ಅದೆಷ್ಟೋ ಮಕ್ಕಳು ಕೇವಲ ಬಿಸಿಯೂಟದ ಕಾರಣದಿಂದ ಶಾಲೆಗೆ ಬರುವುದು ಇದೆ. ಒಳ್ಳೆ ಊಟ ಸಿಗುತ್ತೆ, ಮೊಟ್ಟೆ ಸಿಗುತ್ತೆ, ಹಾಲು ಸಿಗುತ್ತೆ. ಕೆಲ ಮಕ್ಕಳಿಗೆ ಅದೇನೋ ಸಂಭ್ರಮ. ಆದರೆ ಇಲ್ಲೊಂದು ಶಾಲೆಯಲ್ಲಿ ಕಳೆದ 21 ವರ್ಷಗಳಿಂದ ಮಕ್ಕಳಿಗೆ ಬಿಸಿಯೂಟ ವೇ ಇರಲಿಲ್ಲ. ಸರ್ಕಾರದ ನಿರ್ಲಕ್ಷ್ಯವೂ, ಊರಿನ ಜನರ ಉದ್ದಟತನವೂ ತಿಳಿಯದು. ಆದರೆ ವಂಚಿತರಾಗಿದ್ದು ಶಾಲೆ ಮಕ್ಕಳು. ಇದೀಗ ಮತ್ತೆ ಆ ಶಾಲೆಯ ಮಕ್ಕಳಿಗೆ ಬಿಸಿಯೂಟ ಉಣ್ಣುವ ಭಾಗ್ಯ ಒದಗಿ ಬಂದಿದೆ.
ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬರೋಬ್ಬರಿ 21 ವರ್ಷಗಳ ಬಳಿಕ ಮಕ್ಕಳಿಗೆ ಬಿಸಿಯೂಟದ ಭಾಗ್ಯ ಒದಗಿಸಲಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಚೆನ್ನೂರ್ ಗ್ರಾಮ ದ ಶಾಲೆಯಲ್ಲಿ ಜಾತಿ ಸಂಘರ್ಷದಿಂದ ಬಿಸಿಯೂಟ ಬಂದ್ ಆಗಿತ್ತು. ಅಧಿಕಾರಿಗಳ ಸಂಧಾನದ ಬಳಿಕ ಬಿಸಿಯೂಟ ಕೊನೆಗೂ ಆರಂಭಗೊಂಡಿದೆ.
2002 ರಲ್ಲಿ ಬಿಸಿಯೂಟ ಸಹಾಯಕಿಯರ ನೇಮಕದ ವಿಚಾರದಲ್ಲಿ ಗಲಾಟೆ ನಡೆದಿತ್ತು. ಮೀಸಲಾತಿ ಪ್ರಕಾರ ಓರ್ವ ದಲಿತ ಮಹಿಳೆಗೆ ಅಡುಗೆ ಸಹಾಯಕಿ ಹುದ್ದೆಗೆ ತೆಗೆದುಕೊಳ್ಳಬೇಕಾಗಿತ್ತು. ಆದರೆ ದಲಿತರು ಮಾಡಿದ ಅಡುಗೆ ನಾವು ತಿನ್ನಬಾರದು ಎಂದು ತಗಾದೆ ತೆಗೆದಿದ್ದರು. ಇದೇ ಕಾರಣಕ್ಕೆ ಅಂದಿನಿಂದ ಶಾಲೆಯಲ್ಲಿ ಬಿಸಿಯೂಟ ಮಾಡಿರಲಿಲ್ಲ!
ಆದರೆ ನಿನ್ನೆ ಜಿಲ್ಲಾ ಅಕ್ಷರದಾಸೋಹದ ಅಧಿಕಾರಿಗಳು ಗ್ರಾಮಕ್ಕೆ ಭೇಡಿ ಎರಡೂ ಕಡೆಯವರಿಗೆ ಮನವೊಲಿಸಿದ್ದಾರೆ. ಬಳಿಕ ನಿನ್ನೆ ಸದ್ಯಕ್ಕೆ ವಿಶ್ವಗಂಗ ಸಂಸ್ಥೆಯ ಮೂಲಕ ಬಿಸಿಯೂಟ ವಿತರಣೆ ಮಾಡಲಾಗಿದೆ. ಮಕ್ಕಳು ಹಾಗೂ ಪೋಷಕರು 21 ವರ್ಷದ ಬಳಿಕ ಶಾಲೆಗೆ ಬಿಸಿಯೂಟ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 1 ರಿಂದ 5 ನೇ ತರಗತಿ ವರೆಗೆ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದಾಗಿದೆ. SDMC ರಚನೆ ಬಳಿಕ SDMC ತೀರ್ಮಾನದಂತೆ ಬಿಸಿಯೂಟ ಸಹಾಯಕಿಯರ ನೇಮಕ ಮಾಡಲಾಗುತ್ತೆ ಎಂದು ತಿಳಿದುಬಂದಿದೆ.
ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಾಗರಿಕರನ್ನು ಮತ್ತು…
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಂಭವನೀಯ ದಾಳಿಯ ಬಗ್ಗೆ…
ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ…
ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಮೇ 9…
ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490