ಒಮಿಕ್ರಾನ್ ವಿರುದ್ಧ ಹೋರಾಡಲು “ಸ್ವಯಂಅರಿವು – ಸ್ವಯಂಶಿಸ್ತು” ಅವಶ್ಯಕತೆಯಿದೆ ಎಂದ ಪ್ರಧಾನಿ ನರೇಂದ್ರ ಮೋದಿ |

December 27, 2021
10:42 AM

ಒಮಿಕ್ರಾನ್‌ ಹೊಸ ರೂಪಾಂತರವನ್ನು  ತಡೆಗಟ್ಟಲು ಭಾರತೀಯರೆಲ್ಲರೂ ಒಂದಾಗಿ ಮತ್ತೆ ಹೋರಾಟ ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು  ಮನ್ ಕಿ ಬಾತ್ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಈ ಮನ್ ಕಿ ಬಾತ್ ಕಾರ್ಯಕ್ರಮದ 84 ನೇ ಸಂಚಿಕೆ ಮತ್ತು ವರ್ಷದ ಕೊನೆಯ ಆವೃತ್ತಿಯಲ್ಲಿ ಬಹಳಷ್ಟು ಸಂಗತಿಗಳನ್ನು  ಹಂಚಿಕೊಂಡರು.  ಒಮಿಕ್ರಾನ್ ವಿರುದ್ಧ ಹೋರಾಡಲು ಸ್ವಯಂ-ಅರಿವು ಮತ್ತು ಸ್ವಯಂ-ಶಿಸ್ತಿನ ಶಕ್ತಿಯು ಅವಶ್ಯಕತೆಯಿದೆ ಎಂದ ಅವರು ಈಗ ಕೊರೋನಾವು ಒಮಿಕ್ರಾನ್‌ ಮೂಲಕ ನಮ್ಮ ಮನೆ ಬಾಗಿಲು ತಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಸಾಂಕ್ರಾಮಿಕ ರೋಗದ ನಡುವೆ ಭಾರತವು ಕುಟುಂಬವಾಗಿ ಒಟ್ಟಿಗೆ ನಿಂತಿದೆ ಎಂದು ಮೋದಿ ಹೇಳಿದರು.

ದೇಶದ ವಿಜ್ಞಾನಿಗಳು ರೂಪಾಂತರಿ ಒಮಿಕ್ರಾನ್‌ನ ಬಗ್ಗೆ ನಿರಂತರ ಅಧ್ಯಯನವನ್ನು ನಡೆಸುತ್ತಿದ್ದಾರೆ. ಆದುದರಿಂದ ಈ ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಲು ನಾಗರಿಕರಾಗಿ ನಮ್ಮ ಪ್ರಯತ್ನವು ಮುಖ್ಯವಾಗಿದೆ. ದೇಶವನ್ನುದ್ದೇಶಿಸಿ ಶನಿವಾರ ಮಾತನಾಡಿದ್ದ ಮೋದಿ, ದೇಶದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3 ರಿಂದ ಕೋವಿಡ್ ತಡೆ ಲಸಿಕೆ ನೀಡಲಾಗುವುದು. ಮಾತ್ರವಲ್ಲದೆ ದೇಶದ ಮುಂಚೂಣಿ ಕಾರ್ಯಕರ್ತರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಹೇಳಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ
October 4, 2026
6:37 AM
by: ದ ರೂರಲ್ ಮಿರರ್.ಕಾಂ
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
October 4, 2026
6:31 AM
by: ದ ರೂರಲ್ ಮಿರರ್.ಕಾಂ
ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?
October 3, 2026
10:46 AM
by: ದ ರೂರಲ್ ಮಿರರ್.ಕಾಂ
ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌
October 3, 2026
10:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror