ಭಾರತದಿಂದ 11,000 ಮೆಟ್ರಿಕ್‌ ಟನ್ ಅಕ್ಕಿ ಕೊಲಂಬೊಗೆ‌ ರವಾನೆ |

ಶ್ರೀಲಂಕಾ ದೇಶವು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವಾಗ ನೆರೆಯ ರಾಷ್ಟ್ರವಾಗಿ ಭಾರತವು  ಗರಿಷ್ಠ ಸಹಾಯವನ್ನು ನೀಡುತ್ತಿದೆ. ಇದೀಗ ಶ್ರೀಲಂಕಾದ ಹೊಸ ವರ್ಷಾಚರಣೆಗೆ ಮುನ್ನ ಭಾರತದಿಂದ 11,000 ಮೆಟ್ರಿಕ್‌ ಟನ್‌ ಅಕ್ಕಿಯ ದಾಸ್ತಾನು ಕೊಲಂಬೊ ತಲುಪಿದೆ.

Advertisement
Advertisement

ಶ್ರೀಲಂಕಾದಲ್ಲಿನ ಭಾರತೀಯ ಹೈಕಮಿಷನ್‌ನ ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿ ಎಲ್ಡೋಸ್ ಮ್ಯಾಥ್ಯೂ ಪುನ್ನೋಸ್  ಸುದ್ದಿಸಂಸ್ಥೆ ಎಎನ್‌ಐಗೆ   ಮಾಹಿತಿ ನೀಡಿದರು. “ಶ್ರೀಲಂಕಾದಲ್ಲಿ ಹೊಸ ವರ್ಷಾಚರಣೆಗೆ ಮುನ್ನ ಭಾರತದಿಂದ 11000 ಮೆಟ್ರಿಕ್‌ ಟನ್ ಅಕ್ಕಿ  ಚೆನ್ ಗ್ಲೋರಿ ಹಡಗಿನ ಮೂಲಕ ಕೊಲಂಬೊ ತಲುಪಿದೆ.  ಆಹಾರ ಔಷಧಿಗಳು ಮತ್ತು ಇತರ ಅಗತ್ಯ ಸರಕುಗಳೊಂದಿಗೆ ಭಾರತವು ಸದಾ ಶ್ರೀಲಂಕಾದ ನೆರವಿಗಿದೆ. ಭಾರತವು ಇಂಧನವನ್ನು ಖರೀದಿಸಲು 500 ಮಿಲಿಯನ್ ಡಾಲರ್ ಸಾಲವನ್ನು ವಿಸ್ತರಿಸಿದೆ, ಇದರ ಅಡಿಯಲ್ಲಿ ಸುಮಾರು 2,70,000 ಮೆಟ್ರಿಕ್‌ ಟನ್‌ ಪೆಟ್ರೋಲ್, ಡೀಸೆಲ್ ಈಗಾಗಲೇ ಶ್ರೀಲಂಕಾಕ್ಕೆ ಬಂದಿದೆ ಎಂದು ಅವರು ಹೇಳಿದರು.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಟ್ರೇಡಿಂಗ್ ಕಾರ್ಪೊರೇಶನ್‌ನ ಅಧ್ಯಕ್ಷ ಯೋಗ ಪೆರೆರಾ, ಅನೇಕ ದೇಶಗಳು ಶ್ರೀಲಂಕಾಗೆ ಸಹಾಯ ಮಾಡಲು ಮುಂದೆ ಬಂದಿವೆ ಮತ್ತು ಮಾತುಕತೆಗಳು ನಡೆಯುತ್ತಿವೆ. ಈ ಸಮಯದಲ್ಲಿ ಶ್ರೀಲಂಕಾಕ್ಕೆ ಸಹಾಯ ಮಾಡಲು ಭಾರತವು ಕ್ರೆಡಿಟ್ ಲೈನ್‌ನಲ್ಲಿ ಸರಕುಗಳನ್ನು ತಲುಪಿಸುವ ಮೊದಲ ದೇಶವಾಗಿದೆ ಎಂದು ಹೇಳಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಭಾರತದಿಂದ 11,000 ಮೆಟ್ರಿಕ್‌ ಟನ್ ಅಕ್ಕಿ ಕೊಲಂಬೊಗೆ‌ ರವಾನೆ |"

Leave a comment

Your email address will not be published.


*