ಮುಳ್ಳು ಹಂದಿ ಬೇಟೆ – ಗುಹೆಯೊಳಗೆ ಬಾಕಿಯಾದ ಇಬ್ಬರು ಕೂಲಿಕಾರ್ಮಿಕರು ಸಾವು

February 28, 2023
7:06 PM

ಬೇಟೆಯಾಡೋದು ಕಾನೂನಿಗೆ ವಿರುದ್ಧ ಎಂದು ತಿಳಿದಿದ್ದರು ಕಾಡು ಪ್ರಾಣಿಗಳನ್ನು ಮನಸ್ಸೋ ಇಚ್ಚೆ ಬೇಟೆಯಾಡುವ ಮಂದಿ ಅನೇಕರಿದ್ದಾರೆ. ಹೀಗೆ ಚಿಕ್ಕಮಗಳೂರಿನಲ್ಲಿ ಬೇಟೆಗೆಂದು ತೆರಳಿ ಇಬ್ಬರು ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮುಳ್ಳು ಹಂದಿ ಬೇಟೆಗೆ ತೆರಳಿದ್ದ ಇಬ್ಬರು ಕೂಲಿಕಾರ್ಮಿಕರು ಸುರಂಗದೊಳಗೆ ನುಗ್ಗಿದ ಪರಿಣಾಮ  ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಚಿಕ್ಕಮಗಳೂರಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮುಳ್ಳು ಹಂದಿ ಇದ್ದ ಸುರಂಗಕ್ಕೆ ಶಿಕಾರಿ ಮಾಡಲು ನುಗ್ಗಿ ಇಬ್ಬರು ಕೂಲಿಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಾದ ತಮಿಳುನಾಡು ಮೂಲದ ವಿಜಯ್ (28 ವರ್ಷ), ಶರತ್( 26 ವರ್ಷ) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ಚಿಕ್ಕಮಗಳೂರಿಗೆ ಕಾಳು ಮೆಣಸು ಕುಯ್ಯಲು ಬಂದಿದ್ದ ತಮಿಳುನಾಡಿನ ಕಾರ್ಮಿಕರು ಮುಳ್ಳು ಹಂದಿ ಶಿಕಾರಿ ಮಾಡಲು ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಕಾಳಿಕಟ್ಟೆ ಗುಡ್ಡದ ಗವಿಯಲ್ಲಿರುವ ಗುಡ್ಡಕ್ಕೆ ತೆರಳಿದ್ದರು. ಸುರಂಗದ ಪ್ರವೇಶ ದ್ವಾರಕ್ಕೆ ಹೊಗೆ ಹಾಕಿ ಇಬ್ಬರು ಒಳಗೆ ಹೋದಾಗ ಹೊಗೆಯಿಂದಾಗಿ ಉಸಿರಾಡಲು ಸಾಧ್ಯವಾಗದೆ ಗುಹೆಯೊಳಗೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಸುದ್ದಿ ತಿಳಿದು ಬಾಳೂರು ಸಬ್ಇನ್ಸ್ ಪೆಕ್ಟರ್ ಪವನ್ ಕುಮಾರ್ ಅವರು ಸ್ಥಳೀಯರ ನೆರವಿನಿಂದ ಗುಹೆಯೊಳಗೆ ಹೋಗಿ ಶವಗಳನ್ನು ಹೊರತೆಗೆದಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಬಾಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ ಅವಶೇಷ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?
September 2, 2026
10:52 PM
by: ದ ರೂರಲ್ ಮಿರರ್.ಕಾಂ
ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ
September 2, 2026
7:32 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ
September 2, 2026
2:30 PM
by: ಸಾಯಿಶೇಖರ್ ಕರಿಕಳ
ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ
September 2, 2026
7:49 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror