ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ವಿನಾಶದ ಅಂಶಗಳಲ್ಲಿ ಒಂದಾಗಿದೆ. ನಮ್ಮ ಸಾಗರಗಳು ಮತ್ತು ಕರಾವಳಿಗಳಲ್ಲಿ ಕಂಡುಬರುವ ಹೆಚ್ಚಿನ ಸಮುದ್ರ ಕಸಕ್ಕೆ ಇದು ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಹೇಳಿದೆ. ತೆಳುವಾದ, ಏಕ-ಬಳಕೆಯ ಚೀಲಗಳು ಪ್ರಾಣಿಗಳು ಸಿಕ್ಕಿಹಾಕಿಕೊಂಡಾಗ ಅಥವಾ ಪ್ಲಾಸ್ಟಿಕ್ ಅನ್ನು ಸೇವಿಸಿದಾಗ ಜಲಚರಗಳಿಗೆ ಹಾನಿ ಮಾಡುತ್ತವೆ ಮತ್ತು ಅವುಗಳ ಸಾವಿಗೆ ಕಾರಣವಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳುತ್ತದೆ.
ಪ್ಲಾಸ್ಟಿಕ್ ಚೀಲಗಳ ನಿಷೇಧ ಮತ್ತು ದಂಡ ವಿಧಿಸುವುದು ಈ ಸಮಸ್ಯೆಯನ್ನು ನಿವಾರಿಸಲು ಕ್ರಮವಾಗುತ್ತಿದೆ.ಈ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ನೀರನ್ನು ತಲಪುವುದನ್ನು ತಡೆಯುವ ಗುರಿ ಇಲ್ಲಿ ಹೊಂದಲಾಗಿದೆ. ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಈ ನೀತಿಗಳು ವ್ಯಾಪಕವಾಗಿ ಪರಿಣಾಮಕಾರಿಯಾಗಿವೆ ಎಂದು ಹೇಳಿದೆ.
ಪ್ಲಾಸ್ಟಿಕ್ ಚೀಲಗಳ ನಿಷೇಧ ಮತ್ತು ತೆರಿಗೆಗಳ ಪರಿಣಾಮಗಳ ಬಗ್ಗೆ ನಿರ್ಣಯಿಸಲು ಸಂಶೋಧಕರು 45,000 ಕ್ಕೂ ಹೆಚ್ಚು ತೀರ ಪ್ರದೇಶಗಳ ಶುಚಿಗೊಳಿಸುವಿಕೆಯಿಂದ ರಾಷ್ಟ್ರವ್ಯಾಪಿ ಡೇಟಾಗಳನ್ನು ಪರಿಶೀಲಿಸಿದರು. ಅವರು 2017 ಮತ್ತು 2023 ರ ನಡುವೆ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಜಾರಿಗೆ ತಂದ ನೂರಾರು ರಾಜ್ಯ ಮತ್ತು ಸ್ಥಳೀಯ ಪ್ಲಾಸ್ಟಿಕ್ ನೀತಿಗಳನ್ನು ಗಮನಿಸಿದರು. ಈ ಮಾದರಿಗಳನ್ನು ಇತರ ಪ್ರದೇಶಗಳಿಗೆ ಹೋಲಿಸಿದರು. ಪ್ಲಾಸ್ಟಿಕ್ ಚೀಲಗಳ ನೀತಿಗಳು – ಪಾಲಿಸಿಗಳು ಇಲ್ಲದ ಪ್ರದೇಶಗಳಿಗೆ ಹೋಲಿಸಿದರೆ ಸಂಗ್ರಹಿಸಿದ ಒಟ್ಟು ವಸ್ತುಗಳ ಪ್ರಮಾಣದಲ್ಲಿ ಪ್ಲಾಸ್ಟಿಕ್ ಚೀಲಗಳ ಪಾಲು 25% ರಿಂದ 47% ರಷ್ಟು ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಪ್ಲಾಸ್ಟಿಕ್ ಚೀಲಗಳ ಮೇಲಿನ ನೀತಿಗಳೇ ಪ್ಲಾಸ್ಟಿಕ್ ನಿಯಂತ್ರಣ ಮಾಡಲು ಪರಿಣಾಮಕಾರಿ ಎಂಬುದಕ್ಕೆ ಪುರಾವೆಗಳಿವೆ.ಹೀಗಾಗಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಸರಿಯಾದ ನೀತಿ ನಿಯಮಗಳೇ ಅಗತ್ಯವಾಗಿದೆ.ಪರಿಸರ ಉಳಿವಿನ ದೃಷ್ಟಿಯಿಂದ ಇಂತಹದ್ದೊಂದು ನೀತಿಗಳ ಅಗತ್ಯ ಇದೆ ಎನ್ನುವುದು ವರದಿಯ ಫಲಿತಾಂಶ.


