ಕಳೆದ 4 ವರ್ಷದ ಅವಧಿಯಲ್ಲಿ ಇಡೀ ದೇಶದಲ್ಲಿ 170 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಪಕ್ಷಾಂತರ ಮಾಡಿದ್ದಾರೆ, 18 ಬಿಜೆಪಿ ಶಾಸಕರು ಬೇರೆ ಪಕ್ಷಕ್ಕೆ ತೆರಳಿದ್ದಾರೆ. ಹೀಗೊಂದು ವರದಿಯನ್ನು ಎಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ADR) ಎಂಬ ಸಂಸ್ಥೆ ಅಧ್ಯಯನ ವರದಿಯನ್ನು ಬಹಿರಂಗ ಮಾಡಿದೆ.
2016-20ರ ನಡುವೆ ನಡೆದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 170 ಶಾಸಕರು ಮತ್ತೊಂದು ಪಕ್ಷಕ್ಕೆ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದೇ ಅವಧಿಯಲ್ಲಿ 18 ಬಿಜೆಪಿ ಶಾಸಕರು ಚುನಾವಣೆಗೆ ಬೇರೆ ಪಕ್ಷದಿಂದ ಸ್ಫರ್ಧೆ ಮಾಡಿದ್ದಾರೆ. ಎಲ್ಲಾ ಕಡೆಯಲ್ಲೂ ಅಸಮಾಧಾನಗಳು ಹಾಗೂ ಅಧಿಕಾರದ ಲಾಲಸೆ ಕಾರಣ ಎಂಬುದೂ ಇಲ್ಲಿ ಸ್ಪಷ್ಟವಾಗಿದೆ.
ಇಡೀ ದೇಶದಲ್ಲಿ 4 ವರ್ಷಗಳಲ್ಲಿ ವಿವಿಧ ಚುನಾವಣೆಗಳ ಸಂದರ್ಭ ಪ್ರಮುಖರಾದ ಸುಮಾರು 182 ಮಂದಿ ಬಿಜೆಪಿಗೆ ಸೇರ್ಪಡೆಗೊಂಡವು, 38 ಮಂದಿ ಕಾಂಗ್ರೆಸ್ ಸೇರಿಕೊಂಡರು. 25 ಮಂದಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಗೆ ಸೇರ್ಪಡೆಗೊಂಡಿವೆ ಎಂದು ಇನ್ನೊಂದು ವರದಿ ತಿಳಿಸಿದೆ.
ಈ ರೀತಿಯ ಪಕ್ಷಾಂತರ ಹಾಗೂ ಅಧಿಕಾರದ ಲಾಲಸೆಯ ಕಾರಣಗಳಿಂದ ಹಲವು ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಅಧಿಕಾರ ಕಳೆದಕೊಂಡದ್ದು ಹಾಗೂ ಬಹುಮತವಿಲ್ಲದೆ ಸರಕಾರದ ರಚನೆಗೆ ತೊಡಕು, ಅತಂತ್ರ ರಾಜಕೀಯ ವ್ಯವಸ್ಥೆ ಕಂಡುಬಂದಿರುವುದು ಕೂಡಾ ಗಮನಾರ್ಹವಾದ ಸಂಗತಿಯಾಗಿತ್ತು. ಈ ಅಂತತ್ರ ರಾಜಕೀಯ ವ್ಯವಸ್ಥೆಯು ಜನರಿಗೇ ಮತ್ತೆ ತೊಡಕಾಗುವುದು ಕೂಡಾ ಸ್ಪಷ್ಟವ ಆಗಿ ಕಾಣುತ್ತಿದೆ.
ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…
ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್ ಅವರು ಇಲ್ಲಿ ವಿವರ…
ಪ್ರಯಾಗ್ ರಾಜ್ ತಲಪುವ ವೇಳೆ ಆಗುತ್ತಿರುವ ಸಂತಸದ ಬಗ್ಗೆ ಸುರೇಶ್ಚಂದ್ರ ಅವರು ಬರೆದಿದ್ದಾರೆ…
ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ…
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…