ಶ್ರೀಲಂಕಾ ದೇಶವು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವಾಗ ನೆರೆಯ ರಾಷ್ಟ್ರವಾಗಿ ಭಾರತವು ಗರಿಷ್ಠ ಸಹಾಯವನ್ನು ನೀಡುತ್ತಿದೆ. ಇದೀಗ ಶ್ರೀಲಂಕಾದ ಹೊಸ ವರ್ಷಾಚರಣೆಗೆ ಮುನ್ನ ಭಾರತದಿಂದ 11,000 ಮೆಟ್ರಿಕ್ ಟನ್ ಅಕ್ಕಿಯ ದಾಸ್ತಾನು ಕೊಲಂಬೊ ತಲುಪಿದೆ.
ಶ್ರೀಲಂಕಾದಲ್ಲಿನ ಭಾರತೀಯ ಹೈಕಮಿಷನ್‌ನ ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿ ಎಲ್ಡೋಸ್ ಮ್ಯಾಥ್ಯೂ ಪುನ್ನೋಸ್ ಸುದ್ದಿಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದರು. “ಶ್ರೀಲಂಕಾದಲ್ಲಿ ಹೊಸ ವರ್ಷಾಚರಣೆಗೆ ಮುನ್ನ ಭಾರತದಿಂದ 11000 ಮೆಟ್ರಿಕ್ ಟನ್ ಅಕ್ಕಿ ಚೆನ್ ಗ್ಲೋರಿ ಹಡಗಿನ ಮೂಲಕ ಕೊಲಂಬೊ ತಲುಪಿದೆ. ಆಹಾರ ಔಷಧಿಗಳು ಮತ್ತು ಇತರ ಅಗತ್ಯ ಸರಕುಗಳೊಂದಿಗೆ ಭಾರತವು ಸದಾ ಶ್ರೀಲಂಕಾದ ನೆರವಿಗಿದೆ. ಭಾರತವು ಇಂಧನವನ್ನು ಖರೀದಿಸಲು 500 ಮಿಲಿಯನ್ ಡಾಲರ್ ಸಾಲವನ್ನು ವಿಸ್ತರಿಸಿದೆ, ಇದರ ಅಡಿಯಲ್ಲಿ ಸುಮಾರು 2,70,000 ಮೆಟ್ರಿಕ್ ಟನ್ ಪೆಟ್ರೋಲ್, ಡೀಸೆಲ್ ಈಗಾಗಲೇ ಶ್ರೀಲಂಕಾಕ್ಕೆ ಬಂದಿದೆ ಎಂದು ಅವರು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಟ್ರೇಡಿಂಗ್ ಕಾರ್ಪೊರೇಶನ್‌ನ ಅಧ್ಯಕ್ಷ ಯೋಗ ಪೆರೆರಾ, ಅನೇಕ ದೇಶಗಳು ಶ್ರೀಲಂಕಾಗೆ ಸಹಾಯ ಮಾಡಲು ಮುಂದೆ ಬಂದಿವೆ ಮತ್ತು ಮಾತುಕತೆಗಳು ನಡೆಯುತ್ತಿವೆ. ಈ ಸಮಯದಲ್ಲಿ ಶ್ರೀಲಂಕಾಕ್ಕೆ ಸಹಾಯ ಮಾಡಲು ಭಾರತವು ಕ್ರೆಡಿಟ್ ಲೈನ್‌ನಲ್ಲಿ ಸರಕುಗಳನ್ನು ತಲುಪಿಸುವ ಮೊದಲ ದೇಶವಾಗಿದೆ ಎಂದು ಹೇಳಿದರು.
ಜನನ-ಮರಣ ಘಟನೆಗಳನ್ನು 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸೂಚನೆ.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿ ಮುಂದುವರಿಯುತ್ತಿದ್ದು, ಮಳೆಯ ಚಟುವಟಿಕೆ ಕಡಿಮೆಯಾಗಿದೆ. ಏಪ್ರಿಲ್ 15…
ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…
ರಸ್ತೆ ಬದಿ ತ್ಯಾಜ್ಯ ಎಸೆದ ಪ್ರಕರಣದಲ್ಲಿ ಅಂಗಡಿ ಮಾಲಿಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.…