ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 24ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಗುಜರಾತ್‌ನ ಬನಾಸ್ಕಾಂಠಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ₹19,000 ಕೋಟಿ ಮೊತ್ತದ ಆರ್ಥಿಕ ನೆರವನ್ನು ರೈತರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ದೇಶದ 9.34 ಕೋಟಿಗೂ ಅಧಿಕ ಅರ್ಹ ರೈತರಿಗೆ ಈ ಕಂತಿನ ಹಣ ತಲುಪಲಿದೆ. ಯೋಜನೆಯ ನಿಯಮದಂತೆ ಪ್ರತಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ತಲಾ ₹2,000 ನೇರವಾಗಿ ಜಮೆಯಾಗಲಿದೆ. ಒಟ್ಟು ₹18,690 ಕೋಟಿಗೂ ಅಧಿಕ ಮೊತ್ತವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.
ನೇರವಾಗಿ ಬ್ಯಾಂಕ್ ಖಾತೆಗೆ ಹಣ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ತಲಾ ₹2,000ರಂತೆ ಮೂರು ಸಮಾನ ಕಂತುಗಳಲ್ಲಿ ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.
ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬೀಜ, ಗೊಬ್ಬರ ಸೇರಿದಂತೆ ವಿವಿಧ ಕೃಷಿ ವೆಚ್ಚಗಳನ್ನು ನಿರ್ವಹಿಸಲು ರೈತರಿಗೆ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. 24ನೇ ಕಂತಿನ ಹಣ ಬಿಡುಗಡೆಯಿಂದ ದೇಶದ ಕೋಟ್ಯಂತರ ರೈತ ಕುಟುಂಬಗಳಿಗೆ ಆರ್ಥಿಕ ನೆರವು ದೊರೆಯಲಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
Prime Minister Narendra Modi has released the 24th instalment of the PM-KISAN Samman Nidhi scheme at an event in Banaskantha, Gujarat. More than 9.34 crore eligible farmers across India are set to receive ₹2,000 each directly into their bank accounts. The total transfer exceeds ₹18,690 crore, with the government announcing an overall release of approximately ₹19,000 crore. Under the scheme, eligible farmer families receive ₹6,000 annually in three instalments of ₹2,000 each.
ಅರಬ್ಬಿ ಸಮುದ್ರದ ತಿರುವಿಕೆ ಹಾಗೂ ಗಾಳಿಯ ಚಲನೆಯಲ್ಲಿನ ಬದಲಾವಣೆಯಿಂದ ನವೆಂಬರ್ 1ರಿಂದ ಕರ್ನಾಟಕದ…
ರಾಜ್ಯದಲ್ಲಿ ಅಕ್ರಮ ಪಡಿತರ ಅಕ್ಕಿ ಮತ್ತು ಆಹಾರ ಧಾನ್ಯಗಳ ಕಳ್ಳಸಾಗಣೆ ವಿರುದ್ಧ ನಡೆಸಿದ…
ಅಸ್ಸಾಂನ ನ್ಯೂ ಬೊಂಗೈಗಾಂವ್ ರೈಲು ನಿಲ್ದಾಣದಲ್ಲಿ ಮ್ಯಾನ್ಮಾರ್ ಮೂಲದ್ದೆಂದು ಶಂಕಿಸಲಾದ ಸುಮಾರು 24…
ತಮಿಳುನಾಡಿನ ವಿಒಸಿ ಬಂದರಿನಲ್ಲಿ ತೆರಿಗೆ ವಂಚನೆ ಆರೋಪದಡಿ 25 ಟನ್ ಹಸಿ ಅಡಿಕೆಯನ್ನು…
2027ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ…
ಬರಪೀಡಿತ ಪ್ರದೇಶಗಳ ಅರ್ಹ ರೈತರಿಗೆ ತಲಾ ₹2,500 ಪರಿಹಾರ ನೀಡಲು ರಾಜ್ಯ ಸರ್ಕಾರ…