ್ಯವಿರುವ ಹಣಕಾಸಿನ ನೆರವು ಸಕಾಲದಲ್ಲಿ ದೊರೆಯಲಿದ್ದು, ಕೃಷಿ ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗಲಿದೆ.
The 23rd installment of the PM-KISAN scheme will be released on June 20, with the Prime Minister transferring funds directly to farmers’ bank accounts through DBT. In Karnataka, 41.54 lakh beneficiary farmers will receive a total assistance of ₹830.832 crore under the scheme, which provides ₹6,000 annually in three installments.
ದೇಶದಲ್ಲಿ ಮುಂಗಾರು ಚಟುವಟಿಕೆ ದುರ್ಬಲವಾಗಿದ್ದು, ಜೂನ್ 18ರವರೆಗೆ ಮಳೆ ಕೊರತೆ ಶೇ.40ಕ್ಕೆ ಏರಿಕೆಯಾಗಿದೆ.…
ಇ-ವೇ ಬಿಲ್ ಮತ್ತು ಸಾರಿಗೆ ದಾಖಲೆಗಳ ಕೊರತೆಯಿಂದ ₹2.22 ಕೋಟಿ ಮೌಲ್ಯದ 33.6…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,570 ಅಭ್ಯರ್ಥಿಗಳು ನೀಟ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಮಂಗಳೂರಿನ 12…
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಗೊಬ್ಬರ ಸರಬರಾಜು ವ್ಯವಸ್ಥೆಯಲ್ಲಿ ಅನಿಶ್ಚಿತತೆ ಉಂಟಾಗಿದ್ದು, ಭಾರತದಲ್ಲಿ…
ಕೇರಳದಲ್ಲಿ ಕೊಬ್ಬರಿ ದರ MSP ಗಿಂತ ಕೆಳಗೆ ಇಳಿದಿದ್ದು, ರೈತರು ಪ್ರತಿ ಕೆ.ಜಿಗೆ…
ಹವಾಮಾನ ಬದಲಾವಣೆಯಿಂದ ಎಲ್ ನಿನೋ ಮತ್ತು ಲಾ ನಿನಾ ಘಟನೆಗಳ ವರ್ತನೆ ಬದಲಾಗುತ್ತಿದ್ದು,…