ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸತ್ಯ-ಅಸತ್ಯ, ಪ್ರಚಾರ-ಅಪಪ್ರಚಾರ, ಜ್ಞಾನ ಮತ್ತು ಅಜ್ಞಾನದ ನಡುವಿನಲ್ಲಿ ಚುನಾವಣೆಯಾಗಿದ್ದು, ಕೊನೆಗೂ ಮತದಾರರು ಜ್ಞಾನದ ಪರವಾಗಿ ನಿಂತಿದ್ದಾರೆ. ಮಾತ್ರವಲ್ಲ ಮಂಗಳೂರು ಕ್ಷೇತ್ರದ ಜನ ಸತತ ಐದನೇ ಬಾರಿಗೆ ನನ್ನನ್ನ ಗೆಲ್ಲಿಸಿದ್ದಾರೆ. ಆದುದರಿಂದ ಅಭಿಮಾನಿಗಳಿಗೆ ಹಿತೈಷಿಗಳಿಗೆ ಕೃತಜ್ಞತೆಗಳು ಎಂದು ಮಂಗಳೂರು ಕ್ಷೇತ್ರದ ವಿಜಯಿ ಅಭ್ಯರ್ಥಿ ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ಕರಾವಳಿಯಲ್ಲಿ ಅಪಪ್ರಚಾರದ ಮೂಲಕವೇ ಮುಗ್ಧ ಜನರನ್ನು ವಂಚಿಸಲಾಗಿದೆ. ನನ್ನ ಪಕ್ಷದಲ್ಲೂ ಅಪಪ್ರಚಾರಗಳು ನಡೆಯುತ್ತದೆ. ಒಂದು ವೇಳೆ ಅಪಪ್ರಚಾರ ಇಲ್ಲದಿದ್ದರೆ ನಾನು ಇನ್ನು ಹೆಚ್ಚಿನ ಮತದಾನದಲ್ಲಿ ಗೆಲ್ಲುತ್ತಿದ್ದೆ, ಇನ್ನು ಮುಂದೆ ನಾವು ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ಮತ್ತು ಸಹೋರತೆಗೆ ಮೊದಲ ಅದ್ಯತೆ ಕೊಡುತ್ತೇವೆ ಎಂದು ಹೇಳಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel